ಜೀವಾವಧಿ ಶಿಕ್ಷಿತ ; ಕಲಾ ವಿಭಾಗದಲ್ಲಿ ಶೇ. 80.01 ರಷ್ಟು ಅಂಕ
ಬಳ್ಳಾರಿ, 10 ಏಪ್ರಿಲ್ (ಹಿ.ಸ.) : ಆ್ಯಂಕರ್ : ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿ ಬಳ್ಳಾರಿಯ ಸೆಂಟ್ರಲ್ ಜೈಲಿನಲ್ಲಿ ಏಳು ವರ್ಷಗಳಿಂದ ಬಂಧಿಯಾಗಿರುವ ಬೆಂಗಳೂರಿನ ಅಶೋಕ್ ಕುಮಾರ್ ಅವರು ಈ ಬಾರಿಯ ದ್ವಿತೀಯ ಪಿಯುಸಿ ಕಲಾ ವಿಭಾಗದ ಪರೀಕ್ಷೆಯಲ್ಲಿ ಶೇ. 80.1 ರಷ್ಟು ಅಂಕಗಳನ್ನು ಪಡೆದು ಉತ್ತಮವಾ
ಜೀವಾವಧಿ ಶಿಕ್ಷಿತ ; ಕಲಾ ವಿಭಾಗದಲ್ಲಿ ಶೇ. 80 ರಷ್ಟು ಅಂಕ


ಬಳ್ಳಾರಿ, 10 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿ ಬಳ್ಳಾರಿಯ ಸೆಂಟ್ರಲ್ ಜೈಲಿನಲ್ಲಿ ಏಳು ವರ್ಷಗಳಿಂದ ಬಂಧಿಯಾಗಿರುವ ಬೆಂಗಳೂರಿನ ಅಶೋಕ್ ಕುಮಾರ್ ಅವರು ಈ ಬಾರಿಯ ದ್ವಿತೀಯ ಪಿಯುಸಿ ಕಲಾ ವಿಭಾಗದ ಪರೀಕ್ಷೆಯಲ್ಲಿ ಶೇ. 80.1 ರಷ್ಟು ಅಂಕಗಳನ್ನು ಪಡೆದು ಉತ್ತಮವಾದ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ದಾಪುಗಾಲಿರಿಸಿದ್ದಾರೆ.

ಅಶೋಕ್ ಕುಮಾರ್ ಅವರು ಕಲಿಕೆಯ ಹಂಬಲವನ್ನು ಬಿಡದೆ ಜೈಲಿನ ಸೆಲ್ನಲ್ಲಿಯೇ ವಿದ್ಯಾಭ್ಯಾಸ ಮಾಡಿ, ಖಾಸಗಿ ಅಭ್ಯರ್ಥಿಯಾಗಿ ಕಲಾ ವಿಭಾಗದ ಪರೀಕ್ಷೆಗೆ ಪೊಲೀಸ್ ಭದ್ರತೆಯಲ್ಲಿ ಹಾಜರಾಗಿದ್ದರು. ಅಶೋಕ್ ಕುಮಾರ್ ಅವರು ಪರೀಕ್ಷೆಯಲ್ಲಿ ತೇರ್ಗಡೆ ಆಗಿರುವುದು ಜೈಲಿನ ಸಿಬ್ಬಂದಿಗೆಲ್ಲಾ ಸಂತೋಷ ಮೂಡಿಸಿದೆ.

ಅಶೋಕ್ ಕುಮಾರ್ ಅವರು ಪಡೆದಿರುವ ಅಂಕಗಳು: * ಕನ್ನಡ: 82

ಇತಿಹಾಸ: 94

ಅರ್ಥಶಾಸ್ತ್ರ: 84

ಸಮಾಜಶಾಸ್ತ್ರ: 77

ರಾಜ್ಯಶಾಸ್ತ್ರ: 75

ಇಂಗ್ಲಿಷ್: 69

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande