
ವಿಜಯಪುರ, 04 ಮಾರ್ಚ್ (ಹಿ.ಸ.)
ಆ್ಯಂಕರ್ : ವಿಜಯಪುರ ಜಿಲ್ಲೆಯಾದ್ಯಂತ ಹೋಳಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಹೋಳಿ ಹಬ್ಬದ ಪ್ರಯುಕ್ತ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾ ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.
ಅಪರಾಧ ಕೃತ್ಯಗಳು ನಡೆಯದಂತೆ ಜಿಲ್ಲೆಯ ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಹೋಳಿ ಹಬ್ಬದ ನೆಪದಲ್ಲಿ ಸಮಾಜದ ಶಾಂತಿ ಕದಡುವ ಹಾಗೂ ಕೃತ್ಯಕ್ಕೆ ಮುಂದಾಗುವ ಸಮಾಜಘಾತುಕ ಶಕ್ತಿಗಳಿಗೆ ಎಚ್ಚರಿಕೆ ನಿಮಿತ್ತವಗಿ ಜಿಲ್ಲೆಯ ಆಯಾ ಪ್ರದೇಶಗಳಲ್ಲಿ ಪಥ ಸಂಚಲ ನಡೆಸಿದರು.
ವಿಜಯಪುರ ನಗರದ ಗಾಂಧಿ ಚೌಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಅತ್ಯಂತ ಸೂಕ್ಷ್ಮ ಪ್ರದೇಶಗಳಾದ ಮುಳ್ಳಗಸಿ, ಚಾಂದ್ ಬಾವಡಿ, ಮಠಪತಿ ಗಲ್ಲಿ, ರಾಮಮಂದಿರ ರೋಡ, ಸಿದ್ದೇಶ್ವರ ದೇವಸ್ಥಾನ ರೋಡ್, ವಾಜಪೇಯಿ ರೋಡ್, ಬಬಲೇಶ್ವರ ನಾಕ ಕಡೆಗಳಲ್ಲಿ ಸಿವಿಲ್ ಸಿಬ್ಬಂದಿ, ಐಆರ್ ಬಿ ಸಿಬ್ಬಂದಿ, ಮತ್ತು ಡಿಎಆರ್ ಸಿಬ್ಬಂದಿ, ಗಳೊಂದಿಗೆ ರೂಟ್ ಮಾರ್ಚ್ ಕೈಗೊಳ್ಳಲಾಯಿತು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande