
ಹಾಸನ, 05 ಮಾರ್ಚ್ (ಹಿ.ಸ.):
ಆ್ಯಂಕರ್:
ಹಾಸನ ಜಿಲ್ಲೆಯಲ್ಲಿ ಬೇಸಿಗೆ ಆರಂಭವಾಗಿದ್ದು ತಾಪಮಾನದ ತೀವ್ರತೆಯ ಪರಿಣಾವು ಪ್ರಾರಂಭವಾಗಿದೆ. ಹೆಚ್ಚಾದ ತಾವಮಾನದಿಂದಾಗಿ ಶಾಖದ ಪ್ರಖರತೆ ಆಗುತ್ತದೆ ಇದರಿಂದಾಗಿ ಜನಸಾಮಾನ್ಯರು ಪ್ರಾಣಿ-ಪಕ್ಷಿಗಳು ತೀವು ತೊಂದರೆಯನ್ನು ಅನುಭವಿಸುತ್ತವೆ ಆದ್ದರಿಂದ ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರುಣಿಸುವಂತೆ ಜಿಲ್ಲಾಧಿಕಾರಿ ಲತಾ ಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅತಿಯಾದ ತಾಪಮಾನದಿಂದಾಗಿ ನಿರ್ಜಲೀಕರಣಗೊಂಡು ನೀರಿನ ಬಳಲುವಿಕೆಯನ್ನು ಎದುರಿಸುತ್ತವೆ. ಇದರಿಂದಾಗಿ ಜೀವಸಂಕುಲಗಳು ನೀರಿನ ಅಭಾವದಿಂದಾಗಿ ಸಾವನ್ನಪ್ಪುವ ಸಂಭವವಿರುತ್ತದೆ. ಇದು ಪರಿಸರ ಅಸಮತೋಲನ ಮತ್ತು ಸಾರ್ವಜನಿಕರ ಆರೋಗ್ಯದ ಸಮಸ್ಯೆಯ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇರುತ್ತದೆ.
ಎಲ್ಲಾ ಸರ್ಕಾರಿ ಕಛೇರಿಗಳು,ಸ್ವಾಯತ್ತ ಸಂಸ್ಥೆಗಳು, ಖಾಸಗಿ ಕಛೇರಿಗಳು ಮತ್ತು ಸಾರ್ವಜನಿಕರಿಗೆ ಈ ಬಗ್ಗೆ ಮಾನವೀಯತೆಯಿಂದ ಸ್ವಯಂಪ್ರೇರಿತವಾಗಿ ನಡೆದುಕೊಳ್ಳುವುದು ಅತ್ಯಂತ ಸೂಕ್ತವಾಗಿರುತ್ತದೆ.
ಸಾರ್ವಜನಿಕ ಪ್ರದೇಶದಲ್ಲಿ ಪ್ರಾಣಿಗಳಿಗೆ- ಪಕ್ಷಿಗಳಿಗೆ ಕುಡಿಯುವ ನೀರಿನ ತೊಟ್ಟಿಗಳನ್ನು ಅಳವಡಿಸುವುದು, ಪಕ್ಷಿಗಳಿಗಾಗಿ ಮನೆಗಳ, ಕಚೇರಿಗಳ ತಾರಸಿ ಬಾಲ್ಕನಿ ಮರಗಳ ರಂಬೆ-ಕೊಂಬೆಗಳಲ್ಲಿ ನೀರನ್ನು ಇಡುವುದು, ಉದ್ಯಾನವನಗಳಲ್ಲಿ ನಿರ್ವಹಣೆ ಸಂಸ್ಥೆಯವರು ನೀರಿನ ತೊಟ್ಟಿಗಳನ್ನು ಅಳವಡಿಸಿ ಪ್ರಾಣಿ- ಪಕ್ಷಿಗಳಿಗೆ ನೀರನ್ನು ಒದಗಿಸುವುದು, ನೀರನ್ನು ಪ್ರತಿನಿತ್ಯ ಖಾಲಿಯಾದ ನಂತರ ಸ್ವಚ್ಛಗೊಳಿಸಿ ಪುನಃ ತುಂಬಿಸುವುದು,
ತಾಪಮಾನದ ತೀವ್ರತೆಯನ್ನು ಕಡಿಮೆ ಮಾಡಲು ಮಣ್ಣಿನ ಮಡಕ ಪಾತ್ರೆಗಳನ್ನು ಬಳಸುವುದು, ತಾಪಮಾನ ಹೆಚ್ಚಾಂದಂತೆಲ್ಲ ಮರ-ಗಿಡಗಳು ಬೆಳವಣಿಗೆ ಕುಂಠಿತವಾಗಿ ನೆರಳಿನ ಅಭಾವ ಸೃಷ್ಟಿಯಾಗುತ್ತದೆ. ಆದ್ದರಿಂದ ಮರ-ಗಿಡಗಳನ್ನು ಕಡಿಯದಂತೆ ನಿಗಾವಹಿಸುವುದು, ಸಂತೆ- ಮಾರುಕಟ್ಟೆ ಪ್ರದೇಶಗಳಲ್ಲಿ ಜಾನುವಾರುಗಳಿಗೆ ಸಮರ್ಪಕ ನೀರು ಮತ್ತು ನೆರಳಿನ ವ್ಯವಸ್ಥೆ ಮಾಡುವುದು, ಪ್ರಾಣಿ ದಯಾ ಸಂಘದವರು ಸ್ವಯಂ ಪ್ರೇರಿತವಾಗಿ ಆಹಾರ-ನೀರು ವ್ಯವಸ್ಥೆ ಮಾಡುವುದು.
ಸಾರ್ವಜನಿಕರ ಜವಾಬ್ದಾರಿಗಳು: ನಾಗರೀಕರು, ವಿಧ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ಕ್ರಮಗೊಳ್ಳುವುದು, ಸಾರ್ವಜನಿಕ ಪ್ರಜ್ಞೆ- ಅರಿವು ಮೂಡಿಸಲು ಕ್ರಮ ವಹಿಸುವುದು, ಪ್ರಾಣಿ-ಪಕ್ಷಿಗಳು ತೊಂದರೆಗೀಡಾದಲ್ಲಿ ಕೂಡಲೇ ವಶು ವೈದ್ಯಕೀಯ ಸೇವೆಗೆ ಸಹಕರಿಸುವುದು, ಸಂತೆ- ಮಾರುಕಟ್ಟೆ ಪ್ರದೇಶಗಳಲ್ಲಿ ಜಾನುವಾರುಗಳಿಗೆ ಸಮರ್ಪಕ ನೀರು ಮತ್ತು ನೆರಳಿನ ವ್ಯವಸ್ಥೆ ಮಾಡುವುದು ನೀರು ಅತ್ಯಮೂಲ್ಯವಾಗಿದ್ದು ಪೋಲಾಗದಂತೆ ತಡೆಯಬೇಕು ಎಂದು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa