ತಾಳಿಕೋಟಿಯಲ್ಲಿ ಪ್ರಜಾಸೌಧ ಸ್ಥಳಾಂತರಕ್ಕೆ ಆಗ್ರಹಿಸಿ ಧರಣಿಗೆ ಬಿಜೆಪಿ ಬೆಂಬಲ
ವಿಜಯಪುರ, 27 ಮಾರ್ಚ್ (ಹಿ.ಸ.): ಆ್ಯಂಕರ್ : ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕು ಹೋರಾಟ ಸಮಿತಿ ವತಿಯಿಂದ ಮೈಲೇಶ್ವರ ಗ್ರಾಮದ ಸಮೀಪ ನಿಗದಿಪಡಿಸಿರುವ ಪ್ರಜಾಸೌಧದ ಸ್ಥಳವನ್ನು ರದ್ದುಗೊಳಿಸಿ ತಾಳಿಕೋಟಿ ಪಟ್ಟಣದಲ್ಲೇ ಪ್ರಜಾಸೌಧ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಧರಣಿ ಸತ್ಯಾಗ್ರಹಕ್ಕೆ
ಧರಣಿ


ವಿಜಯಪುರ, 27 ಮಾರ್ಚ್ (ಹಿ.ಸ.):

ಆ್ಯಂಕರ್ : ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕು ಹೋರಾಟ ಸಮಿತಿ ವತಿಯಿಂದ ಮೈಲೇಶ್ವರ ಗ್ರಾಮದ ಸಮೀಪ ನಿಗದಿಪಡಿಸಿರುವ ಪ್ರಜಾಸೌಧದ ಸ್ಥಳವನ್ನು ರದ್ದುಗೊಳಿಸಿ ತಾಳಿಕೋಟಿ ಪಟ್ಟಣದಲ್ಲೇ ಪ್ರಜಾಸೌಧ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಬಿಜೆಪಿಯ ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ್ ಭೇಟಿ ನೀಡಿ ಬೆಂಬಲ ಸೂಚಿಸಿದರು.

ಹೋರಾಟದ ಸ್ಥಳಕ್ಕೆ ಭೇಟಿ ನೀಡಿದ ಅವರು, ಹೋರಾಟಗಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆಯನ್ನು ಆಲಿಸಿದರು. ಈ ಕುರಿತು ಸಾಧ್ಯವಾದಷ್ಟು ಶೀಘ್ರದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಹೋರಾಟ ಸಮಿತಿ ಸದಸ್ಯರು, ಜನಪ್ರತಿನಿಧಿಗಳು ಸೇರಿದಂತೆ ಮಡುಸಾಹುಕಾರ ಬಿರಾದಾರ, ಮಲ್ಲನಗೌಡ ಪೊಲೀಸ್ ಪಾಟೀಲ, ತಾ.ಪಂ. ಮಾಜಿ ಸದಸ್ಯ ರಾಜುಗೌಡ ಪಾಟೀಲ, ನಿಂಗಣ್ಣ ಕಲಬುರ್ಗಿ, ಸಿದ್ದಣ್ಣ ಕಟ್ಟಿಮನಿ, ಬಸಣ್ಣ ಕೊಳ್ಳಿ ಹಾಗೂ ಇತರರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande