

ಕೊಪ್ಪಳ, 29 ಮಾರ್ಚ್ (ಹಿ.ಸ.)
ಆ್ಯಂಕರ್ : ನಾದಯೋಗಿ ಗುರು ಪುಟ್ಟರಾಜ ಸಂಗೀತ ಮತ್ತು ಲಲಿತಕಲಾ ಸಂಸ್ಥೆ ಕೊಪ್ಪಳ ವತಿಯಿಂದ ಭಾಗ್ಯನಗರದ ಮಾರ್ಕಡೇಶ್ವರದ ಬಯಲು ವೇದಿಕೆಯಲ್ಲಿ “ವಸಂತ ಗಾನ ವೈಭವ” ಎಂಬ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಹಿರಿಯ ಕಲಾವಿದರಾದ ರಾಮಚಂದ್ರಪ್ಪ ಉಪ್ಪಾರರವರು ಹಾರ್ಮೋನಿಯಂ ನುಡಿಸುವುದರೊಂದಿಗೆ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು.
ಅಧ್ಯಕ್ಷತೆಯನ್ನು ಮಾರುತಿ ದೊಡ್ಡಮನಿ ವಹಿಸಿದ್ದು ಮುಖ್ಯ ಆತಿಥಿಗಳಾಗಿ ನಂದೀಶ ಹಿರೇಮಠ ಹಾಗೂ ರಾಘವೇಂದ್ರ ಗಂಗಾವತಿ ಆಸೀನರಾಗಿದ್ದರು.
ನಾಗರಾಜ ಶ್ಯಾವಿಯವರಿಂದ ಸುಗಮ ಸಂಗೀತ, ಮಾರುತಿ ದೊಡ್ಡಮನಿಯವರಿಂದ ವಚನ ಸಂಗೀತ, ರಾಮಚಂದ್ರಪ್ಪ ಉಪ್ಪಾರರಿಂದ ದಾಸವಾಣಿ, ಎಂ ಎಂ ವಂದಾಲರವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಜರುಗಿದವು.
ವಾದ್ಯವೃಂದದಲ್ಲಿ ಕೀಬೋರ್ಡ್ನಲ್ಲಿ ರಾಮಚಂದ್ರಪ್ಪ ಉಪ್ಪಾರ್, ಗಿಟಾರ್ ನಲ್ಲಿ ತಿಪ್ಪೇಶ ಜೆ.ಹೆಚ್.ಎಂ, ತಬಲದಲ್ಲಿ ರಾಘವೇಂದ್ರ ಗಂಗಾವತಿ ಹಾಗೂ ಮಾರುತಿ ದೊಡ್ಡಮನಿ, ಡೋಲಕ್ ನಲ್ಲಿ ನಂದೀಶ ಹಿರೇಮಠ, ರಿದಮ ಪ್ಯಾಡನಲ್ಲಿ ಸಂಜನ ಬೆಲ್ಲದ ಸಾಥ ನೀಡಿದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್