ಮಾ.10ರಿಂದ ವಿಶೇಷ ಬಸ್ಸುಗಳ ಕಾರ್ಯಾಚರಣೆ
ರಾಯಚೂರು, 04 ಮಾರ್ಚ್ (ಹಿ.ಸ.): ಆ್ಯಂಕರ್:ಮಾರ್ಚ 16ರಿಂದ ಮಾರ್ಚ 20ರವರೆಗೆ ಯುಗಾದಿ ಹಬ್ಬದ ಪ್ರಯುಕ್ತ ಶ್ರೀಶೈಲಂ ಶ್ರೀಮಲ್ಲಿಕಾರ್ಜುನ ಜಾತ್ರಗೆ ರಾಯಚೂರು ವಿಭಾಗದ ವ್ಯಾಪ್ತಿಯಲ್ಲಿ ಬರುವ ರಾಯಚೂರು, ಲಿಂಗಸೂಗುರು, ಸಿಂಧನೂರು, ಮಾನವಿ, ದೇವದುರ್ಗ, ಮಸ್ಕಿ ಘಟಕಗಳಿಂದ 280 ವಿಶೇಷ ಬಸ್ಸುಗಳ ಕಾರ್ಯಾಚರಣೆಯನ
ಮಾ.10ರಿಂದ ವಿಶೇಷ ಬಸ್ಸುಗಳ ಕಾರ್ಯಾಚರಣೆ


ರಾಯಚೂರು, 04 ಮಾರ್ಚ್ (ಹಿ.ಸ.):

ಆ್ಯಂಕರ್:ಮಾರ್ಚ 16ರಿಂದ ಮಾರ್ಚ 20ರವರೆಗೆ ಯುಗಾದಿ ಹಬ್ಬದ ಪ್ರಯುಕ್ತ ಶ್ರೀಶೈಲಂ ಶ್ರೀಮಲ್ಲಿಕಾರ್ಜುನ ಜಾತ್ರಗೆ ರಾಯಚೂರು ವಿಭಾಗದ ವ್ಯಾಪ್ತಿಯಲ್ಲಿ ಬರುವ ರಾಯಚೂರು, ಲಿಂಗಸೂಗುರು, ಸಿಂಧನೂರು, ಮಾನವಿ, ದೇವದುರ್ಗ, ಮಸ್ಕಿ ಘಟಕಗಳಿಂದ 280 ವಿಶೇಷ ಬಸ್ಸುಗಳ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ.

ಮಾರ್ಚ್ 16 ರಿಂದ 20ರವರೆಗೆ ಶ್ರೀಶೈಲಂ ಜಾತ್ರೆ ನಡೆಯುತ್ತಿದೆ. ಅಲ್ಲದೆ ಮಾರ್ಚ್ 19 ರಂದು ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ರಥೋತ್ಸವ ಜರುಗಲಿದೆ.

50 ಪ್ರಯಾಣಿಕರು ಲಭ್ಯವಿದ್ದಲ್ಲಿ ಅವರ ಸ್ವ-ಸ್ಥಳದಿಂದ ನೇರವಾಗಿ ಶ್ರೀಶೈಲಂಗೆ ಬಸ್ಸು ವ್ಯವಸ್ಥೆಯನ್ನು ಒದಗಿಸಲಾಗುವುದು. ಹಾಗೂ ಪ್ರಯಾಣಿಕರು ಮಹಾನಂದಿಗೆ ಹೋಗುವುದಕ್ಕೆ ಇಷ್ಟಪಟ್ಟಲ್ಲಿ ನಿಗದಿತ ಟಿಕೇಟ್ ದರದಂತೆ ಬಸ್ ಸೌಲಭ್ಯ ಒದಗಿಸಲಾಗುತ್ತಿದ್ದು, ಶ್ರೀ ಶ್ರೀಶೈಲಂ ಹೋಗಿ ಬರುವ ಪ್ರಯಾಣಿಕರು, ಈ ವಿಷೇಶ ಬಸ್ಸುಗಳ ಸೌಕರ್ಯವನ್ನು ಪಡೆದುಕೊಳ್ಳುವಂತೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಚಂದ್ರಶೇಖರ್ ಎಂ.ಎಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande