ಮಹಾ ಅಷ್ಟಮಿ: ಮಹಾಗೌರಿ ದೇವಿಗೆ ಪ್ರಧಾನಿಯಿಂದ ಪ್ರಾರ್ಥನೆ
ನವದೆಹಲಿ, 26 ಮಾರ್ಚ್ (ಹಿ.ಸ.): ಆ್ಯಂಕರ್: ಚೈತ್ರ ನವರಾತ್ರಿಯ ಮಹಾ ಅಷ್ಟಮಿಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೇವಿ ಮಹಾಗೌರಿಗೆ ನಮನ ಸಲ್ಲಿಸಿ ದೇಶದ ಜನರಿಗಾಗಿ ಸಂತೋಷ, ಸಮೃದ್ಧಿ ಹಾಗೂ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ, “ಮಾ
Pm


ನವದೆಹಲಿ, 26 ಮಾರ್ಚ್ (ಹಿ.ಸ.):

ಆ್ಯಂಕರ್:

ಚೈತ್ರ ನವರಾತ್ರಿಯ ಮಹಾ ಅಷ್ಟಮಿಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೇವಿ ಮಹಾಗೌರಿಗೆ ನಮನ ಸಲ್ಲಿಸಿ ದೇಶದ ಜನರಿಗಾಗಿ ಸಂತೋಷ, ಸಮೃದ್ಧಿ ಹಾಗೂ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ, “ಮಾ ಮಹಾಗೌರಿಯ ಪಾದಗಳಿಗೆ ನಮನಗಳು. ಆಕೆಯ ದಿವ್ಯ ಕೃಪೆಯಿಂದ ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಆರೋಗ್ಯ ನೆಲೆಸಲಿ” ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಅವರು ಸಂಸ್ಕೃತ ಶ್ಲೋಕವೊಂದನ್ನು ಹಂಚಿಕೊಂಡು ಮಹಾಗೌರಿಯ ಮಹಿಮೆ ವಿವರಿಸಿದ್ದಾರೆ. ಬಿಳಿ ವೃಷಭದ ಮೇಲೆ ಸವಾರಿ ಮಾಡುವ, ಬಿಳಿ ವಸ್ತ್ರಧಾರಿಣಿ ಹಾಗೂ ಪರಿಶುದ್ಧತೆಯ ಪ್ರತಿರೂಪವಾಗಿರುವ ದೇವಿ ಮಹಾಗೌರಿ ಭಕ್ತರಿಗೆ ಶುಭ ಮತ್ತು ಯೋಗಕ್ಷೇಮವನ್ನು ದಯಪಾಲಿಸುತ್ತಾಳೆ ಎಂಬ ಅರ್ಥವನ್ನು ಅವರು ವಿವರಿಸಿದ್ದಾರೆ.

ಚೈತ್ರ ನವರಾತ್ರಿಯ ಎಂಟನೇ ದಿನವಾದ ಮಹಾ ಅಷ್ಟಮಿ, ದುರ್ಗಾ ದೇವಿಯ ಎಂಟನೇ ಅವತಾರವಾದ ಮಹಾಗೌರಿಯ ಆರಾಧನೆಗೆ ಸಮರ್ಪಿತವಾಗಿದೆ. ದೇಶಾದ್ಯಂತ ಭಕ್ತರು ಈ ದಿನ ವಿಶೇಷ ಪೂಜೆಗಳನ್ನು ನೆರವೇರಿಸಿ ದೇವಿಯ ಆಶೀರ್ವಾದ ಪಡೆಯುತ್ತಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande