ಜೀವಿತ ಪ್ರಮಾಣ ಪತ್ರ ಸಲ್ಲಿಕೆಗೆ ಅವಕಾಶ
ಗದಗ, 04 ಮಾರ್ಚ್ (ಹಿ.ಸ.) ಆ್ಯಂಕರ್:ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಾಸಾಶನ ಹಾಗೂ ವಿಧವಾ ಮಾಸಾಶನ ಪಡೆಯುತ್ತಿರುವ ಸಾಹಿತಿಗಳು ಮತ್ತು ಕಲಾವಿದರು ತಮ್ಮ ಮಾಸಾಶನದ ಮುಂದುವರಿಕೆಗೆ ಅಗತ್ಯವಾದ ‘ಜೀವಿತ ಪ್ರಮಾಣ ಪತ್ರ’ (ಲೈಫ್ ಸರ್ಟಿಫಿಕೆಟ್) ಸಲ್ಲಿಸಲು ಅವಕಾಶ ನೀಡಲಾಗಿದೆ. ಬೆಂಗಳೂರಿನ ನಿರ
ಫೋಟೋ


ಗದಗ, 04 ಮಾರ್ಚ್ (ಹಿ.ಸ.)

ಆ್ಯಂಕರ್:ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಾಸಾಶನ ಹಾಗೂ ವಿಧವಾ ಮಾಸಾಶನ ಪಡೆಯುತ್ತಿರುವ ಸಾಹಿತಿಗಳು ಮತ್ತು ಕಲಾವಿದರು ತಮ್ಮ ಮಾಸಾಶನದ ಮುಂದುವರಿಕೆಗೆ ಅಗತ್ಯವಾದ ‘ಜೀವಿತ ಪ್ರಮಾಣ ಪತ್ರ’ (ಲೈಫ್ ಸರ್ಟಿಫಿಕೆಟ್) ಸಲ್ಲಿಸಲು ಅವಕಾಶ ನೀಡಲಾಗಿದೆ.

ಬೆಂಗಳೂರಿನ ನಿರ್ದೇಶನಾಲಯದ ಸುತ್ತೋಲೆಯನ್ವಯ, ಮಾಸಾಶನ ಪಡೆಯುವ ಫಲಾನುಭವಿಗಳು ಪ್ರತಿ ಆರು ತಿಂಗಳಿಗೊಮ್ಮೆ ಜೀವಿತ ಪ್ರಮಾಣ ಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಿದ್ದು, ಈ ಕ್ರಮದ ಮೂಲಕ ಫಲಾನುಭವಿಗಳ ಜೀವಿತಾವಧಿ ದೃಢೀಕರಣ ಮಾಡಲಾಗುತ್ತದೆ.

ಅದರಂತೆ ಗದಗ ಜಿಲ್ಲೆಯ ಎಲ್ಲಾ ಮಾಸಾಶನ ಹಾಗೂ ವಿಧವಾ ಮಾಸಾಶನ ಫಲಾನುಭವಿಗಳು 2026ರ ಮಾರ್ಚ್ 31ರೊಳಗಾಗಿ ತಮ್ಮ ಜೀವಿತ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಪ್ರಮಾಣ ಪತ್ರವನ್ನು ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಠಡಿ ಸಂಖ್ಯೆ 103, ಜಿಲ್ಲಾಡಳಿತ ಭವನ, ಗದಗ ಕಚೇರಿಗೆ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.

ನಿಗದಿತ ಅವಧಿಯೊಳಗೆ ಜೀವಿತ ಪ್ರಮಾಣ ಪತ್ರ ಸಲ್ಲಿಸದಿದ್ದಲ್ಲಿ ಮಾಸಾಶನ ಸ್ಥಗಿತಗೊಳ್ಳುವ ಸಾಧ್ಯತೆ ಇರುವುದರಿಂದ, ಸಂಬಂಧಪಟ್ಟವರು ವಿಳಂಬ ಮಾಡದೆ ಕ್ರಮ ಕೈಗೊಳ್ಳುವಂತೆ ಇಲಾಖೆ ಮನವಿ ಮಾಡಿದೆ.

ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂರವಾಣಿ ಸಂಖ್ಯೆ 08372-221864 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande