ರಮೇಶ್ ಕುಮಾರ್ ಮೇಲ್ಮನವಿ ವಜಾ ; ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಲು ಆದೇಶ
ರಮೇಶ್ ಕುಮಾರ್ ಮೇಲ್ಮನವಿ ವಜಾ ; ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಲು ಆದೇಶ
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಶ್ರೀನಿವಾಸಪುರ ತಾಲ್ಲೂಕು ಹೊಸಹುಡ್ಯ ಅರಣ್ಯ ಪ್ರದೇಶದಲ್ಲಿ ಒತ್ತುವರಿ ಮಾಡಿರುವ ಅರಣ್ಯ ಭೂಮಿ ಡ್ರೋನ್ ಚಿತ್ರ.


ಕೋಲಾರ,೧೦ ಏಪ್ರಿಲ್ (ಹಿ.ಸ.) :

ಆ್ಯಂಕರ್ : ಅರಣ್ಯ ಭೂಮಿಯನ್ನು ತೆರವುಗೊಳಿಸುವಂತೆ ಕೋಲಾರದ ಉಪ ಅರಣ್ಯಾಧಿಕಾರಿ ಹೊರಡಿಸಿದ್ದ ಆದೇಶದ ವಿರುಧ್ದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿ ಬೆಂಗಳೂರಿನ ಅರಣ್ಯ ಇಲಾಖೆಯ ಪ್ರಾದೇಶಿಕ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ಆದೇಶ ಹೊರಡಿಸಿದ್ದಾರೆ.

ಒತ್ತುವರಿ ತೆರವುಗೊಳಿಸಲು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹೊರಡಿಸಿದ್ದ ಆದೇಶವನ್ನು ಎತ್ತಿ ಹಿಡಿದ್ದಾರೆ. ಇದರಿಂದಾಗಿ ರಮೇಶ್ ಕುಮಾರ್ ಅರಣ್ಯ ಇಲಾಖೆಯ ವಿರುದ್ಧ ನಡೆಸತ್ತಿದ್ದ ಕಾನೂನು ಹೋರಾಟಕ್ಕೆ ತೀವ್ರ ಹಿನ್ನಡೆಯಾಗಿದೆ.

ಈ ಆದೇಶದಿಂದಾಗಿ ಒತ್ತುವರಿ ತೆರವು ಕಾರ್ಯಾಚರಣೆಗೆ ಬಲಬಂದತಾಗಿದೆ. ಕಳೆದ ಎರಡು ದಶಕಗಳಿಂದ ರಮೇಶ್ ಕುಮಾರ್ ಹಾಗು ಅರಣ್ಯ ಇಲಾಖೆಯ ನಡುವೆ ನಡೆಯುತ್ತಿದ್ದ ಕಾನೂನು ಸಂಘರ್ಷ ತಾರ್ಕಿಕ ಹಂತ ತಲುಪಿದೆ.

ಶ್ರೀನಿವಾಸ ತಾಲ್ಲೂಕು ಹೊಸಹುಡ್ಯ ಅರಣ್ಯ ಪ್ರದೇಶದಲ್ಲಿ ಸರ್ವೇ ನಂಬರ್ ಒಂದು ಮತ್ತು ಎರಡು ನಂಬರ್ಗಳ ಪೈಕಿ ಒಟ್ಟು ಅರವತ್ತು ಆರು ಎಕರೆ ಅರಣ್ಯ ಭೂಮಿಯನ್ನು ರಮೇಶ್ ಕುಮಾರ್ ಒತ್ತುವರಿ ಮಾಡಿದ್ದಾರೆ.

ಹೊಸ ಹುಡ್ಯ ಅರಣ್ಯ ಭೂಮಿಯನ್ನು ಮಿಸಲು ಅರಣ್ಯ ಭೂಮಿ ಎಂಬುದಾಗಿ ಅಂದಿನ ಮೈಸೂರು ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು. ಒಂದು ಬಾರಿ ಅರಣ್ಯ ಭೂಮಿ ಎಂದು ಘೋಷಣೆ ಮಾಡಿದ ಮೇಲೆ ಅರಣ್ಯ ಭೂಮಿಯನ್ನು ಮಂಜೂರು ಮಾಡಲು ಮತ್ತು ಖರೀದಿ ಮಾಡುವುದು ಕಾನೂನು ಬಾಹಿರವಾಗುತ್ತದೆ.ಆದರೆ ರಮೇಶ್ ಕುಮಾರ್ ಹೊಸಹುಡ್ಯ ಅರಣ್ಯ ಪ್ರದೇಶದಲ್ಲಿ ಒತ್ತುವರಿ ಮಾಡಿ ಅರಣ್ಯ ಕಾಯಿದೆಯನ್ನು ಉಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ಶ್ರೀನಿವಾಸಪುರ ವಲಯ ಅರಣ್ಯಾಧಿಕಾರಿಗಳು ಕಳೆದ ೨೦೦೩ರಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದರು.

ಅರಣ್ಯ ಸಂರಕ್ಷಣೆ ಕಾಯ್ದೆ ೧೯೬೩ ಸೆಕ್ಷನ್ ೬೩ ಎ ಉಲ್ಲಂಘಿಸಿಲಾಗಿದೆ ಎಂದು ಆರೋಪಿಸಿ ಚಿಂತಾಮಣಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಶ್ವತ್ಥ ನಾರಾಯಣರವರು ವಿಚಾರಣೆ ನಡೆಸಿ ರಮೇಶ್ ಖರೀದಿ ಮಾಡಲಾಗಿರುವ ಜಮೀನು ಅರಣ್ಯ ಇಲಾಖೆಗೆ ಸೇರಿದೆ. ಅರಣ್ಯ ಭೂಮಿಯನ್ನು ಮಂಜೂರು ಮಾಡುವುದು ಮತ್ತು ಮಾರಾಟ ಖರೀದಿ ಮಾಡುವುದು ಅರಣ್ಯ ಸಂರಕ್ಷಣೆ ಕಾಯ್ದೆಯ ಪ್ರಕಾರ ಕಾನೂನು ಬಾಹಿರವಾಗಿದೆ. ಆದ್ದರಿಂದ ರಮೇಶ್ ಕುಮಾರ್ ಒತ್ತುವರಿ ಮಾಡಲಾಗಿರುವ ಅರಣ್ಯ ಭೂಮಿಯನ್ನು ತೆರವು ಮಾಡುವಂತೆ ಕೋಲಾರ ಅರಣ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಕಳೆದ ೨೪ ಜೂನ್ ೨೦೧೧ ರಂದು ಹೊರಡಿಸಿದ್ದ ಆದೇಶ ಮತ್ತು ಕಳೆದ ೨೦೨೫ ಜನವರಿ ೧೫ ಮತ್ತು ೧೬ ರಂದು ನಡೆದ ಜಂಟಿ ಸರ್ವೆ ವರದಿಯನ್ನು ಅರಣ್ಯ ಸಂರಕ್ಷಣಾಧಿಕಾರಿಗಳು ಎತ್ತಿ ಹಿಡಿದಿದ್ದಾರೆ. ಜಂಟಿ ಸರ್ವೇಯಿಂದ ರಮೇಶ್ ಕುಮಾರ್ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿರುವುದು ಸಾಬೀತಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಆದೇಶದ ಪ್ರತಿ ತಲುಪಿದ ಒಂದು ತಿಂಗಳಲ್ಲಿ ರಮೇಶ್ ಕುಮಾರ್ ಒತ್ತುವರಿ ತೆರವುಗೊಳಿಸಬೇಕು. ಒಂದು ವೇಳೆ ರಮೇಶ್ ಕುಮಾರ್ ತೆರವು ಮಾಡದಿದ್ದಲ್ಲಿ ಕೋಲಾರ ಅರಣ್ಯ ಉಪ ಸಂರಕ್ಷಣಾಧಿಕಾರಿಗಳು, ಶ್ರೀನಿವಾಸಪುರ ವಲಯ ಅರಣ್ಯಾಧಿಕಾರಿಗಳು ಒತ್ತುವರಿ ತೆರವುಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ಆದೇಶದಲ್ಲಿ ನಿರ್ದೇಶನ ನೀಡಲಾಗಿದೆ.

ಒತ್ತುವರಿ ತೆರವುಗೊಳಿಸುವಂತೆ ಅರಣ್ಯ ಇಲಾಖೆಯು ನೋಟೀಸ್ ನೀಡುತ್ತಿದ್ದಂತೆ ಜಂಟಿ ಸರ್ವೇ ನಡೆಸಿ ಅರಣ್ಯ ಮತ್ತು ಕಂದಾಯ ಭೂಮಿ ಗುರ್ತಿಸಬೇಕೆಂದು ರಮೇಶ್ ಕುಮಾರ್ ರಾಜ್ಯ ಹೈ ಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು.

ಡಿ.ಕೆ. ರವಿ ಜಿಲ್ಲಾಧಿಕಾರಿಗಳಾಗಿದ್ದಾಗ ಜಂಟಿ ಸರ್ವೇ ನಡೆಯಿತು. ಆದರೆ ಅರಣ್ಯ ಇಲಾಖೆಯ ಬಳಿ ಭೂಮಿ ಅವರಿಗೆ ಸೇರಿದ ಬಗ್ಗೆ ದಾಖಲೆಗಳು ಇಲ್ಲ ಎಂದು ಡಿ.ಕೆ.ರವಿ ರಮೇಶ್ ಕುಮಾರ್ ಪರ ವರದಿ ನೀಡಿದ್ದರು. ಆ ನಂತರ ಒತ್ತುವರಿ ತೆರವು ನೆನೆಗುದಿಗೆ ಬಿದ್ದಿತ್ತು.

ಹಲವು ದಶಕಗಳಿಂದ ಒತ್ತುವರಿ ತೆರವು ನಡೆದಿಲ್ಲ. ರಮೇಶ್ ಕುಮಾರ್ ಅರಣ್ಯ ಭೂಮಿಯನ್ನು ಕಬಳಿಕೆ ಮಾಡಿದ್ದಾರೆ ಎಂದು ಆರೋಪಿಸಿ ಶ್ರೀನಿವಾಸಪುರ ವಕೀಲ ವೆಂಕಟಶಿವಾರೆಡ್ಡಿ ಕೇಂದ್ರ ಪರಿಸರ ಇಲಾಖೆಗೆ ದೂರು ನೀಡಿದ್ದರು.

ಸರ್ವೇ ನಡೆಸಿ ಒತ್ತುವರಿ ತೆರವುಗೊಳಿಸುವಂತೆ ಕೇಂದ್ರ ಪರಿಸರ ಇಲಾಖೆಯ ಕೋಲಾರ ಜಿಲ್ಲಾಧಿಕಾರಿಗಳಿಗೆ ಮತ್ತು ಅರಣ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.

ಜಂಟಿ ಸರ್ವೇ ನಂತರ ರಮೇಶ್ ಕುಮಾರ್ ರಾಜ್ಯ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿ ಆಕ್ಷೇಪ ವ್ಯಕ್ತಪಡಿಸಿದ್ದರು. ಅರಣ್ಯ ಕಾಯ್ದೆ ಪ್ರಕಾರ ರಮೇಶ್ ಕುಮಾರ್ ಮೇಲ್ಮನವಿಯನ್ನು ಇತ್ಯರ್ಥಪಡಿಸುವಂತೆ ಹೈ ಕೋರ್ಟ್ ನಿರ್ದೇಶನ ನೀಡಿತ್ತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande