ರಾಷ್ಟ್ರಪತಿ, ಉಪ ರಾಷ್ಟ್ರಪತಿಯಿಂದ ಹೋಳಿ ಹಬ್ಬದ ಶುಭಾಶಯ
ನವದೆಹಲಿ, 04 ಮಾರ್ಚ್ (ಹಿ.ಸ.): ಆ್ಯಂಕರ್: ಹೋಳಿ ಹಬ್ಬದ ಪ್ರಯುಕ್ತ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಉಪ ರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ದೇಶವಾಸಿಗಳಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ ಮೂಲಕ ರಾಷ್ಟ್ರಪತಿಗಳು ತಮ್ಮ ಸಂದೇಶದಲ್ಲಿ, “ಬಣ್ಣಗಳ ಹಬ್ಬವಾದ ಹೋಳಿ ಜನರ ಜೀವನ
Holi


ನವದೆಹಲಿ, 04 ಮಾರ್ಚ್ (ಹಿ.ಸ.):

ಆ್ಯಂಕರ್:

ಹೋಳಿ ಹಬ್ಬದ ಪ್ರಯುಕ್ತ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಉಪ ರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ದೇಶವಾಸಿಗಳಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ ಮೂಲಕ ರಾಷ್ಟ್ರಪತಿಗಳು ತಮ್ಮ ಸಂದೇಶದಲ್ಲಿ, “ಬಣ್ಣಗಳ ಹಬ್ಬವಾದ ಹೋಳಿ ಜನರ ಜೀವನದಲ್ಲಿ ಪ್ರೀತಿ ಮತ್ತು ಭರವಸೆಯನ್ನು ತುಂಬುತ್ತದೆ. ಈ ಹಬ್ಬವು ಏಕತೆ ಮತ್ತು ಸಹೋದರತ್ವವನ್ನು ಬಲಪಡಿಸುವ ಪವಿತ್ರ ಸಂದರ್ಭವಾಗಿದೆ. ಪ್ರತಿಯೊಬ್ಬರ ಜೀವನದಲ್ಲೂ ಸಂತೋಷ ನೆಲೆಸಲಿ. ಅಭಿವೃದ್ಧಿ ಹೊಂದಿದ ರಾಷ್ಟ್ರ ನಿರ್ಮಾಣದ ದಿಸೆಯಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡೋಣ” ಎಂದು ಕರೆ ನೀಡಿದ್ದಾರೆ.

ಉಪ ರಾಷ್ಟ್ರಪತಿಗಳು ಹೋಳಿಯ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಮಹತ್ವವನ್ನು ಉಲ್ಲೇಖಿಸಿ, “ಹೋಳಿ ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಸಾರುವ ಹಬ್ಬ. ವಸಂತಕಾಲದ ಆಗಮನದೊಂದಿಗೆ ನವೀಕರಣ, ಭರವಸೆ ಮತ್ತು ಚೈತನ್ಯದ ಸಂಕೇತವಾಗಿದೆ. ನಮ್ಮ ಶ್ರೀಮಂತ ಪರಂಪರೆಯಲ್ಲಿ ಆಳವಾಗಿ ಬೇರೂರಿರುವ ಈ ಹಬ್ಬವು ಪರಸ್ಪರ ಗೌರವ, ಸಹೋದರತ್ವ ಮತ್ತು ಹಂಚಿಕೆಯ ಸಂತೋಷವನ್ನು ಪ್ರತಿಬಿಂಬಿಸುತ್ತದೆ” ಎಂದು ಹೇಳಿದ್ದಾರೆ.

ಹೋಳಿ ಹಬ್ಬದ ಬಣ್ಣಗಳು ಪ್ರತಿಯೊಬ್ಬರ ಹೃದಯದಲ್ಲೂ ಸಂತೋಷ ಹಾಗೂ ಹೊಸ ಚೈತನ್ಯ ತುಂಬಲಿ. ಹೆಚ್ಚು ಒಳಗೊಂಡ, ಶಾಂತಿಯುತ ಮತ್ತು ಅಭಿವೃದ್ಧಿಶೀಲ ಭಾರತದ ನಿರ್ಮಾಣಕ್ಕೆ ಈ ಹಬ್ಬ ಸ್ಫೂರ್ತಿಯಾಗಲಿ ಎಂದು ಇಬ್ಬರು ಗಣ್ಯರು ತಮ್ಮ ಸಂದೇಶದಲ್ಲಿ ಆಶಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande