
ವಿಜಯಪುರ, 04 ಮಾರ್ಚ್ (ಹಿ.ಸ.)
ಆ್ಯಂಕರ್ : 2022ನೇ ಸಾಲಿನಲ್ಲಿ ಪ್ರಥಮ ಮುದ್ರಣಗೊಂಡ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದ ಆಯ್ಕೆಯಾದ ಪುಸ್ತಕಗಳನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಅಧಿಕೃತ dpl.karnataka.gov.in ವೆಬ್ ಸೈಟಿನಲ್ಲಿ ಮಾರ್ಚ್ 02ರಂದು ಪ್ರಕಟಿಸಲಾಗಿದೆ ಎಂದು ವಿಜಯಪುರ ನಗರ ಕೇಂದ್ರ ಗ್ರಂಥಾಲಯ ಉಪ ನಿರ್ದೇಶಕ ಸಂಗಮೇಶ ಬಿರಾದಾರ್ ತಿಳಿಸಿದರು.
ಸಮಿತಿಯಿಂದ ಆಯ್ಕೆಯಾದ ಪುಸ್ತಕಗಳ ಲೇಖಕರು, ಲೇಖಕ-ಪ್ರಕಾಶಕರು, ಪ್ರಕಾಶಕರು ಹಾಗೂ ಪುಸ್ತಕ ಮಾರಾಟಗಾರರ ಪುಸ್ತಕಗಳ ಶೀರ್ಷಿಕೆ,ಲೇಖಕರ ಹೆಸರು,ಪ್ರಕಾಶಕರ ಹೆಸರು,ಮುಖಬೆಲೆ ಮತ್ತು ನಿಗದಿತ ಬೆಲೆಯಲ್ಲಿ ಹೆಚ್ಚು ಅಥವಾ ಕಡಿಮೆಯಾಗಿದ್ದಲ್ಲಿ, ಪುಸ್ತಕದ ಅಳತೆ, ಪುಟ ಸಂಖ್ಯೆ ಹಾಗೂ ಇತರೆ ಯಾವುದೇ ತಾಂತ್ರಿಕ ವ್ಯತ್ಯಾಸಗಳ ಮಾಹಿತಿಯನ್ನು ಅಗತ್ಯ ದಾಖಲೆಗಳೊಂದಿಗೆ ಮಾರ್ಚ್ 16ರ ಸಂಜೆ 5:30ರೊಳಗಾಗಿ ಆಯುಕ್ತರು,ಸಾರ್ವಜನಿಕ ಗ್ರಂಥಾಲಯ ಇಲಾಖೆ, ವಿಶ್ವೇಶ್ವರಯ್ಯ ಮುಖ್ಯ ಗೋಪುರ, ನಾಲ್ಕನೇ ಮಹಡಿ ಡಾ.ಅಂಬೇಡ್ಕರ್ ರಸ್ತೆ ಬೆಂಗಳೂರು-56001 ಇಲ್ಲಿಗೆ ಲಿಖಿತವಾಗಿ ಮನವಿಗಳನ್ನು ಸಲ್ಲಿಸಲು ಹಾಗೂ ಕೊನೆಯ ದಿನಾಂಕದ ನಂತರ ಸ್ವೀಕರಿಸುವ ಮನವಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ನಗರ ಕೇಂದ್ರ ಗ್ರಂಥಾಲಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande