ಕ್ಷಯ ರೋಗ ನಿರ್ಮೂಲನೆಗೆ ಎಲ್ಲರೂ ಕೈ ಜೋಡಿಸೋಣ
ಗದಗ, 25 ಮಾರ್ಚ್ (ಹಿ.ಸ.) ಆ್ಯಂಕರ್:-: ಕ್ಷಯರೋಗವನ್ನು ಸೋಲಿಸಲು ನಾವೆಲ್ಲರೂ ಮುಂದಾಗೋಣ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಸ್.ಎಸ್. ನೀಲಗುಂದ ತಿಳಿಸಿದರು. ಗದಗ ನಗರದ ಡಾ.ಎಸ್.ವ್ಹಿ.ತೋಟಗಂಟಿಮಠ, ನರ್ಸಿಂಗ್ ಕಾಲೇಜದಲ್ಲಿಂದು ವಿಶ್ವ ಕ್ಷಯರೋಗ ದಿನಾಚರಣೆಯ ಸಮಾರಂಭವನ್ನು ಉದ್
Seminar


ಗದಗ, 25 ಮಾರ್ಚ್ (ಹಿ.ಸ.)

ಆ್ಯಂಕರ್:-: ಕ್ಷಯರೋಗವನ್ನು ಸೋಲಿಸಲು ನಾವೆಲ್ಲರೂ ಮುಂದಾಗೋಣ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಸ್.ಎಸ್. ನೀಲಗುಂದ ತಿಳಿಸಿದರು.

ಗದಗ ನಗರದ ಡಾ.ಎಸ್.ವ್ಹಿ.ತೋಟಗಂಟಿಮಠ, ನರ್ಸಿಂಗ್ ಕಾಲೇಜದಲ್ಲಿಂದು ವಿಶ್ವ ಕ್ಷಯರೋಗ ದಿನಾಚರಣೆಯ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕ್ಷಯ ರೋಗವನ್ನು ಶೀಘ್ರ ಪತ್ತೆಹಚ್ಚಿ ಸಮರ್ಪಕ ಚಿಕಿತ್ಸೆ ನೀಡುವ ಮೂಲಕ ಸಂಪೂರ್ಣ ನಿರ್ಮೂಲನೆ ಮಾಡಬಹುದಾಗಿದೆ ಎಂದು ಡಾ.ಎಸ್.ಎಸ್.ನೀಲಗುಂದ ತಿಳಿಸಿದರು.

ಡಾ.ಎಸ್.ವ್ಹಿ.ತೋಟಗಂಟಿಮಠ ನರ್ಸಿಂಗ್ ಕಾಲೇಜದ ಪ್ರಾಚಾರ್ಯ ಶಿವಕುಮಾರ ಕಾತರಕಿ ಸಮಾರಂಭದ ಅಧ್ಯಕ್ಷತೆ ವಹಿಸಿ ಕ್ಷಯರೋಗ ನಿರ್ಮೂಲನೆಗಾಗಿ ಆರೋಗ್ಯ ಇಲಾಖೆಯೊಂದಿಗೆ ನಾವೆಲ್ಲರೂ ಕೈಜೋಡಿಸುವುದಲ್ಲದೇ ಮುಂದಿನ ದಿನಮಾನಗಳಲ್ಲಿ ಕ್ಷಯರೋಗ ನಿರ್ಮೂಲನೆ ಮಾಡುವುದು ಮತ್ತು ಜನಜಾಗೃತೆ ಮೂಡಿಸುವುದು ಅತ್ಯಾವಶ್ಯಕವಾಗಿದೆ ಎಂದು ಹೇಳಿದರು.

ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಅರುಂಧತಿ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮವನ್ನು 2025ರಲ್ಲಿ ಸಾಧಿಸಿದ ಪ್ರಗತಿಯ ಅಂಕಿ-ಅಂಶಗಳನ್ನು ಜೊತೆಗೆ ಕ್ಷಯರೋಗದ ಬಗ್ಗೆ ಮಾಹಿತಿ ನೀಡುತ್ತಾ ನಮ್ಮೆಲ್ಲರ ಜೊತೆ ಸಮುದಾಯದವರು ಹಾಗೂ ಸಂಘ ಸಂಸ್ಥೆಯವರು ಕೈಜೋಡಿಸುವುದರಿಂದ ದೇಶವನ್ನು ಹಾಗೂ ಕರ್ನಾಟಕವನ್ನು “ಕ್ಷಯ ಮುಕ್ತ ಕರ್ನಾಟಕ” ವನ್ನಾಗಿಸುವಲ್ಲಿ ಸಹಾಯವಾಗುತ್ತದೆ ಮತ್ತು ಈಗಾಗಲೇ ಪ್ರತಿ ಕ್ಷಯರೋಗ ಘಟಕದಿಂದ ಎರಡೆರಡು ಗ್ರಾಮಪಂಚಾಯತಿಗಳನ್ನು ಆಯ್ದುಕೊಂಡಿದ್ದು ಗ್ರಾಮ ಪಂಚಾಯತಿ ಸಿಬ್ಬಂದಿಗಳ ಹಾಗೂ ಚುನಾಯಿತ ಪ್ರತಿನಿಧಿಗಳ, ಕೆಹೆಚ್ಪಿಟಿ ಸಿಬ್ಬಂದಿಯವರು, ಹಾಗೂ ಆಶಾ ಕಾರ್ಯಕರ್ತೆಯರಿಂದ ಪ್ರತಿ ಹಂತದಲ್ಲೂ “ಕ್ಷಯ ಮುಕ್ತ ಗ್ರಾಮ”ವನ್ನಾಗಿಸಲು ಜಾಗೃತಿ ಮೂಡಿಸಲಾಗುತ್ತಿದೆ ಎಂದರು

ಕಾರ್ಯಕ್ರಮದಲ್ಲಿ ನರ್ಸಿಂಗ್ ಕಾಲೇಜಿನ ಸಂಯೋಜಕ ವಿನಯ ಕುಪ್ಪಸದ, ಆರೋಗ್ಯ ಇಲಾಖೆಯ ಸಿಬ್ಬಂದಿಯವರು, ನರ್ಸಿಂಗ್ ಕಾಲೇಜಿನ ಸಿಬ್ಭಂದಿಯವರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಇನ್ನಿತರ ಸಿಬ್ಬಂದಿಯವರು ಹಾಜರಿದ್ದರು.

ಕು,ಅನುಷ್ಕಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಗಣೇಶ ಬಾಗಡೆ ಸ್ವಾಗತಿಸಿದರು. . ಅಶ್ವತ್ಥ್ರೆಡ್ಡಿ ಕಾರ್ಯಕ್ರಮ ಸಂಯೋಜಕರು ವಂದಿಸಿದರು. ಎಫ್ ಪಿ ಮೋದಿನ್ನವರ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕಾರ್ಯಕ್ರಮ ನಿರೂಪಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande