ಶ್ರೀಶೈಲಕ್ಕೆ 20ಲಕ್ಷ ಜೋಡೆತ್ತಿನ ನಂದಿ ಸೇನೆ ಯಾತ್ರೆಗೆ ಸಿದ್ಧತೆ
ವಿಜಯಪುರ, 04 ಮಾರ್ಚ್ (ಹಿ.ಸ.) ಆ್ಯಂಕರ್ : ನಂದಿ ಕೂಗು ಅಭಿಯಾನ ಹಾಗೂ ನಂದಿ ಸೇನೆ ಸಂಘಟನೆಯ ಅಡಿಯಲ್ಲಿ ಶ್ರೀಶೈಲ ಜಗದ್ಗುರುಗಳ ಮಾರ್ಗದರ್ಶನದಲ್ಲಿ ಜರಗುವ ನಂದಿ ಸೇನೆ ರಥಯಾತ್ರೆಯನ್ನು ಭಾರತದ ಉಪರಾಷ್ಟ್ರಪತಿಗಳಾದ ಸಿ ಪಿ ರಾಧಾಕೃಷ್ಣನ್ ಅವರು ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಯಡೂರು ಶ್ರೀ ವೀರಭದ್
ಶ್ರೀಶೈಲಕ್ಕೆ 20ಲಕ್ಷ ಜೋಡೆತ್ತಿನ ನಂದಿ ಸೇನೆ ಯಾತ್ರೆಗೆ ಸಿದ್ಧತೆ


ವಿಜಯಪುರ, 04 ಮಾರ್ಚ್ (ಹಿ.ಸ.)

ಆ್ಯಂಕರ್ : ನಂದಿ ಕೂಗು ಅಭಿಯಾನ ಹಾಗೂ ನಂದಿ ಸೇನೆ ಸಂಘಟನೆಯ ಅಡಿಯಲ್ಲಿ ಶ್ರೀಶೈಲ ಜಗದ್ಗುರುಗಳ ಮಾರ್ಗದರ್ಶನದಲ್ಲಿ ಜರಗುವ ನಂದಿ ಸೇನೆ ರಥಯಾತ್ರೆಯನ್ನು ಭಾರತದ ಉಪರಾಷ್ಟ್ರಪತಿಗಳಾದ ಸಿ ಪಿ ರಾಧಾಕೃಷ್ಣನ್ ಅವರು ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಯಡೂರು ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ದಿನಾಂಕ 5-03-2026 ರಂದು ಚಾಲನೆ ನೀಡಲಿದ್ದಾರೆ ಎಂದು ಸಮಿತಿ ಸದಸ್ಯರು ತಿಳಿಸಿದ್ದಾರೆ.

ವಿಜಯಪುರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಮಿತಿ ಸಮಸ್ಯರು, ನಂದಿ ಸೇನೆ ರಥಯಾತ್ರೆ ಸಾಗುವ ಮಾರ್ಗದಲ್ಲಿ ಬರುವ ಪ್ರಮುಖ ಸ್ಥಳಗಳಲ್ಲಿ ರೈತ ಸಮಾವೇಶಗಳು ಜರಗಲಿದ್ದು, ಮಾರ್ಚ್ 5 ಕಾಗವಾಡ, ಮಾರ್ಚ್ 6 ಅಥಣಿ, ಮಾರ್ಚ್ 7 ಹೊನವಾಡ, ಮಾರ್ಚ್ 8 ವಿಜಯಪುರ ಮತ್ತು ಮನಗೂಳಿ, ಮಾರ್ಚ್ 9 ಬಸವನಬಾಗೇವಾಡಿ ಮತ್ತು ಹೂವಿನ ಹಿಪ್ಪರಗಿ, ಮಾರ್ಚ್ 10 ತಾಳಿಕೋಟಿ ಮತ್ತು ಹುಣಸಗಿ, ಮಾರ್ಚ್ 11 ದೇವದುರ್ಗ ಹಾಗೂ ಮಾರ್ಚ್ 12 ರಂದು ರಾಯಚೂರ ದಲ್ಲಿ ರೈತ ಸಮಾವೇಶಗಳು ಜರುಗಲಿವೆ ಎಂದರು.

ಕೊನೆಗೆ ಶ್ರೀಶೈಲಕ್ಕೆ 15-03-26 ರಂದು ನಂದಿ ಸೇನೆ ರಥಯಾತ್ರೆ ತಲುಪಿದ ನಂತರ ಸಾವಿರಾರು ಗ್ರಾಮಗಳಿಂದ ಆಗಮಿಸಿದ ಜೋಡೆತ್ತಿನ ರೈತರ ಸಮ್ಮುಖದಲ್ಲಿ ಶ್ರೀಶೈಲ ಮಲ್ಲಯ್ಯನ ಸನ್ನಿಧಾನದಲ್ಲಿ ನಂದಿ ಸೇನೆ ರಥಯಾತ್ರೆಯ ಸಮಾರೋಪ ಸಮಾರಂಭ ಜರುಗಲಿದೆ.

ನಂದಿ ಸೇನೆ ರಥ ಯಾತ್ರೆ ಸಾಗುವ ದಾರಿಯಲ್ಲಿ ಬರುವ ಗ್ರಾಮಗಳ ರೈತರು ಜೋಡೆತ್ತಿನ ಬಂಡಿಗಳಿಂದ ನಂದಿ ಸೇನೆ ರಥಯಾತ್ರೆಯನ್ನು ಸ್ವಾಗತಿಸಿ ಬೀಳ್ಕೊಡುವ ಮೂಲಕ ಶ್ರೀಶೈಲ ಮಲ್ಲಯ್ಯನಿಗೆ ಭಕ್ತಿ ಸೇವೆ ಸಲ್ಲಿಸಲಿರುವ ಐತಿಹಾಸಿಕ ಕ್ಷಣಕ್ಕೆ ನಂದಿ ಸೇನೆ ರಥಯಾತ್ರೆ ಸಾಕ್ಷಿಯಾಗಲಿದೆ.

ರಾಜ್ಯದಲ್ಲಿರುವ 20 ಲಕ್ಷ ಜೋಡೆತ್ತಿನ ಕೃಷಿಕರು ನಂದಿ ಸೇನೆ ಎಂಬ ಸಂಘಟನೆ ಮೂಲಕ ಪ್ರತಿ ಗ್ರಾಮಗಳಲ್ಲಿ ಒಂದಾಗಲು ನಂದಿ ಸೇನೆ ರಥಯಾತ್ರೆ ಪ್ರೇರಕ ಶಕ್ತಿಯಾಗಲಿದೆ. ನಂದಿ ಶಕ್ತಿಯಿಂದ ಭೂಮಿಯ ಜೀವಂತಿಕೆ ಹೆಚ್ಚಾಗುವುದು ತೈಲ ಶಕ್ತಿಯಿಂದ ಭೂಮಿಯ ಜೀವಂತಿಕೆ ನಾಶವಾಗುವುದು. ಕರ್ನಾಟಕ ರಾಜ್ಯದ 60 ಭೂಮಿಯ ಸತ್ವ ನಾಸವಾಗಿ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿರುವುದಕ್ಕೆ ಮೂಲ ಕಾರಣ ಕೇವಲ ತೈಲ ಶಕ್ತಿ ಅವಲಂಬಿತ ಕೃಷಿಗೆ ಆದ್ಯತೆ ನೀಡುತ್ತಿರುವುದಾಗಿದೆ. ತೈಲ ಶಕ್ತಿ ದೊರೆಯುವ ಪ್ರದೇಶದ ಜೀವಂತಿಕೆ ಕೂಡ ಕೊನೆಗೆ ನಾಶವಾಗುವುದು ಎಂಬುದು ಮಧ್ಯ ಪ್ರಾಚ್ಯದಲ್ಲಿ ಪ್ರಾರಂಬವಾದ ಯುದ್ಧದಿಂದ ತಿಳಿಯುತ್ತಿದೆ.

ಜೋಡೆತ್ತಿನ ಕೃಷಿ ಆಧಾರಿತ ಬಸವ ತತ್ವದಿಂದ ಸ್ವಾವಲಂಬಿ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಿಸಲು ಸಾಧ್ಯವಿದೆ ಎನ್ನುವುದು ಇತಿಹಾಸ, ವಚನ ಸಾಹಿತ್ಯ ಹಾಗೂ ವಿಜ್ಞಾನದಿಂದ ತಿಳಿಯುತ್ತಿದೆ. ಅದಕ್ಕಾಗಿ, ಜೋಡೆತ್ತಿನ ರೈತರು ನಿರ್ವಹಿಸುತ್ತಿರುವ ಸಾಮಾಜಿಕ ಜವಾಬ್ದಾರಿ ಕುರಿತು ಜನರಲ್ಲಿ ಅರಿವು ಮೂಡಿಸಿ ಕರ್ನಾಟಕ ರಾಜ್ಯದಲ್ಲಿರುವ 20 ಲಕ್ಷ ಜೋಡೆತ್ತಿನ ಕೃಷಿಕರನ್ನು ಒಗ್ಗೂಡಿಸುವುದು. ಜೋಡೆತ್ತಿನ ಕೃಷಿಕರನ್ನು ಬಸವ ತತ್ವದ ಮೂಲ ಬೇರುಗಳೆಂದು ಗುರುತಿಸಿ ಬಸವ ತತ್ವ ಪುನರುತ್ಥಾನಕ್ಕಾಗಿ 10% ಬಡ್ಜೆಟ್ ಮೀಸಲಿಡುವ ಕಾನೂನು ಜಾರಿಗಾಗಿ ಹಾಗೂ ಜೋಡೆತ್ತಿನ ಕೃಷಿಕರಿಗೆ ಪ್ರತಿ ತಿಂಗಳು ರೂ. 11000 ಪ್ತೋತ್ಸಾಹ ಧನ ನೀಡುವ ಯೋಜನೆ ಜಾರಿಗಾಗಿ ರಾಜ್ಯದ ಬಹು ಜನರ ಅಭಿಪ್ರಾಯ ಕ್ರೋಢೀಕರಿಸುವುದು ನಂದಿ ಸೇನೆ ರಥಯಾತ್ರೆಯ ಮೂಲ ಉದ್ದೇಶವಾಗಿದೆ. ರಥಯಾತ್ರೆಯಲ್ಲಿ ಭಾಗವಹಿಸಲು 9449662047 ಅಥವಾ 9901447325 ಸಂಖ್ಯೆಗೆ ಸಂಪರ್ಕಿಸಲು ಕೋರಲಾಗಿದೆ.

ಪತ್ರಿಕಾ ಗೋಷ್ಠಿಯಲ್ಲಿ ನಿವೃತ್ತ ಸಹಾಯಕ ಕೃಷಿ ನಿರ್ದೇಶಕರಾದ ಎಸ್ ಜಿ ನಾಡಗೌಡ, ನಂದಿ ಕೂಗು ಅಭಿಯಾನದ ರೂವಾರಿಗಳಾದ ಬಸವರಾಜ ಬಿರಾದಾರ ಅವರು ನಂದಿ ಸೇನೆ ರಥಯಾತ್ರೆಯ ಉದ್ದೇಶದ ಕುರಿತು ವಿವರಿಸಿದರು. ನಿವೃತ್ತ ಸಹಾಯಕ ಕೃಷಿ ನಿರ್ದೇಶಕರಾದ ಸಂಗಮೇಶ ಕಾಮನ್ನವರ, ಬಸವರಾಜ ಕೋನರಡ್ಡಿ, ಬಾಳಾಸೇಹಬ ಈಶ್ವರಗೊಂಡ, ಅಭಿಶೇಕ ಬಿರಾದಾರ ಹಾಗೂ ಇತರರು ಇದ್ದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande