ಮಲಾವಿಗೆ ಭಾರತದಿಂದ 1,000 ಮೆಟ್ರಿಕ್ ಟನ್ ಅಕ್ಕಿ ಮಾನವೀಯ ನೆರವು
ನವದೆಹಲಿ, 09 ಮಾರ್ಚ್ (ಹಿ.ಸ.): ಆ್ಯಂಕರ್: ಭಾರತ ಮತ್ತು ಮಲಾವಿ ನಡುವಿನ ಸಹಕಾರದ ಭಾಗವಾಗಿ, ಎಲ್ ನಿನೋ ಪರಿಣಾಮದಿಂದ ಉಂಟಾದ ಬರಗಾಲದ ಹಿನ್ನೆಲೆ ಆಹಾರ ಭದ್ರತೆ ಸಮಸ್ಯೆಯನ್ನು ಎದುರಿಸುತ್ತಿರುವ ಮಲಾವಿಗೆ ಭಾರತ ಮಾನವೀಯ ನೆರವು ನೀಡಿದೆ. ನವಾ ಶೇವಾ ಬಂದರಿನಿಂದ ಸುಮಾರು 1,000 ಮೆಟ್ರಿಕ್ ಟನ್ ಅಕ್ಕಿಯ
Rice container


ನವದೆಹಲಿ, 09 ಮಾರ್ಚ್ (ಹಿ.ಸ.):

ಆ್ಯಂಕರ್:

ಭಾರತ ಮತ್ತು ಮಲಾವಿ ನಡುವಿನ ಸಹಕಾರದ ಭಾಗವಾಗಿ, ಎಲ್ ನಿನೋ ಪರಿಣಾಮದಿಂದ ಉಂಟಾದ ಬರಗಾಲದ ಹಿನ್ನೆಲೆ ಆಹಾರ ಭದ್ರತೆ ಸಮಸ್ಯೆಯನ್ನು ಎದುರಿಸುತ್ತಿರುವ ಮಲಾವಿಗೆ ಭಾರತ ಮಾನವೀಯ ನೆರವು ನೀಡಿದೆ.

ನವಾ ಶೇವಾ ಬಂದರಿನಿಂದ ಸುಮಾರು 1,000 ಮೆಟ್ರಿಕ್ ಟನ್ ಅಕ್ಕಿಯನ್ನು ಮಲಾವಿ ಜನರಿಗೆ ಸಹಾಯವಾಗಿ ರವಾನಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರ ರಣಧೀರ್ ಜೈಸ್ವಾಲ್ ಸಾಮಾಜಿಕ ಜಾಲತಾಣ ಎಕ್ಸನಲ್ಲಿ ತಿಳಿಸಿದ್ದಾರೆ.

ಎಲ್ ನಿನೋ ಪರಿಣಾಮದಿಂದ ಉಂಟಾದ ತೀವ್ರ ಬರಗಾಲದ ಕಾರಣ ಮಲಾವಿಯಲ್ಲಿ ಕೃಷಿ ಉತ್ಪಾದನೆಗೆ ಭಾರೀ ಹೊಡೆತ ಬಿದ್ದಿದ್ದು, ಆಹಾರ ಭದ್ರತೆ ಸಂಕಷ್ಟ ಉಂಟಾಗಿದೆ. ಈ ಹಿನ್ನೆಲೆ ಭಾರತವು ಮಾನವೀಯ ನೆರವಿನ ಭಾಗವಾಗಿ ಅಕ್ಕಿ ಕಳುಹಿಸಿ ಸಹಾಯಹಸ್ತ ನೀಡಿದೆ.

ವಿದೇಶಾಂಗ ಸಚಿವಾಲಯದ ಪ್ರಕಾರ, ಈ ಕ್ರಮವು ಜಾಗತಿಕ ದಕ್ಷಿಣದ ರಾಷ್ಟ್ರಗಳನ್ನು ಬೆಂಬಲಿಸುವಲ್ಲಿ ಭಾರತದ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸುತ್ತದೆ. ಜೊತೆಗೆ ದಕ್ಷಿಣ–ದಕ್ಷಿಣ ಸಹಕಾರ ಮನೋಭಾವವನ್ನು ಬಲಪಡಿಸುವತ್ತ ಭಾರತದ ನಿಲುವನ್ನೂ ಇದು ತೋರಿಸುತ್ತದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande