
ಬೆಂಗಳೂರು, 10 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಸ್ವಾತಂತ್ರ್ಯ ಚಳವಳಿಯ ಹಿರಿಯ ಚೇತನ ದಿವಂಗತ. ಹೆಚ್.ಎಸ್. ದೊರೆಸ್ವಾಮಿ ಅವರ ಜನ್ಮ ದಿನಾಚರಣೆ ಇಂದು ಆಚರಿಸಲಾಯಿತು. ಅವರು ಬದುಕಿದ್ದರೆ ಇಂದು 109 ವರ್ಷಗಳನ್ನು ಪೂರೈಸುತ್ತಿದ್ದರೆಂಬುದು ವಿಶೇಷ. ತಮ್ಮ 104ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ದೊರೆಸ್ವಾಮಿ ಅವರು ಗಾಂಧೀವಾದಿಯಾಗಿ, ಜನಪರ ಹೋರಾಟಗಾರರಾಗಿ ಜೀವನಪೂರ್ಣ ಸೇವೆ ಸಲ್ಲಿಸಿದ್ದರು.
ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಉದ್ಯಾನವನದಲ್ಲಿ ಮಹಾತ್ಮ ಗಾಂಧಿ ಅವರ ಪುತ್ತಳಿಗೆ ಪುಷ್ಪಾರ್ಚನೆ ಸಲ್ಲಿಸಿ, ದೊರೆಸ್ವಾಮಿ ಅವರ ಸ್ಮರಣಾರ್ಥ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯರಾದ ಡಾ. ವಿಜಯಮ್ಮ, ಡಾ. ಸದ್ದನಗೌಡ ಪಾಟೀಲ್, ವಿಶುಕುಮಾರ್, ಸಿರಿಮನೆ ನಾಗರಾಜ್, ವೀರಸಂಗಯ್ಯ, ನಾಗೇಶ್ವರ ರಾವ್, ಇಂದಿರ ಕೃಷ್ಣಪ್ಪ, ಶ್ಯಾಮಲ ಹಾಗೂ ಅಲಿಬಾಬಾ ಸೇರಿದಂತೆ ಅನೇಕರು ಭಾಗವಹಿಸಿ, ದೊರೆಸ್ವಾಮಿ ಅವರ ಸರಳತೆ, ನಿಷ್ಠೆ ಹಾಗೂ ಸಮಾಜಮುಖಿ ಚಿಂತನೆಗಳನ್ನು ಸ್ಮರಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa