ಬಳ್ಳಾರಿ : `ಹುಲಿಕುಂಟೆ ಶ್ರೀ' ಪ್ರಶಸ್ತಿ ಪ್ರದಾನ
ಬಳ್ಳಾರಿ, 30 ಮಾರ್ಚ್ (ಹಿ.ಸ.) ಆ್ಯಂಕರ್ : ತೊಗಲುಗೊಂಬೆ ಒತ್ತಡಗಳನ್ನು ಕಳೆದುಕೊಳ್ಳುವ ಕಲೆಯಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ ಡಾ. ಮಧುಸೂಧನ ಕಾರಿಗನೂರು ಅವರು ತಿಳಿಸಿದ್ದಾರೆ. ತೊಗಲುಗೊಂಬೆ ಕಲಾವಿದ ದಿ. ಶ್ರೀ ಹುಲೆಪ್ಪನವರ ಸ್ಮರಣಾರ್ಥವಾಗಿ ಶ್ರೀ ಹುಲಿಕುಂಟೆರಾಯ ತೊಗಲುಗೊಂಬೆ
ಬಳ್ಳಾರಿ : `ಹುಲಿಕುಂಟೆ ಶ್ರೀ' ಪ್ರಶಸ್ತಿ ಪ್ರದಾನ


ಬಳ್ಳಾರಿ : `ಹುಲಿಕುಂಟೆ ಶ್ರೀ' ಪ್ರಶಸ್ತಿ ಪ್ರದಾನ


ಬಳ್ಳಾರಿ, 30 ಮಾರ್ಚ್ (ಹಿ.ಸ.)

ಆ್ಯಂಕರ್ : ತೊಗಲುಗೊಂಬೆ ಒತ್ತಡಗಳನ್ನು ಕಳೆದುಕೊಳ್ಳುವ ಕಲೆಯಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ ಡಾ. ಮಧುಸೂಧನ ಕಾರಿಗನೂರು ಅವರು ತಿಳಿಸಿದ್ದಾರೆ.

ತೊಗಲುಗೊಂಬೆ ಕಲಾವಿದ ದಿ. ಶ್ರೀ ಹುಲೆಪ್ಪನವರ ಸ್ಮರಣಾರ್ಥವಾಗಿ ಶ್ರೀ ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ಟ್ರಸ್ಟ್ ದೊಡ್ಡನಗೌಡ ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ರಾಜ್ಯಮಟ್ಟದ ಹುಲಿಕುಂಟೆ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂಡೂರಿನ ಪ್ರಭುದೇವರ ಮಠದ ಪ್ರಭು ಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ, ಜೀವನದ ಮೌಲ್ಯಗಳನ್ನು ನಾವು ರಂಗಭೂಮಿಯ ಮೇಲೆ ಕಲಿಯುತ್ತೇವೆ. ರಂಗಭೂಮಿಯು ಜಗತ್ತಿನ ಆಗುಹೋಗುಗಳಿಗೆ ಪ್ರೇರಣೆ ನೀಡಲಿದೆ ಎಂದರು.

ಜೆಟಿ ಫೌಂಡೇಶನ್ನ ಅಧ್ಯಕ್ಷ ತಿಮ್ಮಪ್ಪ ಜೋಳದರಾಶಿ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ, ತೊಗಲುಗೊಂಬೆಯು ದೇಶ ವಿದೇಶದಲ್ಲಿ

ಸಾಕಷ್ಟು ಜನಪ್ರಿಯತೆಯನ್ನು ಪಡೆದಿದೆ ಎಂದರು.

ಡಾ. ರಾಂಕಿರಣ್, ಜಿಲಾನಿ ಭಾಷಾ, ದೊಡ್ಡಬಸಪ್ಪ ಯಾಟಿ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶ್ರೀ ಹುಲಿಕುಂಟೆರಾಯ ತೊಗಲುಗೊಂಬೆ ಕಲಾತಂಡವು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 27 ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಿತು.

ಮಲ್ಲಿಕಾರ್ಜುನ ತುರನೂರ್ ಅವರಿಂದ ಸುಗಮ ಸಂಗೀತ, ಎಸ್ಕೆಆರ್ ಜಿಲಾನಿ ಭಾಷಾ ಅವರ ತಂಡವು ಸಮೂಹ ನೃತ್ಯ ಮಲ್ಲಿಕಾರ್ಜುನ ಸ್ವಾಮಿ ಮತ್ತು ತಂಡದಿಂದ ರೇಣುಕಾ ಮಹಾತ್ಮೆ ಬೈಲಾಟ ಪ್ರದರ್ಶನ ನಡೆಸಲಾಯಿತು.

ಸಂಸ್ಥೆಯ ಅಧ್ಯಕ್ಷ ಕೆ. ಹೊನ್ನೂರಸ್ವಾಮಿ ಸ್ವಾಗತ ಕೋರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಸ್ಥೆಯ ಕಾರ್ಯದರ್ಶಿಯಾಗಿರುವ ಲಕ್ಷ್ಮಿದೇವಿ, ಬಸವರಾಜ ಅಮಾತಿ ಮತ್ತು ವಿಷ್ಣು ಹಡಪದ ಅವರು ಕಾರ್ಯಕ್ರಮ ನಿರೂಪಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande