
ಹೊಸಪೇಟೆ, 29 ಮಾರ್ಚ್ (ಹಿ.ಸ.)
ಆ್ಯಂಕರ್ : ಕೇಂದ್ರ ಪುರಸ್ಕೃತ ಯೋಜನೆಯಾದ ಅಮೃತ್ 2.0 ಅಭಿಯಾನದ ಅಮೃತ್ ಮಿತ್ರ ಕಾರ್ಯಕ್ರಮದ ತಾಂತ್ರಿಕ ಮತ್ತು ತಾಂತ್ರಿಕೇತರ ಚಟುವಟಿಕೆ ಕಾರ್ಯಕ್ರಮದಡಿ ನಗರಸಭೆ ವ್ಯಾಪ್ತಿಯ 6 ಉದ್ಯಾನವನ (ಪಾರ್ಕ್) ನಿರ್ವಹಣೆ ಮಾಡಲು ಡೇ-ನಲ್ಮ್ ಅಭಿಯಾನದಡಿ ರಚಿತವಾದಂತ ಎಂ.ಐ.ಎಸ್ ನೊಂದಣಿಯಾಗಿರುವ ಅರ್ಹ ಮಹಿಳಾ ಸ್ವ-ಸಹಾಯ ಸಂಘಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯನ್ನು ಮಹಿಳಾ ಸ್ವ-ಸಹಾಯ ಸಂಘಗಳ ಮೂಲಕ ನಗರ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿಯೂ ಅನುಷ್ಠಾನಗೊಳಿಸಲು ಆಸಕ್ತ ಹೊಂದಿರುವ ಮಹಿಳಾ ಸ್ವ-ಸಹಾಯ ಸಂಘಗಳು ಭಾಗವಹಿಸಬಹುದು. ಆಸಕ್ತ ಮಹಿಳಾ ಸ್ವ-ಸಹಾಯ ಸಂಘಗಳು ನಗರಸಭೆ ಕಾರ್ಯಾಲಯದಲ್ಲಿ ಅರ್ಜಿ ನಮೂನೆ ಪಡೆದು ಏಪ್ರಿಲ್ 9ರೊಳಗಾಗಿ ಅರ್ಜಿ ಸಲ್ಲಿಸಲು ನಗರಸಭೆ ಪೌರಾಯುಕ್ತ ಶಿವಕುಮಾರ್ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್