
ನವದೆಹಲಿ, 26 ಮಾರ್ಚ್ (ಹಿ.ಸ.):
ಆ್ಯಂಕರ್:
ರಾಮ ನವಮಿ ಹಬ್ಬದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ.
ತಮ್ಮ ಎಕ್ಸ ಸಂದೇಶದಲ್ಲಿ ಅವರು, “ದೇಶಾದ್ಯಂತದ ನನ್ನ ಕುಟುಂಬ ಸದಸ್ಯರಿಗೆ ರಾಮನವಮಿಯ ಹಾರ್ದಿಕ ಶುಭಾಶಯಗಳು. ತ್ಯಾಗ, ಕಠಿಣತೆ ಮತ್ತು ಸಂಯಮದಿಂದ ಕೂಡಿದ ಮರ್ಯಾದಾ ಪುರುಷೋತ್ತಮ ಶ್ರೀ ರಾಮನ ಜೀವನವು ಪ್ರತಿಯೊಂದು ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಲು ನಮಗೆ ಸ್ಫೂರ್ತಿ ನೀಡುತ್ತದೆ” ಎಂದು ಹೇಳಿದ್ದಾರೆ.
“ಶ್ರೀರಾಮನ ಆದರ್ಶಗಳು ಭಾರತೀಯರಿಗೆ ಮಾತ್ರವಲ್ಲ, ಸಮಗ್ರ ಮಾನವಕುಲಕ್ಕೂ ಶಾಶ್ವತ ಮಾರ್ಗದರ್ಶಕವಾಗಿವೆ. ಅವರ ಆಶೀರ್ವಾದದಿಂದ ಪ್ರತಿಯೊಬ್ಬರ ಯೋಗಕ್ಷೇಮ ಸಾಧನೆಯಾಗಲಿ. ಅಭಿವೃದ್ಧಿ ಹೊಂದಿದ, ಸ್ವಾವಲಂಬಿ ಭಾರತದ ಸಂಕಲ್ಪ ಈಡೇರಲಿ” ಎಂದು ಪ್ರಾರ್ಥಿಸಿದ್ದಾರೆ.
ದೇಶದ ಜನತೆಗೆ ಶಾಂತಿ, ಸಮೃದ್ಧಿ ಹಾಗೂ ಸೌಹಾರ್ದತೆಯ ಹಾರೈಕೆಗಳನ್ನು ಅವರು ವ್ಯಕ್ತಪಡಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa