ಭುವನೇಶ್ವರಿ ವಿಶೇಷ ಮಕ್ಕಳ ಶಾಲೆಗೆ ವೀರಕ್ತಮಠ ಕುಟುಂಬದಿಂದ ದೇಣಿಗೆ
ಗದಗ, 24 ಮಾರ್ಚ್ (ಹಿ.ಸ.) ಆ್ಯಂಕರ್:-ವಿಶ್ವ ಕಲ್ಯಾಣ ಗದಗ ಸಂಸ್ಥೆಯ ಸಂಚಾಲಿತ ಭುವನೇಶ್ವರಿ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಗೆ ವೀರಕ್ತಮಠ ಕುಟುಂಬದವರು ದೇಣಿಗೆ ನೀಡಿ ಮಾನವೀಯತೆ ಮೆರೆದ ಘಟನೆ ನಗರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ಧು ವೀರಕ್ತಮಠ ಹಾಗೂ ರುದ್ರೇಶ ವೀರಕ್ತಮಠ, ವಿಶೇಷ ಅ
ಭುವನೇಶ್ವರಿ ವಿಶೇಷ ಮಕ್ಕಳ ಶಾಲೆಗೆ ವೀರಕ್ತಮಠ ಕುಟುಂಬದಿಂದ ದೇಣಿಗೆ


ಗದಗ, 24 ಮಾರ್ಚ್ (ಹಿ.ಸ.)

ಆ್ಯಂಕರ್:-ವಿಶ್ವ ಕಲ್ಯಾಣ ಗದಗ ಸಂಸ್ಥೆಯ ಸಂಚಾಲಿತ ಭುವನೇಶ್ವರಿ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಗೆ ವೀರಕ್ತಮಠ ಕುಟುಂಬದವರು ದೇಣಿಗೆ ನೀಡಿ ಮಾನವೀಯತೆ ಮೆರೆದ ಘಟನೆ ನಗರದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ಧು ವೀರಕ್ತಮಠ ಹಾಗೂ ರುದ್ರೇಶ ವೀರಕ್ತಮಠ, ವಿಶೇಷ ಅಗತ್ಯವುಳ್ಳ ಮಕ್ಕಳ ಸೇವೆ ಅತ್ಯಂತ ಸವಾಲಿನದ್ದಾಗಿದ್ದು, ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಯು ಶ್ಲಾಘನೀಯ ಕಾರ್ಯವನ್ನು ಮಾಡುತ್ತಿದೆ ಎಂದು ಹೇಳಿದರು. ಈ ಶಾಲೆಯು ವಿಶೇಷ ಮಕ್ಕಳಿಗೆ ಅವರ ಸಾಮರ್ಥ್ಯಕ್ಕೆ ತಕ್ಕಂತೆ ತರಬೇತಿ ನೀಡಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಜೊತೆಗೆ ಉತ್ತಮ ಸಂಸ್ಕಾರಗಳನ್ನು ಬೆಳೆಸುತ್ತಿದೆ. ವಿಶೇಷ ಚೇತನರ ಶ್ರೇಯೋಭಿವೃದ್ಧಿಗಾಗಿ ವೀರಕ್ತಮಠ ಕುಟುಂಬದ ವತಿಯಿಂದ ರೂ. 5001/- ದೇಣಿಗೆ ನೀಡಲಾಗಿದೆ ಎಂದು ತಿಳಿಸಿದರು.ಮುಂದೆಯೂ ಈ ಸೇವಾ ಕಾರ್ಯಕ್ಕೆ ನಮ್ಮ ಕುಟುಂಬ ಸದಾ ಬೆಂಬಲ ನೀಡುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷರು ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಮಂಜುನಾಥ ಹದ್ದಣ್ಣವರ ಮಾತನಾಡಿ, ವಿಶ್ವ ಕಲ್ಯಾಣ ಸಂಸ್ಥೆಯು ನಡೆದು ಬಂದ ಸೇವಾ ಪಥವನ್ನು ವಿವರಿಸಿದರು. ಇಂತಹ ಸೇವಾ ಕಾರ್ಯಗಳು ದಾನಿಗಳ ಸಹಕಾರದಿಂದಲೇ ಸಾಧ್ಯವಾಗುತ್ತಿದ್ದು, ಸಮಾಜದ ಸಹಭಾಗಿತ್ವ ಅತ್ಯಗತ್ಯವಾಗಿದೆ ಎಂದರು. ವಿಶೇಷ ಮಕ್ಕಳಿಗೆ ಸೂಕ್ತ ಅವಕಾಶಗಳನ್ನು ಕಲ್ಪಿಸಿ, ಅವರೊಳಗಿನ ಪ್ರತಿಭೆಯನ್ನು ಹೊರತರುವ ಕಾರ್ಯವನ್ನು ಸಂಸ್ಥೆ ಪ್ರಾಮಾಣಿಕವಾಗಿ ಮಾಡುತ್ತಿದೆ ಎಂದು ತಿಳಿಸಿದರು.

ವೀರಕ್ತಮಠ ಕುಟುಂಬದ ದೇಣಿಗೆ ವಿಶೇಷ ಮಕ್ಕಳ ಅಭಿವೃದ್ಧಿಗೆ ಮಹತ್ವದ ಕೊಡುಗೆಯಾಗಿದ್ದು, ದಾನಿಗಳಿಗೂ ಹಾಗೂ ಅವರ ಕುಟುಂಬಕ್ಕೂ ದೇವರು ಆಯುರಾರೋಗ್ಯ ನೀಡಿ, ಸಕಲ ಇಷ್ಟಾರ್ಥಗಳನ್ನು ಈಡೇರಿಸಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ವಿಶೇಷ ಚೇತನರು, ಅವರ ಪಾಲಕರು ಹಾಗೂ ಶಾಲೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande