
ಗದಗ, 30 ಮಾರ್ಚ್ (ಹಿ.ಸ.)
ಆ್ಯಂಕರ್:- ವಿಧಾನಸಭೆಯ ಅಧಿವೇಶನದಲ್ಲಿ ಕಾಂಗ್ರೆಸ್ ಶಾಸಕರು ಐಪಿಎಲ್ ಪಂದ್ಯಗಳ ಟಿಕೆಟ್ಗಳನ್ನು ತಮ್ಮ ಪರಿವಾರದ ಸದ್ಯಸರಿಗೆ ಉಚಿತವಾಗಿ ನೀಡಬೇಕು, ಸಾರ್ವಜನಿರೊಂದಿಗೆ ತಮಗೆ ಕುಂತು ಪಂದ್ಯಗಳನ್ನು ನೋಡಲು ಆಗುವುದಿಲ, ನಾವು ವಿಐಪಿಗಳೆಂದು ಉಚಿತ ಟಿಕೆಟ್ಗಾಗಿ ಬೇಡಿಕೆ ಇಟ್ಟ ಕಾಂಗ್ರೆಸ್ ಶಾಸಕರು ಸಣ್ಣತನ ಪ್ರದರ್ಶನ ಮಾಡಿದರೆ ಎಂದು ಜೆಡಿಎಸ್ ಪಕ್ಷದ ರಾಜ್ಯ ವಕ್ತರ ವೆಂಕನಗೌಡ ಆರ್. ಗೋವಿಂದಗೌಡ್ರ ಕಾಂಗ್ರೆಸ್ ಶಾಸಕರ ವರ್ತನೆಯನು ಖಂಡಿಸಿದ್ದಾರೆ.
ಕಾಂಗ್ರೆಸ್ ಶಾಸಕ ಕಾಶಪ್ಪನವರ ಶಾಸಕರಿಗೂ ಹಾಗೂ ಅವರ ಪರಿವರದವರಿಗೆ ಪ್ರತ್ಯೇಕ ಸ್ಟಾಂಡ್ ಮಾಡಬೇಕಂಬ ಬೇಡಿಕೆ ಕಾಂಗ್ರೆಸ್ ಪಕ್ಷದ ವಿಐಪಿ ಸಂಸ್ಕೃತಿ ಹಾಗೂ ಕಾಂಗ್ರೆಸ್ ಮನಸ್ಥಿತಿಯನು ಬಿಚ್ಚಿಟ್ಟಿದಾರೆ . ಸಾಮಾನ್ಯ ಜನರೊಂದಿದೆ ನಾವು ಏಕೆ ಕುಳಿತುಕೊಳಬೇಕು ಎಂದು ಕೇಳಿದ ಕಾಶಪ್ಪನವರಿಗೆ ಚುನಾವಣೆಯಲ್ಲಿ ಇದೆ ಸಾಮಾನ್ಯ ಜನರ ಕಾಲಿಗೆ ಬಿದು ವೋಟ್ ಹಾಕುವಂತೆ ಭಿಕ್ಷೆ ಬೇಡಿದು ಮರೆತಿರುವಂತೆ ಕಾಣುತದೇ ಎಂದು ವೆಂಕನಗೌಡ ಆರ್. ಗೋವಿಂದಗೌಡ್ರ ಕಾಶಪ್ಪನವ್ರ ಹೇಳಿಕೆಯನು ಖಂಡಿಸಿದ್ದಾರೆ.
ಶಾಸಕರಾದವರಿಗೆ ಎಲ್ಲಾ ಸೌಲಭ್ಯಗಳಿದು ತಮ್ಮ ಕುಟಂಬದ ಸದ್ಯಸರಿಗೆ ಐಪಿಎಲ್ ಟಿಕೆಟ್ ಖರೀದಿಸಲು ಆಗುವುದಿಲವೇ? ಎಂದು ಪ್ರಶ್ನಿಸಿದಾರೆ. ಈಗಾಗಲೇ ನಮ್ಮ ಪಕ್ಷದ ಯುವ ನಾಯಕರಾದ ನಿಖಿಲ್ ಕುಮಾರಸ್ವಾಮಿ ಅವರು ಉಚಿತ ಟಿಕೆಟ್ ಬೇಡಿಕೆಯನು ವಿರೋಧಿಸಿದಾರೆ. ಜೆಡಿಎಸ್ ಪಕ್ಷ ರೈತರ, ಯುವಕರ, ಮಹಿಳೆಯರ ಕಲ್ಯಾಣಕ್ಕಾಗಿ ವಿಧಾನಸಭೆಯ ಕಲಾಪಗಳು ಉಪಯೋಗ ಆಗಬೇಕೆಂಬ ನಿಲುವು ಹೊಂದಿದೆ. ಜೆಡಿಎಸ್ ಪಕ್ಷ ಉಚಿತ ಟಿಕೆಟ್ ಹಾಗೂ ಪ್ರತೇಕ ಸ್ಟಾಂಡ್ ಬೇಡಿಕೆಗೆ ವಿರೋಧವಿದೆ ಎಂದು ಜೆಡಿಎಸ್ ಪಕ್ಷದ ರಾಜ್ಯ ವಕ್ತರಾ ವೆಂಕನಗೌಡ ಆರ್. ಗೋವಿಂದಗೌಡ್ರ ಪಕ್ಷದ ನಿಲುವನ್ನು ಸ್ಪಷ್ಟ ಪಡಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP