
ಬಾಗಲಕೋಟೆ, 28 ಮಾರ್ಚ್ (ಹಿ.ಸ.)
ಆ್ಯಂಕರ್ : ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ಗ್ರಾಮೀಣ ಪ್ರದೇಶಗಳಲ್ಲಿ ಭರ್ಜರಿ ಚುನಾವಣಾ ಪ್ರಚಾರ ನಡೆಸಿದರು. ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ನಡೆದ ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಮತಯಾಚನೆ ಮಾಡಿದರು.
ಆಲೂರು ಎಲ್.ಟಿ., ಮುತ್ತತ್ತಿ, ಹಿರೇ ಗುಳಬಾಳ, ಜಡ್ರಾಮಖುಂಟಿ, ಚಿಕ್ಕ ಹೊದ್ಲೂರ, ಹಿರೇ ಹೊದ್ಲೂರ ಹಾಗೂ ಲವಳೇಶ್ವರ ಎಲ್.ಟಿ. ಸೇರಿದಂತೆ ಹಲವು ಗ್ರಾಮಗಳಲ್ಲಿ ನಡೆದ ಸಭೆಗಳಲ್ಲಿ ಬಿಜೆಪಿ ಅಭ್ಯರ್ಥಿಗೆ ಗ್ರಾಮೀಣ ಜನರಿಂದ ಉತ್ತಮ ಬೆಂಬಲ ವ್ಯಕ್ತವಾಯಿತು.
ಈ ಸಂದರ್ಭದಲ್ಲಿ ಚರಂತಿಮಠ ಅವರಿಗೆ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಹೂವಪ್ಪ ರಾಠೋಡ, ಸೋಮಸಿಂಗ ವಮಾಣಿ, ಭೀಮಸಿಂಗ್ ವಮಾಣಿ, ಚಾಪಣ್ಣ ಲಮಾಣಿ, ವೆಂಕಟೇಶ್ ನಾಯಕ್, ಸಂತೋಷ ಚವ್ಹಾಣ, ಮುತ್ತತ್ತಿ ಗ್ರಾಮದ ಕರಿಯಪ್ಪ ಕಟ್ಟಿಮನಿ, ಅರ್ಜುನ ಚವ್ಹಾಣ, ಪರಶು ಗೋವಾ, ಶರಣಪ್ಪ ಆಲೂರ, ಯಮನಪ್ಪ ಪಾಟೀಲ, ರಾಘವೇಂದ್ರ ದಳವಾಯಿ, ಹಿರೇ ಗುಳಬಾಳದ ಹನಮಂತ ಮೇಟಿ, ಚನ್ಪಯ್ಯ ಫೂಜಾರಿ, ಯಲ್ವಪ್ಪ ವಾಲಿಕಾರ, ಗೂಳಪ್ಪ ದೋಣಿ, ಬಸಪ್ಪ ಮೇಟಿ, ಸಂತೋಷ ವಾಲಿಕಾರ, ಜಡ್ರಾಮಖುಂಟಿಯ ಚನ್ನಪ್ಪಗೌಡ ಪಾಟೀಲ್, ಸಂಗಪ್ಪ ಕೂರಿ, ಶ್ರೀಶೈಲ್ ಖಾಕಂಡಕಿ, ಮಂಜುನಾಥ ಕಿರಸೂರ, ಸೂರೇಶ ಕುರಿ, ಹೊದ್ಲೂರಿನ ಪರಸಪ್ಪ ಕುಂಟೋಜಿ, ಪರಸಪ್ಪ ಬಂಗಿ, ಬಸಪ್ಪ ಅಂಗಡಿ ಸೇರಿದಂತೆ ಅನೇಕರು ಸಾಥ್ ನೀಡಿದರು.
ಸಭೆಗಳಲ್ಲಿ ಮಾತನಾಡಿದ ಚರಂತಿಮಠ, ಕ್ಷೇತ್ರದ ಅಭಿವೃದ್ಧಿಗಾಗಿ ಭಾರೀ ಬಹುಮತಗಳಿಂದ ಗೆಲ್ಲಿಸಬೇಕು ಎಂದು ಮತದಾರರಿಗೆ ಮನವಿ ಮಾಡಿದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande