
ನವದೆಹಲಿ, 04 ಮಾರ್ಚ್ (ಹಿ.ಸ.):
ಆ್ಯಂಕರ್:ಹೋಳಿ ಹಬ್ಬವು ನಮ್ಮ ಬಹುವರ್ಣದ ಹಾಗೂ ಬಹುಸಂಸ್ಕೃತಿಯ ಸಮಾಜದ ಆತ್ಮವನ್ನು ಪ್ರತಿಬಿಂಬಿಸುವ ಹಬ್ಬವಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಹೋಳಿ ಹಬ್ಬದ ಅಂಗವಾಗಿ ಸಾಮಾಜಿಕ ಮಾಧ್ಯಮ ಎಕ್ಸನಲ್ಲಿ ದೇಶದ ಜನತೆಗೆ ಶುಭಾಶಯ ಕೋರಿರುವ ಅವರು, ಈ ಹಬ್ಬವು ಶತಮಾನಗಳಿಂದ ನಮ್ಮ ನಾಗರಿಕತೆಯ ವಿಶಿಷ್ಟ ಲಕ್ಷಣವಾಗಿರುವ ವೈವಿಧ್ಯತೆಯಲ್ಲಿ ಏಕತೆ, ಪರಸ್ಪರ ಸಾಮರಸ್ಯ ಮತ್ತು ಸಹೋದರತ್ವದ ಸಂಪ್ರದಾಯಗಳನ್ನು ಆಚರಿಸುವುದಾಗಿದೆ ಎಂದು ಹೇಳಿದ್ದಾರೆ.
ಅಂತರಗಳನ್ನು ಅಳಿಸಿ, ಹೃದಯಗಳನ್ನು ಹತ್ತಿರ ಮಾಡುವ ಈ ಸಂತೋಷದಾಯಕ ಸಂದರ್ಭದಲ್ಲಿ ಎಲ್ಲರೂ ಪರಸ್ಪರ ಪ್ರೀತಿ ಮತ್ತು ಒಗ್ಗಟ್ಟಿನ ಸಂದೇಶವನ್ನು ಹರಡೋಣ ಎಂದು ಖರ್ಗೆ ಕರೆ ನೀಡಿದ್ದಾರೆ.
ನಿಮ್ಮ ಜೀವನವು ಸದಾ ಸಂತೋಷದ ಬಣ್ಣಗಳಿಂದ ಕಂಗೊಳಿಸಲಿ ಎಂದು ಅವರು ತಮ್ಮ ಶುಭಾಶಯ ಸಂದೇಶದಲ್ಲಿ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa