ಬೀದರ್ ಮಠಗಳಿಗೆ ಅನುದಾನ : ಸಚಿವ ಈಶ್ವರ ಖಂಡ್ರೆ ಚೆಕ್ ವಿತರಣೆ
ಬೀದರ್, 10 ಏಪ್ರಿಲ್ (ಹಿ.ಸ.) : ಆ್ಯಂಕರ್ : ಬೀದರ್ ಜಿಲ್ಲೆಯ ವಿವಿಧ ಮಠಗಳಿಗೆ ರಾಜ್ಯ ಸರ್ಕಾರದಿಂದ ಮಂಜೂರಾದ ಸಮುದಾಯ ಭವನ ನಿರ್ಮಾಣದ ಮೊದಲ ಕಂತಿನ ಅನುದಾನದ ಚೆಕ್ಗಳನ್ನು ಸಚಿವ ಈಶ್ವರ ಖಂಡ್ರೆ ವಿತರಿಸಿದರು. ಜಿಲ್ಲೆಯ ಮಠಮಾನ್ಯಗಳು ಧಾರ್ಮಿಕ ಹಾಗೂ ಆಧ್ಯಾತ್ಮಿಕ ಚಟುವಟಿಕೆಗಳ ಜೊತೆಗೆ ಸಮಾಜದಲ್ಲಿ ಉತ್
Distribution


ಬೀದರ್, 10 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಬೀದರ್ ಜಿಲ್ಲೆಯ ವಿವಿಧ ಮಠಗಳಿಗೆ ರಾಜ್ಯ ಸರ್ಕಾರದಿಂದ ಮಂಜೂರಾದ ಸಮುದಾಯ ಭವನ ನಿರ್ಮಾಣದ ಮೊದಲ ಕಂತಿನ ಅನುದಾನದ ಚೆಕ್ಗಳನ್ನು ಸಚಿವ ಈಶ್ವರ ಖಂಡ್ರೆ ವಿತರಿಸಿದರು.

ಜಿಲ್ಲೆಯ ಮಠಮಾನ್ಯಗಳು ಧಾರ್ಮಿಕ ಹಾಗೂ ಆಧ್ಯಾತ್ಮಿಕ ಚಟುವಟಿಕೆಗಳ ಜೊತೆಗೆ ಸಮಾಜದಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸುವ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ ಎಂದು ಅವರು ಹೇಳಿದರು.

ಈ ಹಿನ್ನೆಲೆ ಮೆಹಕರ್ ವಿಶ್ವಶಾಂತಿ ಟ್ರಸ್ಟ್, ಹಾರಕೋಡ ಶ್ರೀ ಚನ್ನಬಸವೇಶ್ವರ ಸಂಸ್ಥಾನ, ದೇಗಲಮಾಡಿ ಬಸವಲಿಂಗ ಅವಧೂತ ಆಶ್ರಮ, ಹುಡುಗಿ ಹಿರೇಮಠ ಟ್ರಸ್ಟ್, ಬೆಲ್ದಾಳೆಯ ಶರಣ ತತ್ವ ಪ್ರಸಾರ ಹಾಗೂ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ಸೇರಿದಂತೆ ಸುಮಾರು 28 ಮಠಗಳಿಗೆ ಅನುದಾನ ವಿತರಿಸಲಾಗಿದೆ ಎಂದು ತಿಳಿಸಿದರು.

ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಂದೇಶ ಸಾರಿದ ರೇಣುಕಾದಿ ಆಚಾರ್ಯರು ಹಾಗೂ “ದಯವೇ ಧರ್ಮದ ಮೂಲ” ಎಂದು ಬೋಧಿಸಿದ ಬಸವಾದಿ ಶರಣರು ಈ ನಾಡಿಗೆ ಶ್ರೇಷ್ಠ ಪರಂಪರೆಯನ್ನು ನೀಡಿದ್ದಾರೆ. ಆ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿರುವ ಮಠಗಳಿಗೆ ಸರ್ಕಾರದಿಂದ ನೆರವು ನೀಡಲಾಗುತ್ತಿದ್ದು, ಅದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಚಿವರು ಹೇಳಿದರು.

ಇಂದಿನ ಯುವಜನರು ದುಶ್ಚಟಗಳು ಹಾಗೂ ಮಾದಕ ದ್ರವ್ಯಗಳ ದುರ್ವ್ಯಸನದಿಂದ ದೂರವಿದ್ದು ಸತ್ಪ್ರಜೆಗಳಾಗಿ ರೂಪುಗೊಳ್ಳುವಂತೆ ಮಠಾಧೀಶರು ಮಾರ್ಗದರ್ಶನ ನೀಡಬೇಕು ಎಂದು ಅವರು ಕರೆ ನೀಡಿದರು. ಸಮಾಜವನ್ನು ಧರ್ಮ ಮತ್ತು ಜಾತಿ ಹೆಸರಿನಲ್ಲಿ ವಿಭಜಿಸದೇ, ಸರ್ವರೂ ಸಹಬಾಳ್ವೆಯಿಂದ ಬದುಕುವ ದಾರಿಯನ್ನು ತೋರಿಸುವುದು ಅವಶ್ಯಕ ಎಂದರು.

ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಸಚಿವರನ್ನು ಬೀದರ್ ಜಿಲ್ಲೆಯ ಮಠಾಧೀಶರು ಸನ್ಮಾನಿಸಿ ಆಶೀರ್ವದಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande