ಭ್ರಷ್ಟಾಚಾರದ ಸುಳ್ಳು ಆರೋಪ ಮಾಡಿದರೆ ನ್ಯಾಯಾಲಯದ ಮೊರೆ : ಗೊಂಡಬಾಳ
ಕೊಪ್ಪಳ, 24 ಮಾರ್ಚ್ (ಹಿ.ಸ.): ಆ್ಯಂಕರ್ : ರಾಜ್ಯದಲ್ಲಿ ಸುಮಾರು ಅರ್ಧ ಲಕ್ಷ ಕೋಟಿ ವೆಚ್ಚದ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಪದೇ ಪದೇ ಕೀಳುಮಟ್ಟದ ಮಾತುಗಳನ್ನಾಡುವ ಮೂಲಕ ನಿಜವಾದ ಸಾಮಾನ್ಯ ಜನರನ್ನು ಕೀಳಾಗಿ ನೋಡುತ್ತಿದ್ದಾರೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಉಪಾಧ್
If you make false accusations of corruption, you will be taken to court.


If you make false accusations of corruption, you will be taken to court.


ಕೊಪ್ಪಳ, 24 ಮಾರ್ಚ್ (ಹಿ.ಸ.):

ಆ್ಯಂಕರ್ : ರಾಜ್ಯದಲ್ಲಿ ಸುಮಾರು ಅರ್ಧ ಲಕ್ಷ ಕೋಟಿ ವೆಚ್ಚದ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಪದೇ ಪದೇ ಕೀಳುಮಟ್ಟದ ಮಾತುಗಳನ್ನಾಡುವ ಮೂಲಕ ನಿಜವಾದ ಸಾಮಾನ್ಯ ಜನರನ್ನು ಕೀಳಾಗಿ ನೋಡುತ್ತಿದ್ದಾರೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಖೇದ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ ಅವರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್ ಸರಕಾರ ಕೊಟ್ಟ ಮಾತಿನಂತೆ ಅಧಿಕಾಋಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ಐದೂ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದಾರೆ, ಅದಕ್ಕೆ ಪ್ರತಿವರ್ಷ ಅರ್ಧ ಲಕ್ಷ ಕೋಟಿ ಹಣ ವಿನಿಯೋಗಿಸುತ್ತಿದ್ದು, ಎಲ್ಲವೂ ಪಾರದರ್ಶಕವಾಗಿ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಡಿಬಿಟಿಯಾಗುತ್ತಿದ್ದು, ಅಕ್ರಮ ಮಾಡುವ ಯಾವುದೇ ಅವಕಾಶವನ್ನೂ ಕೊಟ್ಟಿಲ್ಲ.

ಆದರೆ ವಿರೋಧ ಪಕ್ಷದವರು ಬಿಟ್ಟಿ ಭಾಗ್ಯ ಎಂದು ಲೇವಡಿ ಮಡುವ ಮೂಲಕ ಸಾಮಾನ್ಯ ಜನರ, ಬಡವರ ಮತ್ತು ಕೆಳ ಮಧ್ಯಮ ವರ್ಗದ ಕೋಟ್ಯಾಂತರ ಜನರನ್ನು ಅಪಹಾಸ್ಯ ಮಾಡುತ್ತಿದ್ದಾರೆ, ವರ್ಷಕ್ಕೊಮ್ಮೆ ಪಹಣಿ ಇರುವ ರೈತರಿಗೆ ಹಣ ಕೊಡುವದು ಶ್ರೇಷ್ಟ ಎನ್ನುವ ಬಿಜೆಪಿ ಪ್ರತಿ ತಿಂಗಳು ಜನರಿಗೆ ಕೊಡುತ್ತಿರುವ ಸಹಾಯವನ್ನು ಕ್ಷುಲ್ಲಕವಾಗಿ ಕಣುವದು, ಡಿಬಿಟಿ ಕುರಿತು ಸುಳ್ಳು ಸುದ್ದಿ ಹಬ್ಬಿಸುವದು ಅತ್ಯಂತ ಖೇದಕರ ಸಂಗತಿ, ಪ್ರತಿ ಕುಟುಂಬದ ಆರ್ಥಿಕ ಸದೃಢತೆಯೂ ಸಹ ರಾಜ್ಯದ ಅಭಿವೃದ್ಧಿ ಎಂಬ ಸಾಮನ್ಯ ಜ್ಞಾನ ಬಿಜೆಪಿ ಜೆಡಿಎಸ್ ನಾಯಕರಿಗೆ ಇಲ್ಲ, ಆರ್ಥಿಕ ಶಿಕ್ಷಣದ ಕೊರತೆ ಇದೆ, ಅವರಿಗೆ ತರಬೇತಿಯ ಅವಶ್ಯಕತೆ ಇದ್ದರೆ ಕೊಡಿಸಲಾಗುವದು. ರಾಜ್ಯದಲ್ಲಿ ಹೆ.ಡಿ. ರೇವಣ್ಣ ಅವರ ನೇತೃತ್ವದಲ್ಲಿ ಐದು ಇಲಾಖೆಗಳ ಸಹಕಾರದೊಂದಿಗೆ ಸಮರ್ಥವಾಗಿ ಗ್ಯಾರಂಟಿ ಯೋಜನೆಗಳು ನಡೆದಿವೆ. ಸಣ್ಣ ಸಾಕ್ಷಿ ಪುರಾವೆ ಇಲ್ಲದೇ ಮತ್ತೆ ಮತ್ತೆ ಭ್ರಷ್ಟಾಚಾರದ ಸುಳ್ಳು ಆರೋಪ ಮಾಡಿದರೆ, ನ್ಯಾಯಾಲಯದಲ್ಲಿ ದಾವೆ ಹೂಡುವದಾಗಿ ಗೊಂಡಬಾಳ ಎಚ್ಚರಿಕೆ ನೀಡಿದ್ದಾರೆ.

ದಾವಣಗೆರೆ ಮತ್ತು ಬಾಗಲಕೋಟೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ, ಅಸಮಾಧಾನಗೊಂಡ ಕೆಲವು ಅಲ್ಪಸಂಖ್ಯಾತರು ಬಿಜೆಪಿ ಸೇರಿದ ತಕ್ಷಣ ಮುಸ್ಲಿಂರು ಕಾಂಗ್ರೆಸ್ ವಿರೋಧಿಸುತ್ತಿದ್ದಾರೆ ಎಂದು ಬಿಂಬಿಸುವದು ಸರಿಯಲ್ಲ. ಬಿಜೆಪಿ ಇದೂವರೆಗೆ ಮುಸ್ಲಿಂರಿಗೆ ಒಂದು ಎಂಎಲ್ಎ, ಎಂಪಿ ಕ್ಷೇತ್ರಕ್ಕೆ ಟಿಕೆಟ್ ಸಹ ಕೊಟ್ಟಿಲ್ಲ, ನೇರವಾಗಿ ಅಲ್ಪಸಂಖಾತರನ್ನು ಕೆಟ್ಟದಾಗಿ ಟೀಕಿಸುತ್ತಾರೆ, ಮುಸ್ಲಿಂರಿಗೆ ಅವರ ಪಾಲಿನ ಅನುದಾನ ಕೊಟ್ಟರೂ ಟೀಕಿಸುತ್ತಾರೆ, ಅಂತಹ ಬಿಜೆಪಿಯನ್ನು ಅವರು ನಂಬುವದು ಅಸಾಧ್ಯ, ಇತ್ತ ಕಾಂಗ್ರೆಸ್ ಮುಸ್ಲಿಂರನ್ನು ಸಚಿವರನ್ನಾಗಿ ಮಾಡಿದೆ, ಶಾಸಕ ಸಂಸದರನ್ನೂ ಮಾಡಿದೆ, ವಿಶೇಷ ಯೋಜನೆಗಳನ್ನು ಸಹ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ,

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande