ದಕ್ಷಿಣ ಭಾರತದಲ್ಲಿ ಶೈವ ಸಿದ್ಧಾಂತ ಮತ್ತು ಶೈವ ಪರಂಪರೆ ಇದೆ : ಡಾ. ಸಿ.ಎಂ. ವೀರಭದ್ರಯ್ಯ
ಬಳ್ಳಾರಿ, 27 ಮಾರ್ಚ್ (ಹಿ.ಸ.) ಆ್ಯಂಕರ್ : ದಕ್ಷಿಣ ಭಾರತದಲ್ಲಿ ಶೈವ ಸಿದ್ಧಾಂತದ ಮತ್ತು ಶೈವ ಪರಂಪರೆಯ ದೊಡ್ಡ ಶಕ್ತಿ ಇತ್ತು ಎಂದು ಸಂಶೋಧಕರಾದ ಡಾ. ಸಿ.ಎಂ. ವೀರಭದ್ರಯ್ಯ ಅವರು ತಿಳಿಸಿದ್ದಾರೆ. ಕೌಲ್ಬಜಾರ್ನ ರಾಯಲ್ ಶಿಕ್ಷಕರ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿ
ದಕ್ಷಿಣ ಭಾರತದಲ್ಲಿ ಶೈವ ಸಿದ್ಧಾಂತ ಮತ್ತು ಶೈವ ಪರಂಪರೆ ಇದೆ : ಡಾ. ಸಿ.ಎಂ. ವೀರಭದ್ರಯ್ಯ


ದಕ್ಷಿಣ ಭಾರತದಲ್ಲಿ ಶೈವ ಸಿದ್ಧಾಂತ ಮತ್ತು ಶೈವ ಪರಂಪರೆ ಇದೆ : ಡಾ. ಸಿ.ಎಂ. ವೀರಭದ್ರಯ್ಯ


ದಕ್ಷಿಣ ಭಾರತದಲ್ಲಿ ಶೈವ ಸಿದ್ಧಾಂತ ಮತ್ತು ಶೈವ ಪರಂಪರೆ ಇದೆ : ಡಾ. ಸಿ.ಎಂ. ವೀರಭದ್ರಯ್ಯ


ದಕ್ಷಿಣ ಭಾರತದಲ್ಲಿ ಶೈವ ಸಿದ್ಧಾಂತ ಮತ್ತು ಶೈವ ಪರಂಪರೆ ಇದೆ : ಡಾ. ಸಿ.ಎಂ. ವೀರಭದ್ರಯ್ಯ


ಬಳ್ಳಾರಿ, 27 ಮಾರ್ಚ್ (ಹಿ.ಸ.)

ಆ್ಯಂಕರ್ :

ದಕ್ಷಿಣ ಭಾರತದಲ್ಲಿ ಶೈವ ಸಿದ್ಧಾಂತದ ಮತ್ತು ಶೈವ ಪರಂಪರೆಯ ದೊಡ್ಡ ಶಕ್ತಿ ಇತ್ತು ಎಂದು ಸಂಶೋಧಕರಾದ ಡಾ. ಸಿ.ಎಂ. ವೀರಭದ್ರಯ್ಯ ಅವರು ತಿಳಿಸಿದ್ದಾರೆ.

ಕೌಲ್ಬಜಾರ್ನ ರಾಯಲ್ ಶಿಕ್ಷಕರ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಜೋಳದರಾಶಿ

ದೊಡ್ಡನಗೌಡರ ದತ್ತಿ, ಜೋಳದರಾಶಿ ಚನ್ನವೀರನಗೌಡರ ದತ್ತಿ ಹಾಗೂ ಪೆÇ್ರ. ಕೆ.ಬಿ. ಹನುಮಂತರಾಯರ ದತ್ತಿಯನ್ನು ಉದ್ದೇಶಿಸಿ `ಬಸವ ಪೂರ್ವ ಯುಗದ ಶಿವಶರಣರು' ವಿಷಯದ ದತ್ತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಚನ ಯುಗದ ಪೂರ್ವದಲ್ಲಿಯೇ ತಮಿಳುನಾಡಿನಲ್ಲಿ ತಿರುಮೂಲರು, ಅರವತ್ಮೂರು ಜನ ಪುರಾತನರು, ನಾಯನಾಯರರು, ಸುಂದರರು ಶಿವನನ್ನು ಆರಾಧಿಸುವ ಶರಣ ಸಂಪ್ರದಾಯವಾದಿಗಳಾಗಿದ್ದರು. ನಂದಿಗ್ರಾಮ, ಬಳ್ಳಿಗಾವೆ, ಐಹೊಳೆ, ಆಂಧ್ರ, ತೆಲಂಗಾಣ ಸೇರಿ ವಿವಿಧೆಡೆ ಸಿಕ್ಕಿರುವ ಶಾಸನಗಳಲ್ಲಿ ಶಿವಭಕ್ತ, ಮಾಹೇಶ್ವರ, ಪರಮ ಮಹೇಶ್ವರ ಎಂಬ ಪದಗಳ ಉಲ್ಲೇಖಗಳಿವೆ. ಶೈವ ಪಂಥದ ಪಾಶುಪಾತರು, ಕಾಳಾಮುಖರು, ಕಾಪಾಲಿಕರು, ಲಕುಲೀಶ,ನಾಥಪಂಥ ಹೀಗೆ ದಕ್ಷಿಣ ಭಾರತದಲ್ಲಿ ಶೈವ ಸಿದ್ಧಾಂತದ ಪಾರಮ್ಯವಿತ್ತು ಎಂದರು.

ಮೋಕಾ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಎಂ. ಸೋಮಶೇಖರ ಅವರು, ಬಸವ ಪೂರ್ವ ಯುಗವು ಸಾಂಸ್ಕøತಿಕವಾಗಿ, ಧಾರ್ಮಿಕವಾಗಿ ವೈವಿಧ್ಯಮಯವಾಗಿದ್ದರೂ ಸಾಮಾಜಿಕ ಅಸಮಾನತೆಯಿಂದ ಕೂಡಿದ ಕಾಲವಾಗಿತ್ತು. ಆ ಕಾಲದ ಶಿವಶರಣರಿಂದ ರಚನೆಯಾದ ಸಾಹಿತ್ಯದಿಂದ ವಚನ ಸಾಹಿತ್ಯಕ್ಕೆ ಸ್ವಷ್ಟ ರೂಪ ಸಿಗಲು ಸಾಧ್ಯವಾಯಿತು ಎಂದರು.

ವಚನಗಳಲ್ಲಿ ಪ್ರಭುತ್ವದ ನಿರಾಕರಣೆ, ವೈಚಾರಿಕ ಮನೋಭಾವ, ಆಳವಾದ ಸಾಮಾಜಿಕ ಚಿಂತನೆಯ ತುಡಿತಗಳಿವೆ. ಆದ್ಯ ವಚನಕಾರ ಜೇಡರ ದಾಸಿಮಯ್ಯ, ಕೊಂಡ ಗುಳಿ ಕೇಶಿರಾಜ, ಶಂಕರ ದಾಸಿಮಯ್ಯ, ಡೋಹಾರ ಕಕ್ಕಯ್ಯ, ಮಾದಾರ ಚನ್ನಯ್ಯ, ಕೆಂಭಾವಿ ಭೋಗಣ್ಣ, ತೆಲುಗು ಜೊಮ್ಮಣ್ಣ,ನಿಜಗುಣದೇವ, ಚಂದಿಮರಸ, ಸಕಲೇಶ ಮಾದರಸ ಮುಂತಾದ ಶಿವಶರಣರು ಚಲನಶೀಲ ಸಮಾಜದ ನಿರ್ಮಾಣಕ್ಕೆ ಬದ್ಧರಾಗಿದ್ದರು ಎಂದರು.

ಬಸವ ಪೂರ್ವ ಕಾಲಕ್ಕೂ ಬಸವಣ್ಣನವರ ಕಾಲದ ಸಾಮಾಜಿಕ ವ್ಯವಸ್ಥೆಗೂ ಬಹಳ ವ್ಯತ್ಯಾಸವಿತ್ತು. ವಚನವೆಂದರೆ ಸಂಸ್ಕೃತಿ, ವಿಜ್ಞಾನ, ಸಾಹಿತ್ಯ ಮತ್ತು ಚಳವಳಿಯ ಅರ್ಥಗಳ ಜೊತೆಗೆ ಅನೇಕ ಆಶಯಗಳನ್ನು ಹೊಂದಿದೆ. ಜನ ಸಾಮಾನ್ಯರಿಗಾಗಿ ಸಾಮಾನ್ಯರು ರಚಿಸಿದ್ದು ವಚನ ಸಾಹಿತ್ಯ. ವಚನ ಸಾಹಿತ್ಯ ತನ್ನ ಭಾಷೆ ಮತ್ತು ವಸ್ತುವಿನಿಂದ ಗಮನ ಸೆಳೆದು ನಡುಗನ್ನಡದಿಂದ ದೇಶೀಯತೆಗೆ ಸಾಗುತ್ತದೆ ಎಂದರು.

ರಾಯಲ್ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಫರ್ಜಾನಾ ಬೇಗಂ ಅವರು ಅಧ್ಯಕ್ಷತೆವಹಿಸಿದರು. ಮುಖ್ಯ ಅತಿಥಿಗಳಾಗಿ ಜೋಳದರಾಶಿ ದೊಡ್ಡನಗೌಡ ಪ್ರತಿಷ್ಠಾನದ ಅಧ್ಯಕ್ಷ ಕೆ. ಪಂಪನಗೌಡ, ನವ ಕರ್ನಾಟಕ ಯುವಶಕ್ತಿ ರಾಜ್ಯ ಕಾರ್ಯಾಧ್ಯಕ್ಷ ಸಿದ್ಮಲ್ ಮಂಜುನಾಥ, ಮುಖಂಡರಾದ ಜಿ.ಗುರುಲಿಂಗಪ್ಪ, ಜೆ.ಎಂ. ಶಿವರುದ್ರಯ್ಯ ಉಪನ್ಯಾಸಕರಾದ ಎ. ಮಲ್ಲಿಕಾರ್ಜುನ, ಶಶಿಧರ, ರವಿಶರ್ಮ ಇನ್ನಿತರರು ವೇದಿಕೆಯಲ್ಲಿದ್ದರು.

ರಂಗ ಕಲಾವಿದ ಎಂ. ದಕ್ಷಿಣಾಮೂರ್ತಿ ಅವರು ಗೀತ ಗಾಯನ ಮಾಡಿದರು. ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಿಕ್ಷಣಾರ್ಥಿ ಸುಮಿತ್ರಾ ಅವರು ಕಾರ್ಯಕ್ರಮ ನಿರೂಪಿಸಿದರು. ಪ್ರಶಿಕ್ಷಣಾರ್ಥಿ ಸವಿತಾ ಅವರು ಸ್ವಾಗತಿಸಿ - ವಂದಿಸಿದರು. ದತ್ತಿದಾನಿಗಳನ್ನು ಈ ಸಂದರ್ಭದಲ್ಲಿ ಗೌರವಿಸಿ ಸನ್ಮಾನಿಲಾಯಿತು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande