ತಪಾಸಣಾ ಕೇಂದ್ರದಲ್ಲಿ ₹32.50 ಲಕ್ಷ ನಗದು ಜಪ್ತಿ
ವಿಜಯಪುರ, 22 ಮಾರ್ಚ್ (ಹಿ.ಸ.) ಆ್ಯಂಕರ್ : ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಹೊನ್ನಕಟ್ಟಿ ಕ್ರಾಸ್ ಚೆಕ್ ಪೊಸ್ಟ್ ನಲ್ಲಿ ಇಂದು ಬೆಳಿಗ್ಗೆ ಸುಮಾರು 4:01 ಗಂಟೆಗೆ 32:50 ಲಕ್ಷ ಹಣ ವಶಕ್ಕೆ ಪಡೆಯಲಾಯಿತು. ಶ್ರೀಧರ ಸಂಗನಾಳ್, ಜೆಇ ಅವರ ನೇತೃತ್ವದ ಎಸ್ಎಸ್ಟಿ ತಂಡವು ವಾಹನ ಪರಿಶೀಲನೆ ವೇಳೆ KA-36 P
ಹಣ


ವಿಜಯಪುರ, 22 ಮಾರ್ಚ್ (ಹಿ.ಸ.)

ಆ್ಯಂಕರ್ : ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಹೊನ್ನಕಟ್ಟಿ ಕ್ರಾಸ್ ಚೆಕ್ ಪೊಸ್ಟ್ ನಲ್ಲಿ ಇಂದು ಬೆಳಿಗ್ಗೆ ಸುಮಾರು 4:01 ಗಂಟೆಗೆ 32:50 ಲಕ್ಷ ಹಣ ವಶಕ್ಕೆ ಪಡೆಯಲಾಯಿತು.

ಶ್ರೀಧರ ಸಂಗನಾಳ್, ಜೆಇ ಅವರ ನೇತೃತ್ವದ ಎಸ್ಎಸ್ಟಿ ತಂಡವು ವಾಹನ ಪರಿಶೀಲನೆ ವೇಳೆ KA-36 P-3991 ಮಾರುತಿ ಎರ್ಟಿಗಾ ಕಾರಿನಲ್ಲಿ ₹32,50,000 ನಗದು ಪತ್ತೆಯಾಯಿತು.

ಹಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಲಾಗದ ಕಾರಣ ಕಾನೂನು ಪ್ರಕಾರ ಜಪ್ತಿ ಮಾಡಲಾಯಿತು. ತಂಡದ ಸದಸ್ಯರಾದ ಸುರೇಶ್ ನಾಯಕ್ (ಎಎಸ್ಐ), ಮಂಜುನಾಥ ಕುರಿ (ಪಿಸಿ), ಶಂಕರಾನಂದ ಮುದೋಳ್ (ಅಬಕಾರಿ ಕಾನ್ಸ್ಟೇಬಲ್) ಹಾಗೂ ಎಂ. ಹುಣಗುಂಡ (ಪಿಸಿ) ಉಪಸ್ಥಿತರಿದ್ದರು. ಮುಂದಿನ ಕ್ರಮಕ್ಕಾಗಿ ಎಫ್ಎಸ್ಟಿ ತಂಡಕ್ಕೆ ಪ್ರಕರಣ ಹಸ್ತಾಂತರಿಸಲಾಯಿತು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande