ಗಿಡಗಳ ಟೊಂಗೆ ಕಟಾವಣೆ ಕುರಿತು ಪ್ರಕಟಣೆ
ಗದಗ, 04 ಮಾರ್ಚ್ (ಹಿ.ಸ.) ಆ್ಯಂಕರ್:ಗದಗ ಶಾಖಾ ವ್ಯಾಪ್ತಿಯಲ್ಲಿ ನಾಗಾವಿ ಕ್ರಾಸ್ನಿಂದ ಮುಳಗುಂದದ ಬಸಾಪೂರ ಕ್ರಾಸ್ವರೆಗೆ ರಸ್ತೆ ಬದಿಯಲ್ಲಿರುವ ಗಿಡಗಳ ಟೊಂಗೆ ಕಟಾವಣೆ ಕುರಿತು ನೀಡಲಾಗಿದ್ದ ಆಕ್ಷೇಪಣಾ ಆಹ್ವಾನ ಪ್ರಕಟಣೆಯನ್ನು ಕಾರಣಾಂತರಗಳಿಂದ ಹಿಂಪಡೆಯಲಾಗಿದೆ ಎಂದು ಗದಗ ಉಪವಿಭಾಗದ ಸಹಾಯಕ ಅರಣ್ಯ ಸಂರಕ್
ಫೋಟೋ


ಗದಗ, 04 ಮಾರ್ಚ್ (ಹಿ.ಸ.)

ಆ್ಯಂಕರ್:ಗದಗ ಶಾಖಾ ವ್ಯಾಪ್ತಿಯಲ್ಲಿ ನಾಗಾವಿ ಕ್ರಾಸ್ನಿಂದ ಮುಳಗುಂದದ ಬಸಾಪೂರ ಕ್ರಾಸ್ವರೆಗೆ ರಸ್ತೆ ಬದಿಯಲ್ಲಿರುವ ಗಿಡಗಳ ಟೊಂಗೆ ಕಟಾವಣೆ ಕುರಿತು ನೀಡಲಾಗಿದ್ದ ಆಕ್ಷೇಪಣಾ ಆಹ್ವಾನ ಪ್ರಕಟಣೆಯನ್ನು ಕಾರಣಾಂತರಗಳಿಂದ ಹಿಂಪಡೆಯಲಾಗಿದೆ ಎಂದು ಗದಗ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ ರಸ್ತೆ ಸುರಕ್ಷತೆ ಹಾಗೂ ಸಂಚಾರ ಸೌಕರ್ಯ ದೃಷ್ಟಿಯಿಂದ, ನಾಗಾವಿ ಕ್ರಾಸ್ನಿಂದ ಬಸಾಪೂರ ಕ್ರಾಸ್ವರೆಗೆ ರಸ್ತೆಯ ಎಡಬದಿಯಲ್ಲಿ ಇರುವ 47 ಗಿಡಗಳ ಟೊಂಗೆಗಳು ಮತ್ತು ಬಲಬದಿಯಲ್ಲಿ ಇರುವ 45 ಗಿಡಗಳ ಟೊಂಗೆಗಳು ಸೇರಿದಂತೆ ಒಟ್ಟು 92 ಗಿಡಗಳ ಟೊಂಗೆಗಳನ್ನು ಕಟಾವಣೆ ಮಾಡುವ ಬಗ್ಗೆ ಸಾರ್ವಜನಿಕರ ಗಮನಕ್ಕೆ ತರಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ತಮ್ಮ ತಕರಾರು ಅಥವಾ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು.

ಆಕ್ಷೇಪಣೆ ಸಲ್ಲಿಸಲು ಇಚ್ಛಿಸುವವರು ಗದಗ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮರ ಅಧಿಕಾರಿಗಳಿಗೆ ಬಿಂಕದಕಟ್ಟಿ ಕಚೇರಿಯಲ್ಲಿ ಲಿಖಿತ ರೂಪದಲ್ಲಿ ಮಾರ್ಚ್ 5 ರೊಳಗಾಗಿ ಕಚೇರಿ ವೇಳೆಯಲ್ಲಿ ಸಲ್ಲಿಸಬೇಕೆಂದು ತಿಳಿಸಲಾಗಿತ್ತು. ಅಲ್ಲದೆ, ಮಾರ್ಚ್ 6 ರಂದು ಬೆಳಿಗ್ಗೆ 10.30 ಗಂಟೆಯಿಂದ ಮಧ್ಯಾಹ್ನ 12.30 ಗಂಟೆಯವರೆಗೆ ನಾಗಾವಿ ಕ್ರಾಸ್ ಮತ್ತು ಮುಳಗುಂದದ ಬಸಾಪೂರ ಕ್ರಾಸ್ ಪ್ರದೇಶದಲ್ಲೇ ಸ್ಥಳ ಪರಿಶೀಲನೆ ವೇಳೆ ಲಿಖಿತ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗುವುದು ಎಂದು ಪ್ರಕಟಣೆ ಹೊರಡಿಸಲಾಗಿತ್ತು.

ಆದರೆ ಇದೀಗ ಅನಿವಾರ್ಯ ಕಾರಣಗಳಿಂದ ಗಿಡಗಳ ಟೊಂಗೆ ಕಟಾವಣೆ ಕುರಿತು ಆಕ್ಷೇಪಣೆ ಆಹ್ವಾನಿಸುವ ಪ್ರಕಟಣೆಯನ್ನು ಸಂಪೂರ್ಣವಾಗಿ ಹಿಂಪಡೆಯಲಾಗಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಮುಂದಿನ ಕ್ರಮಗಳ ಕುರಿತು ಸೂಕ್ತ ಸಮಯದಲ್ಲಿ ಹೊಸ ಪ್ರಕಟಣೆ ಹೊರಡಿಸಲಾಗುವುದು ಎಂದು ತಿಳಿಸಲಾಗಿದೆ.

ಈ ನಿರ್ಧಾರದಿಂದ ಪರಿಸರ ಹಿತಾಸಕ್ತಿ ಹೊಂದಿರುವ ಸಾರ್ವಜನಿಕರು ಹಾಗೂ ಸ್ಥಳೀಯರು ತಾತ್ಕಾಲಿಕವಾಗಿ ನೆಮ್ಮದಿ ವ್ಯಕ್ತಪಡಿಸಿದ್ದು, ರಸ್ತೆ ಸುರಕ್ಷತೆ ಮತ್ತು ಪರಿಸರ ಸಂರಕ್ಷಣೆ ಎರಡನ್ನೂ ಸಮತೋಲನಗೊಳಿಸುವಂತೆ ಕ್ರಮ ಕೈಗೊಳ್ಳುವಂತೆ ನಿರೀಕ್ಷೆ ವ್ಯಕ್ತವಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande