ಶ್ರೀರಾಮನ ಜೀವನ ಪ್ರತಿಯೊಬ್ಬರಿಗೂ ಪ್ರೇರಣೆ: ಸುಭಾಸಸಿಂಗ ಜಮಾದಾರ
ಹುಬ್ಬಳ್ಳಿ, 27 ಮಾರ್ಚ್ (ಹಿ.ಸ.): ಆ್ಯಂಕರ್: ಹುಬ್ಬಳ್ಳಿ ಮಂಟೂರ ರಸ್ತೆಯಲ್ಲಿ ಶ್ರೀ ಶಿವಶರಣ ಮೇದಾರ ಚನ್ನಯ್ಯ ಸಮಾಜದ ವತಿಯಿಂದ ಶ್ರೀ ರಾಮನವಮಿ ಜಯಂತಿಯನ್ನು ಭಕ್ತಿ ಭಾವದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಭಾಗವಹಿಸಿ ಶ್ರೀರಾಮನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವ
Ram nawami


ಹುಬ್ಬಳ್ಳಿ, 27 ಮಾರ್ಚ್ (ಹಿ.ಸ.):

ಆ್ಯಂಕರ್:

ಹುಬ್ಬಳ್ಳಿ ಮಂಟೂರ ರಸ್ತೆಯಲ್ಲಿ ಶ್ರೀ ಶಿವಶರಣ ಮೇದಾರ ಚನ್ನಯ್ಯ ಸಮಾಜದ ವತಿಯಿಂದ ಶ್ರೀ ರಾಮನವಮಿ ಜಯಂತಿಯನ್ನು ಭಕ್ತಿ ಭಾವದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಭಾಗವಹಿಸಿ ಶ್ರೀರಾಮನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸುಭಾಸಸಿಂಗ ಜಮಾದಾರ ಅವರು, ಜೀವನದಲ್ಲಿ ಎಷ್ಟೇ ಕಷ್ಟಗಳ ಸರಮಾಲೆ ಬಂದರೂ ಸಹನೆ ಮತ್ತು ಧೈರ್ಯದಿಂದ ಎದುರಿಸಿದ ಶ್ರೀರಾಮನ ಜೀವನವೇ ಪ್ರತಿಯೊಬ್ಬರಿಗೂ ಪ್ರೇರಣೆಯಾಗಬೇಕು ಎಂದು ಹೇಳಿದರು. ದೇಶಭಕ್ತಿಯ ಮಹತ್ವವನ್ನು ಸಾರಿದ ಶ್ರೀರಾಮ ಭಾರತೀಯರ ಮನಸ್ಸಿನಲ್ಲಿ ಸದಾ ಜೀವಂತವಾಗಿರುವ ಮಹಾನ್ ವ್ಯಕ್ತಿತ್ವ ಎಂದು ಅವರು ತಿಳಿಸಿದರು. ರಾಮಾಯಣವನ್ನು ಎಲ್ಲರೂ ಓದಿರದಿದ್ದರೂ, ಶ್ರೀರಾಮನ ಬಗ್ಗೆ ಪ್ರತಿಯೊಬ್ಬ ಭಾರತೀಯನಿಗೂ ತಿಳಿದಿರುವುದು ಅವರ ಮಹತ್ವವನ್ನು ಸೂಚಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ರಮೇಶ ಕದಂ, ರಂಗನಾಯಕ ತಪೇಲಾ, ವೆಂಕಟೇಶ ಬಳ್ಳಾರಿ, ಮಹೇಶ ತಪೇಲಾ, ಶಿವಬಸಪ್ಪ ಶೆಟ್ಟರ, ಅನೂಪ ಬಿಜವಾಡ, ಪ್ರಶಾಂತ ಜಾಧವ, ಸತೀಶ ಶೇಜವಾಡಕರ, ಶಿವು ಮೆಣಸಿನಕಾಯಿ, ಚಂದ್ರಶೇಖರ ಗೋಕಾಕ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande