
ಬಳ್ಳಾರಿ, 24 ಮಾರ್ಚ್ (ಹಿ.ಸ.)
ಆ್ಯಂಕರ್ : ಬಳ್ಳಾರಿಯ ಖಾಸಗಿ ರೆಕ್ರಿಯೇಷನ್ ಕ್ಲಬ್ ಇಸ್ಪೀಟ್ ಜೂಜಾಟ ಆಡುತ್ತಿದ್ದ 60 ಜನರ ವಿರುದ್ಧ ಪ್ರಕರಣ ದಾಖಲಾಗಿ, ಒಂದು ಲಕ್ಷದ 77 ಸಾವಿರ ರೂಪಾಯಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಳ್ಳಾರಿ ನಗರದ ನಟರಾಜ್ ಸಿನಿಮಾ ಮಂದಿರ ಹತ್ತಿರದ ಖಾಸಗಿ ಇಸ್ಪೇಟ್ ಕ್ಲಬ್ ಮೇಲೆ ಬ್ರೂಸ್ಪೇಟೆ ಪೊಲೀಸರು ದಾಳಿ ನಡೆಸಿ, ಘಟನೆ ಸ್ಥಳದಿಂದ ರೂ 1,77,820/- ನಗದು ಹಣ, ಇನ್ನಿತರೆಗಳನ್ನು ವಶಕ್ಕೆ ಪಡೆದಿದ್ದಾರೆ.
ಬ್ರೂಸ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್