ಕಲಬುರ್ಗಿ ವಿಭಾಗದ ಯುವ ರೆಡ್ ಕ್ರಾಸ್ ಶಿಬಿರ
ಬಳ್ಳಾರಿ, 27 ಮಾರ್ಚ್ (ಹಿ.ಸ.) ಆ್ಯಂಕರ್ : ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕರ್ನಾಟಕ ರಾಜ್ಯ ಶಾಖೆ ಮತ್ತು ಬಳ್ಳಾರಿ ಜಿಲ್ಲಾ ಘಟಕದ ಜಂಟಿ ಆಶ್ರಯದಲ್ಲಿ ಬಳ್ಳಾರಿಯಲ್ಲಿ ಕಲಬುರಗಿ ವಿಭಾಗದ ಮಟ್ಟದ ಮೂರು ದಿನಗಳ ಯುವ ರೆಡ್ಕ್ರಾಸ್ ಶಿಬಿರ ಯಶಸ್ವಿಯಾಗಿ ನಡೆಯಿತು. ಶಿಬಿರದಲ್ಲಿ ಕಲ್ಬುರ್ಗಿ ವಿಭಾಗದ ಕಲ
ಕಲ್ಬುರ್ಗಿ ವಿಭಾಗದ ಯುವ ರೆಡ್ಕ್ರಾಸ್ ಶಿಬಿರ


ಕಲ್ಬುರ್ಗಿ ವಿಭಾಗದ ಯುವ ರೆಡ್ಕ್ರಾಸ್ ಶಿಬಿರ


ಕಲ್ಬುರ್ಗಿ ವಿಭಾಗದ ಯುವ ರೆಡ್ಕ್ರಾಸ್ ಶಿಬಿರ


ಕಲ್ಬುರ್ಗಿ ವಿಭಾಗದ ಯುವ ರೆಡ್ಕ್ರಾಸ್ ಶಿಬಿರ


ಕಲ್ಬುರ್ಗಿ ವಿಭಾಗದ ಯುವ ರೆಡ್ಕ್ರಾಸ್ ಶಿಬಿರ


ಕಲ್ಬುರ್ಗಿ ವಿಭಾಗದ ಯುವ ರೆಡ್ಕ್ರಾಸ್ ಶಿಬಿರ


ಬಳ್ಳಾರಿ, 27 ಮಾರ್ಚ್ (ಹಿ.ಸ.)

ಆ್ಯಂಕರ್ : ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕರ್ನಾಟಕ ರಾಜ್ಯ ಶಾಖೆ ಮತ್ತು ಬಳ್ಳಾರಿ ಜಿಲ್ಲಾ ಘಟಕದ ಜಂಟಿ ಆಶ್ರಯದಲ್ಲಿ ಬಳ್ಳಾರಿಯಲ್ಲಿ ಕಲಬುರಗಿ ವಿಭಾಗದ ಮಟ್ಟದ ಮೂರು ದಿನಗಳ ಯುವ ರೆಡ್ಕ್ರಾಸ್ ಶಿಬಿರ ಯಶಸ್ವಿಯಾಗಿ ನಡೆಯಿತು.

ಶಿಬಿರದಲ್ಲಿ ಕಲ್ಬುರ್ಗಿ ವಿಭಾಗದ ಕಲ್ಬುರ್ಗಿ, ರಾಯಚೂರು, ಕೊಪ್ಪಳ, ಬೀದರ್, ಯಾದಗಿರಿ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಯ 160 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ನಿವೃತ್ತ ಐಪಿಎಸ್ ಅಧಿಕಾರಿ ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷರಾದ ಭಾಸ್ಕರ್ರಾವ್ ಅವರು ಮುಖ್ಯ ಅತಿಥಿಗಳಾಗಿದ್ದರು. ಮುಖ್ಯ ಅತಿಥಿಗಳಾಗಿ ರೆಡ್ಕ್ರಾಸ್ ಸಂಸ್ಥೆಯ ಉಪ ಸಭಾಪತಿಗಳಾದ ಡಾ. ಎಸ್.ಜೆ.ವಿ. ಮಹಿಪಾಲ್ ಅವರು ಪಾಲ್ಗೊಂಡಿದ್ದರು.

ಬಳ್ಳಾರಿ ಜಿಲ್ಲಾ ರೆಡ್ಕ್ರಾಸ್ ಸಂಸ್ಥೆಯ ಕಾರ್ಯದರ್ಶಿಗಳಾದ ಎಂ.ಎ. ಷಕೀಬ್ ಅವರು ವಿವಿಧ ವಿಷಯಗಳ ಉಪನ್ಯಾಸ ನೀಡಿದರು.

ಶಿಬಿರದಲ್ಲಿ ವಿದ್ಯಾರ್ಥಿಗಳು ಪ್ರಥಮ ಚಿಕಿತ್ಸೆ, ಪ್ರಕೃತಿ ವಿಕೋಪದಲ್ಲಿ ಸುರಕ್ಷತೆ, ರಕ್ತದಾನ ಶಿಬಿರ, ಸಾಂಕೃತಿಕ ಮತ್ತು ಸಂಗೀತ ಕಾರ್ಯಕ್ರವ ಹಾಗೂ ವಿವಿಧ ಸ್ಪರ್ಧೆಗಳು ನಡೆದವು.

ಬಿಮ್ಸ್ ನಿರ್ದೇಶಕರಾದ ಡಾ. ಗಂಗಾಧರಗೌಡ, ಬಳ್ಳಾರಿ ಜಿಲ್ಲಾ ರೆಡ್ಕ್ರಾಸ್ ಸಂಸ್ಥೆಯ ಖಜಾಂಚಿ ಪೋಲಾ ರಾಧಾಕೃಷ್ಣ, ಪ್ರೊಫೇಸರ್ ಕುಪ್ಪಗಲ್ಲು ವೀರೇಶ್ ಇನ್ನಿತರರು ವೇದಿಕೆಯಲ್ಲಿದ್ದರು.

ಯುವ ರೆಡ್ಕ್ರಾಸ್ ಕಾರ್ಯಕ್ರಮ ಅಧಿಕಾರಿ ಡಾ. ಪಲ್ಲವಿ, ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಕಾಲೇಜಿನ

ಶ್ರೀಮತಿ ಚಿತ್ರಾ, ಪಿ. ವಾಸು, ಅಶೋಕ್ ಜೈನ್, ಮೆಹಬೂಬ್ಭಾಷಾ, ಮಹಾಂತೇಶ್ ಹಾಗೂ 07 ಜಿಲ್ಲೆಗಳ ಕಾರ್ಯಕ್ರಮ ಅಧಿಕಾರಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande