ಸರ್ಕಾರಿ ಶಾಲಾ ಅಭಿವೃದ್ದಿಗೆ ಸಮುದಾಯದ ಸಹಭಾಗಿತ್ವ ಅಗತ್ಯ : ಜಿ.ಎಂ. ಮುಂದಿನಮನಿ
ಗದಗ, 10 ಏಪ್ರಿಲ್ (ಹಿ.ಸ.) : ಆ್ಯಂಕರ್ : ನಮ್ಮ ಶಾಲೆಯ ಅಭಿವೃದ್ಧಿಗಾಗಿ ನಾವು ಒಂದಾದರೂ ಹೆಜ್ಜೆಗುರುತನ್ನು ಬಿಟ್ಟು ಹೋಗಬೇಕು ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪ ನಿರ್ದೇಶಕ ಹಾಗೂ ಪ್ರಾಂಶುಪಾಲರಾದ ಜಿ.ಎಂ. ಮುಂದಿನಮನಿ ಹೇಳಿದರು. ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾ
ಫೋಟೋ


ಗದಗ, 10 ಏಪ್ರಿಲ್ (ಹಿ.ಸ.) :

ಆ್ಯಂಕರ್ : ನಮ್ಮ ಶಾಲೆಯ ಅಭಿವೃದ್ಧಿಗಾಗಿ ನಾವು ಒಂದಾದರೂ ಹೆಜ್ಜೆಗುರುತನ್ನು ಬಿಟ್ಟು ಹೋಗಬೇಕು ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪ ನಿರ್ದೇಶಕ ಹಾಗೂ ಪ್ರಾಂಶುಪಾಲರಾದ ಜಿ.ಎಂ. ಮುಂದಿನಮನಿ ಹೇಳಿದರು.

ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಗದಗ ಉಪನಿರ್ದೇಶಕರು (ಅಭಿವೃದ್ಧಿ) ಮತ್ತು ಆಡಳಿತ ಇವರ ಸಂಯುಕ್ತ ಆಶ್ರಯದಲ್ಲಿ ಡಾ. ಬಿ.ಆರ್ ಅಂಬೇಡ್ಕರ ಸಭಾ ಭವನದಲ್ಲಿಂದು ರಂದು 2026-27ನೇ ಸಾಲಿನ ಗದಗ ಜಿಲ್ಲೆ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ದಾಖಲಾತಿ (ಮಕ್ಕಳ ಸಂಖ್ಯೆ) ಹೆಚ್ಚಿಸಲು ಅದ್ಯಕ್ಷರು, ಉಪಾದ್ಯಕ್ಷರು, ಕಾರ್ಯದರ್ಶಿ, ಸದಸ್ಯರುಗಳಿಗೆ ಜಾಗೃತಿ ಶಿಬಿರ ಕಾರ್ಯಕ್ರಮ ಜರುಗಿತು.

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪ ನಿರ್ದೇಶಕ ಹಾಗೂ ಪ್ರಾಂಶುಪಾಲರಾದ ಜಿ.ಎಂ. ಮುಂದಿನಮನಿ ಅವರು ಕಾರ್ಯಕ್ರಮವನ್ನು. ಉದ್ಘಾಟಿಸಿ ಮಾತನಾಡಿ,ನಾವು ಯಾರು? ನಾವು ಇಲ್ಲಿಗೆ ಏಕೆ ಬಂದಿದ್ದೇವೆ? ಮತ್ತು ನಮ್ಮ ಕೆಲಸವೇನು? ಎಂಬ ಮೂರು ಪ್ರಶ್ನೆಗಳನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.

ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಜನರು ಶಿಕ್ಷಣಕ್ಕೆ ನೀಡುವ ಆದ್ಯತೆಯಿಂದಾಗಿ ಅವರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಬಲಿಷ್ಠರಾಗಿದ್ದಾರೆ. ಉತ್ತರ ಕರ್ನಾಟಕದಲ್ಲೂ ಅಂತಹ ಬದಲಾವಣೆ ಬರಬೇಕು. ಊರಿನ ಹತ್ತಾರು ಜಾತ್ರೆಗಳಿಗಿಂತ ಮಕ್ಕಳ ಶಿಕ್ಷಣದ ಹಬ್ಬ ನಮಗೆ ಮುಖ್ಯವಾಗಬೇಕು. ನಮ್ಮ ಮಕ್ಕಳು ಶಿಕ್ಷಣವನ್ನು ಪಡೆದು ಐಎಎಸ್, ಐಪಿಎಸ್ , ಉನ್ನತ ಅಧಿಕಾರಿಗಳಾಗಿ ಬೆಳೆಯಬೇಕು, ಎಂದು ಆಶಿಸಿದರು.

2026-27ನೇ ಸಾಲಿನ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ದಾಖಲಾತಿಯನ್ನು ಹೆಚ್ಚಿಸುವುದು ನಮ್ಮ ಇಂದಿನ ಮುಖ್ಯ ಗುರಿ. ಅಂಗನವಾಡಿಗಳಲ್ಲಿ ಸಾವಿರಾರು ಮಕ್ಕಳಿದ್ದರೂ, ಶಾಲೆಗೆ ಬರುವಾಗ ಆ ಸಂಖ್ಯೆ ಕುಸಿಯುತ್ತಿದೆ. ಪ್ರತಿಯೊಬ್ಬ ಎಸ್ಡಿಎಂಸಿ ಸದಸ್ಯರು ಕನಿಷ್ಠ ಒಬ್ಬರು ಅಥವಾ ಇಬ್ಬರು ಹೊಸ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಸಂಕಲ್ಪ ಮಾಡಬೇಕು. ಸರ್ಕಾರಿ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ, ಬಿಸಿಯೂಟ, ವಿದ್ಯಾರ್ಥಿವೇತನ ಮತ್ತು ಅನುಭವಿ ಶಿಕ್ಷಕರಿದ್ದಾರೆ. ಗದಗ ಜಿಲ್ಲೆ ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯಕ್ಕೆ ಮಾದರಿಯಾಗಬೇಕು ಎಂದು ಹೇಳಿದರು.

ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರು ಅಬ್ದುಲ್ ಸಲಾಂ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾತಂತ್ರö್ಯ ಪೂರ್ವದಿಂದಲೂ ಶಿಕ್ಷಣ ವ್ಯವಸ್ಥೆ ಹಲವು ಹಂತಗಳನ್ನು ದಾಟಿ ಬಂದಿದೆ. ಸಂವಿಧಾನದ ಆಶಯದಂತೆ ಪ್ರತಿಯೊಂದು ಮಗುವಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ಸಿಗಬೇಕು. 2009ರ ಶಿಕ್ಷಣ ಹಕ್ಕು ಕಾಯ್ದೆಯ ಅತಿ ದೊಡ್ಡ ಕೊಡುಗೆ ಎಂದರೆ ಅದು ಎಸ್ಡಿಎಂಸಿಗಳ ರಚನೆ. ಕೇವಲ ಸಮಿತಿಯ ಸದಸ್ಯರಾದರೆ ಸಾಲದು; ಶಾಲೆಗೆ ಅಗತ್ಯವಿರುವ ಶೌಚಾಲಯ, ಕುಡಿಯುವ ನೀರು ಮತ್ತು ಉತ್ತಮ ಗುಣಮಟ್ಟದ ಶಿಕ್ಷಣದ ಬಗ್ಗೆ ಪ್ರಶ್ನಿಸುವ ಹಕ್ಕು ನಮಗಿದೆ ಎಂದರು.

ಕುಂದಾಪುರ ತಾಲೂಕಿನ ಶಾಲೆಯೊಂದರಲ್ಲಿ ಸಮುದಾಯ ಮತ್ತು ಶಿಕ್ಷಕರು ಸೇರಿ ಒಂದೇ ವರ್ಷದಲ್ಲಿ 100ಕ್ಕೂ ಹೆಚ್ಚು ಮಕ್ಕಳ ದಾಖಲಾತಿ ಹೆಚ್ಚಿಸಿದ ಯಶೋಗಾಥೆಯನ್ನು ಸ್ಮರಿಸಿದ ಅವರು, ಅಂತಹದೇ ಕ್ರಾಂತಿ ಗದಗ ಜಿಲ್ಲೆಯಲ್ಲೂ ಆಗಬೇಕು ಎಂದು ಆಶಿಸಿದರು. ಹುಟ್ಟು ನೀಡಿದ ತಾಯಿಯಷ್ಟೇ, ಅಕ್ಷರ ಕಲಿಸಿದ ಸರ್ಕಾರಿ ಶಾಲೆಯ ಋಣವೂ ದೊಡ್ಡದು. ಶಾಲೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ನಾವು ಋಣ ತೀರಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಡಯಟ್ ಹಿರಿಯ ಉಪನ್ಯಾಸಕ ಬಿ.ಎಪ್.ಅರವಟಗಿ, ಡಯಟ್ ಅಧಿಕ್ಷಕರು ಶ್ರೀನಿವಾಸ ಕುಲಕರ್ಣಿ, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ, ಸಧ್ಯಸರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande