



ಬಳ್ಳಾರಿ, 27 ಮಾರ್ಚ್ (ಹಿ.ಸ.)
ಆ್ಯಂಕರ್ : ವಿಶ್ವದೆಲ್ಲೆಡೆ ಶಾಂತಿಯನ್ನು ಬಯಸುವುದು ರಂಗಭೂಮಿಯ ಮುಖ್ಯ ಧ್ಯೇಯವಾಗಿದೆ ಎಂದು ಮೈಸೂರಿನ ರಂಗ ನಿರ್ದೇಶಕರಾದ ಡಾ.ಸಿ. ಬಸಲಿಂಗಯ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಎಸ್ಕೆ ವಿಶ್ವವಿದ್ಯಾಲಯದ ಡಾ. ಬಿ ಆರ್ ಅಂಬೇಡ್ಕರ್ ಸಭಾಂಗಣದಲ್ಲಿ ವಿಶ್ವವಿದ್ಯಾಲಯದ ಪ್ರದರ್ಶನ ಕಲೆ ಮತ್ತು ನಾಟಕ ವಿಭಾಗ ಶುಕ್ರವಾರ ಏರ್ಪಡಿಸಿದ್ದ `ವಿಶ್ವ ರಂಗಭೂಮಿ ದಿನಾಚರಣೆ-2026’ಯಲ್ಲಿ `ಕೃತಕ ಬುದ್ಧಿಮತ್ತೆಯ ಪ್ರಭಾವದ ಈ ಯುಗದಲ್ಲಿ ರಂಗಭೂಮಿಯ ಉಳಿವಿನ ಸವಾಲುಗಳು’ ವಿಷಯದ ಉಪನ್ಯಾಸವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಂಗಭೂಮಿ ಒಂದು ಮುಕ್ತ ವಿಶ್ವವಿದ್ಯಾಲಯ. ವಿಶ್ವದಲ್ಲಿ ರಂಗಭೂಮಿಗೆ ಅಳಿವಿಲ್ಲ. ರಂಗಭೂಮಿ ಕಲೆಗಳ ಸಾರವನ್ನು ಹೊಂದಿದೆ. ರಂಗಭೂಮಿ ಜೀವನದ ಮೇಲೆ ಆಳವಾದ ಪ್ರಭಾವ ಬೀರುವಂತಹ ಶಕ್ತಿಯನ್ನು ಹೊಂದಿದೆ. ಜೀವನದಲ್ಲಿ ಫೇಲಾದವರೆ ಮಹಾನ್ ವ್ಯಕ್ತಿಗಳಾಗಿದ್ದಾರೆ. ಪ್ರಶ್ನಿಸದೆ ಯಾವುದನ್ನು ಒಪ್ಪಿಕೊಳ್ಳಬೇಡಿ ಎಂದರು.
ಧಾರವಾಡದ ಹಿರಿಯ ರಂಗಕರ್ಮಿಗಳಾದ ಡಾ ಶಶಿಧರ್ ನರೇಂದ್ರ ಅವರು ದಿಕ್ಸೂಚಿ ಭಾಷಣ ಮಾಡಿ, ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನದ ಬಳಕೆಗೆ ಪ್ರತಿಯೊಂದಕ್ಕೆ ಆಜ್ಞೆ ನೀಡಬೇಕಾಗುತ್ತದೆ. ಕೃತಕ ಬುದ್ಧಿಮತ್ತೆಯ ಯುಗದಲ್ಲಿ ರಂಗ ಪರಂಪರೆಯನ್ನು ಆಧುನಿಕತೆಗೆ ಒಳಪಡಿಸುವ ಕ್ರಮವಾಗಿದೆ. ‘ಗೌಹರ್ ಜಾನ್’ ಕೃತಿಯನ್ನು ಏಐ ನಿಂದ ಭಾಷಾಂತರ ಮಾಡಿರುವುದು ನಿಜಕ್ಕೂ ಆಘಾತಕಾರಿ. ಎಐ ಬರವಣಿಗೆಯ ಹಕ್ಕುಗಳಿಗೆ ಸಾಮ್ಯತೆ ಕೊಡುವುದು ಪ್ರಶ್ನೆಯಾಗಿ ಉಳಿದಿದೆ. ಎಐ ತಂತ್ರಜ್ಞಾನ ಬಳಸುವಲ್ಲಿ ಉಪಾಯ - ಅಪಾಯ ಎರೆಡೂ ಇವೆ ಎಂದರು.
ವಿಶ್ವವಿದ್ಯಾಲಯದ ಕುಲಪತಿಗಳಾದ ಪೆÇ್ರ ಎಂ. ಮುನಿರಾಜು ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ, ಒತ್ತಡದ ಜೀವನದಲ್ಲಿ ನಾಟಕಗಳು ತುಂಬಾ ಪ್ರಭಾವ ಬೀರುತ್ತವೆ. ಕಲಾವಿದರು ಹಲವಾರು ವರ್ಷಗಳ ಶ್ರಮದಿಂದ ಪ್ರತಿಭೆಯನ್ನು ಗಳಿಸುತ್ತಾರೆ. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳ ಜೊತೆಯಲ್ಲಿ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.
ವಿಶ್ವ ರಂಗಭೂಮಿ ಸಂದೇಶವನ್ನು ಡಾ ಅಣ್ಣಾಜಿ ಕೃಷ್ಣಾರೆಡ್ಡಿ ಅವರು ಪ್ರಸ್ತುತ ಪಡಿಸಿದರು. ರಂಗಭೂಮಿಯ ಸಂಶೋಧನಾ ಲೇಖನಗಳ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ವಿಶ್ವವಿದ್ಯಾಲಯದ ಕುಲಸಚಿವರಾದ ಪೆÇ್ರ ಎನ್.ಎಂ. ಸಾಲಿ, ಕಲಾ ನಿಕಾಯದ ಡೀನರಾದ ಪೆÇ್ರ ರಾಬರ್ಟ್ ಜೋಸ್, ಕಿರುತೆರೆ ಮತ್ತು ಹಿರಿತರೆ ಕಲಾವಿದರಾದ ಲಕ್ಷ್ಮೀ ನಾಡಗೌಡ್ ಅವರು ವೇದಿಕೆಯಲ್ಲಿದ್ದರು.
ಈ ವಿಚಾರ ಸಂಕೀರ್ಣದಲ್ಲಿ ವಿವಿಧ ರಾಜ್ಯಗಳ ಸಂಶೋಧನಾರ್ಥಿಗಳು ಸೇರಿ 100ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ವಿಚಾರ ಸಂಕೀರ್ಣದ ಸಂಚಾಲಕರಾದ ಪ್ರೊ ಎನ್. ಶಾಂತನಾಯ್ಕಕ ಅವರು ಪ್ರಾಸ್ತಾವಿಕ ಭಾಷಣ ಮಾಡಿ, ಅತಿಥಿಗಳನ್ನು ಸ್ವಾಗತಿಸಿದರು. ಡಾ. ಕೆ.ಎಸ್. ಶಿವಪ್ರಕಾಶ ಅವರು ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಅಧ್ಯಯನ ವಿಭಾಗದ ಸಂಯೋಜಕರಾದ ಡಾ. ಸಂತೋಷ ಜಿ.ಕೆ. ಅವರು ವಂದಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್