
ಬಳ್ಳಾರಿ, 27 ಮಾರ್ಚ್ (ಹಿ.ಸ.)
ಆ್ಯಂಕರ್:
ತತ್ವಪದಗಳು ಆದರ್ಶ ಮತ್ತು ಬದುಕಿನ ದಿಕ್ಸೂಚಿಗಳಾಗಿರುತ್ತವೆ ಎಂದು ಸಾಹಿತಿ ಡಬ್ಲ್ಯೂ. ಬಸವರಾಜ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವೀರಶೈವ ವಿದ್ಯಾವರ್ಧಕ ಸಂಘದ ಹಾನಗಲ್ ಶ್ರೀ ಕುಮಾರೇಶ್ವರ ಪಾಲಿಟೆಕ್ನಿಕ್ನಲ್ಲಿ ಅಖಂಡ ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಶುಕ್ರವಾರ ಹಮ್ಮಿಕೊಂಡಿದ್ದ `ಸಾವಜ್ಜಿ ಬಸವನಗೌಡ ನಾಗಕಟ್ಟಿ, ದಿ. ಶ್ರೀಮತಿ ಪತ್ತಿಕೊಂಡ ಕಾಮಾಕ್ಷಮ್ಮ ವಿಶ್ವನಾಥ ಶೆಟ್ಟಿ, ಶ್ರೀಮತಿ ಹನುಮಕ್ಕ ಸಣ್ಣರಾಮಯ್ಯ ದೇಸಾಯಿ, ಆರ್.ಕೆ ಜೋಷಿ’ ಇವರ ಸ್ಮರಣಾರ್ಥ ದತ್ತಿಯ `ಕನ್ನಡ ಸಾಹಿತ್ಯಕ್ಕೆ ತತ್ವ ಪದಕಾರರ ಕೊಡುಗೆ’ ವಿಷಯದ ಉಪನ್ಯಾಸಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತತ್ವಪದಗಳನ್ನು ಜೀನವದಲ್ಲಿ ಅಳವಡಿಸಿಕೊಳ್ಳುವ ಮೂಲಕ ಪ್ರತಿಯೊಬ್ಬರೂ ಆದರ್ಶರದ ಬದುಕು ನಡೆಸಲು ಸಾಧ್ಯ. ಸಮಾಜವನ್ನು ಸರಿದಾರಿಯಲ್ಲಿ ಮುನ್ನಡೆಸಲು ತತ್ವಪದಕಾರರ ಕೊಡುಗೆ ಅಪಾರ. ಈ ನಿಟ್ಟಿನಲ್ಲಿ ತತ್ವಪದಕಾರರ ಕೊಡುಗೆಯನ್ನು ನಾವೆಲ್ಲರೂ ಸ್ಮರಿಸಬೇಕು ಎಂದರು.
ಹಾನಗಲ್ ಶ್ರೀ ಕುಮಾರೇಶ್ವರ ಪಾಲಿಟೆಕ್ನಿಕ್ನ ಆಡಳಿತ ಮಂಡಳಿ ಅಧ್ಯಕ್ಷರಾದ ಪಲ್ಲೇದ ಪ್ರಭುಲಿಂಗ ಅವರು ಅಧ್ಯಕ್ಷತೆವಹಿಸಿದ್ದರು.
ಎಸ್.ಕೆ ಮೋದಿ ನ್ಯಾಷನಲ್ ಸ್ಕೂಲ್ನ ಆಡಳಿತ ಮಂಡಳಿ ಅಧ್ಯಕ್ಷರಾದ ಏಳುಬೆಂಚಿ ರಾಜಶೇಖರಗೌಡ, ನಾಡಗೌಡ ಮರಿಬಸವನಗೌಡ ಸ್ವತಂತ್ರ ಪಿಯು ಕಾಲೇಜಿನ ಅಧ್ಯಕ್ಷರಾದ ಮುಂಡಾಸದ ಚನ್ನಬಸವರಾಜ ಅವರು ಮುಖ್ಯ ಅತಿಥಿಗಳಾಗಿದ್ದರು.
ಹಾನಗಲ್ ಶ್ರೀ ಕುಮಾರೇಶ್ವರ ಪಾಲಿಟೆಕ್ನಿಕ್ನ ಪ್ರಾಂಶುಪಾಲರಾದ ಬಿ. ಶ್ರೀಶೈಲಗೌಡ ಅವರು ಸ್ವಾಗತಿಸಿದರು. ಅಖಂಡ ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಂಚಾಲಕ ಕಪ್ಪಗಲ್ಲು ಬಿ.ಚಂದ್ರಶೇಖರ ಅವರು ಕಾರ್ಯಕ್ರಮ ನಿರೂಪಿಸಿದರು.
ವೇದಿಕೆಯಲ್ಲಿ ಮುಖಂಡರಾದ ಗಂಗಾವತಿ ವೀರೇಶ್, ಹಾನಗಲ್ ಶ್ರೀ ಕುಮಾರೇಶ್ವರ ಪಾಲಿಟೆಕ್ನಿಕ್ನ ಆಡಳಿತ ಮಂಡಳಿಯ ಸದಸ್ಯರಾದ ಬಾಣಾಪುರ ಜಡೆಸಿದ್ದನಗೌಡ, ಚಂದ್ರಶೇಖರ ಪಾಶ್ಚಾಪುರ ಅವರು ಉಪಸ್ಥಿತರಿದ್ದರು.
ಸಾಹಿತ್ಯಶ್ರೀ ಪ್ರಶಸ್ತಿ ಪುರಸ್ಕೃತ ಅಖಂಡ ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಡಾ. ನಿಷ್ಠಿ ರುದ್ರಪ್ಪ ಅವರನ್ನು ಈ ಸಂದರ್ಭದಲ್ಲಿ ಗೌರವಿಸಿ, ಅಭಿನಂದಿಸಲಾಯಿತು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್