
ನವದೆಹಲಿ, 08 ಮಾರ್ಚ್ (ಹಿ.ಸ.):
ಆ್ಯಂಕರ್:
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೆಹಲಿಯಲ್ಲಿ ಸುಮಾರು ₹33,500 ಕೋಟಿ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದರ ಭಾಗವಾಗಿ ಸುಮಾರು ₹18,300 ಕೋಟಿ ವೆಚ್ಚದ ದೆಹಲಿ ಮೆಟ್ರೋ ರೈಲು ನಿಗಮ ಯೋಜನೆಗಳಿಗೆ ಚಾಲನೆ ನೀಡಲಾಗುತ್ತದೆ.
ಈ ವೇಳೆ 12.3 ಕಿ.ಮೀ. ಮಜ್ಲಿಸ್ ಪಾರ್ಕ್–ಮೌಜ್‌ಪುರ ಬಾಬರ್‌ಪುರ (ಪಿಂಕ್ ಲೈನ್) ಹಾಗೂ 9.9 ಕಿ.ಮೀ. ದೀಪಾಲಿ ಚೌಕ್–ಮಜ್ಲಿಸ್ ಪಾರ್ಕ್ (ಮೆಜೆಂಟಾ ಲೈನ್) ಮೆಟ್ರೋ ಕಾರಿಡಾರ್‌ಗಳನ್ನು ಉದ್ಘಾಟಿಸಲಾಗುತ್ತದೆ. ಜೊತೆಗೆ ಮೆಟ್ರೋ 5A ಹಂತದಡಿ ಮೂರು ಹೊಸ ಕಾರಿಡಾರ್‌ಗಳಿಗೆ ಶಂಕುಸ್ಥಾಪನೆ ನಡೆಯಲಿದೆ.
ಇದರ ಜೊತೆಗೆ ಸರೋಜಿನಿ ನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ₹15,200 ಕೋಟಿ ಮೌಲ್ಯದ ಜಿಪಿಆರ್ ಎ ವಸತಿ ಪುನರ್ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಾಗುತ್ತದೆ.
ಈ ಯೋಜನೆಗಳು ದೆಹಲಿ ನಗರದಲ್ಲಿ ಸಂಪರ್ಕ ವ್ಯವಸ್ಥೆ ಸುಧಾರಿಸಿ ಪ್ರಯಾಣವನ್ನು ಸುಲಭಗೊಳಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa