ಮೇನಲ್ಲಿ ತುಂಗಭದ್ರ ಜಲಾಶಯದಲ್ಲಿ ಹೂಳೆತ್ತುವ ಜಾತ್ರೆ : ಡಾ. ದರೂರು ಪುರುಷೋತ್ತಮ ಗೌಡ
ಬಳ್ಳಾರಿ, 22 ಮಾರ್ಚ್ (ಹಿ.ಸ.): ಆ್ಯಂಕರ್ : ತುಂಗಭದ್ರಾ ಜಲಾಶಯದಲ್ಲಿ ಸಂಗ್ರಹವಾಗಿರುವ ಅಂದಾಜು 33 ಟಿಎಂಸಿ ಪ್ರಮಾಣದ ಹೂಳನ್ನು ತೆಗೆಯುವ ಕೆಲಸವನ್ನು ತುಂಗಭದ್ರ ರೈತ ಸಂಘವು ಮೇ ತಿಂಗಳಿನಲ್ಲಿ ಪ್ರಾರಂಭಿಸಲಿದೆ. ತುಂಗಭದ್ರ ರೈತ ಸಂಘದ ಅಧ್ಯಕ್ಷರಾಗಿರುವ ಡಾ. ದರೂರು ಪುರುಷೋತ್ತಮ ಗೌಡ ಅವರು ಸುದ್ದಿಗ
ಮೇನಲ್ಲಿ ತುಂಗಭದ್ರ ಜಲಾಶಯದಲ್ಲಿ ಒಂದು ವಾರ `ಹೂಳೆತ್ತುವ ಜಾತ್ರೆ' : ಡಾ. ದರೂರು ಪುರುಷೋತ್ತಮ ಗೌಡ


ಮೇನಲ್ಲಿ ತುಂಗಭದ್ರ ಜಲಾಶಯದಲ್ಲಿ ಒಂದು ವಾರ `ಹೂಳೆತ್ತುವ ಜಾತ್ರೆ' : ಡಾ. ದರೂರು ಪುರುಷೋತ್ತಮ ಗೌಡ


ಮೇನಲ್ಲಿ ತುಂಗಭದ್ರ ಜಲಾಶಯದಲ್ಲಿ ಒಂದು ವಾರ `ಹೂಳೆತ್ತುವ ಜಾತ್ರೆ' : ಡಾ. ದರೂರು ಪುರುಷೋತ್ತಮ ಗೌಡ


ಬಳ್ಳಾರಿ, 22 ಮಾರ್ಚ್ (ಹಿ.ಸ.):

ಆ್ಯಂಕರ್ : ತುಂಗಭದ್ರಾ ಜಲಾಶಯದಲ್ಲಿ ಸಂಗ್ರಹವಾಗಿರುವ ಅಂದಾಜು 33 ಟಿಎಂಸಿ ಪ್ರಮಾಣದ ಹೂಳನ್ನು ತೆಗೆಯುವ ಕೆಲಸವನ್ನು ತುಂಗಭದ್ರ ರೈತ ಸಂಘವು ಮೇ ತಿಂಗಳಿನಲ್ಲಿ ಪ್ರಾರಂಭಿಸಲಿದೆ.

ತುಂಗಭದ್ರ ರೈತ ಸಂಘದ ಅಧ್ಯಕ್ಷರಾಗಿರುವ ಡಾ. ದರೂರು ಪುರುಷೋತ್ತಮ ಗೌಡ ಅವರು ಸುದ್ದಿಗಾರರಿಗೆ ಭಾನುವಾರ ಮಾಹಿತಿ ನೀಡಿದ್ದು, ಜಲಾಶಯದಲ್ಲಿ ಹೂಳು ತುಂಬಿರುವ ಕಾರಣ ನೀರು ಸಂಗ್ರಹದ ಪ್ರಮಾಣ ಕಡಿಮೆಯಾಗಿದೆ. ಯಾವ ಸರ್ಕಾರಗಳೂ ಹೂಳು ತೆಗೆಯಲು ಆಸಕ್ತಿ ತೋರಿಸುತ್ತಿಲ್ಲ. ಕಾರಣ ತುಂಗಭದ್ರ ರೈತ ಸಂಘವೇ ಸ್ವಯಂ ಪ್ರೇರಣೆಯಿಂದ ಹೂಳನ್ನು ತೆಗೆಯಲಿದೆ ಎಂದರು.

ತುಂಗಭದ್ರ ರೈತ ಸಂಘವು 2017ರಲ್ಲಿ ಹೂಳೆತ್ತುವ ಕೆಲಸವನ್ನು ಮಾಡಿತ್ತು. ಅದರಂತೆಯೇ ಮೇ ತಿಂಗಳಿನಿಂದ ಹೂಳು ತೆಗೆಯುವ ಕಾರ್ಯವನ್ನು `ಹೂಳೆತ್ತುವ ಜಾತ್ರೆ'ಯನ್ನಾಗಿ ಹಮ್ಮಿಕೊಳ್ಳಲಾಗಿದೆ. ಈ ಜಾತ್ರೆಯಲ್ಲಿ ಅನೇಕರು ಪಾಲ್ಗೊಳ್ಳಲಿದ್ದಾರೆ. ಎಲ್ಲರಿಗೂ ಜಾತ್ರೆಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಆಹ್ವಾನವಿದೆ ಎಂದರು.

ಅಂತಾರಾಷ್ಟ್ರೀಯ ಜಲ ದಿನಾಚರಣೆಯ ಅಂಗವಾಗಿ ಕರ್ನಾಟಕದ ಬಳ್ಳಾರಿ, ವಿಜಯನಗರ, ಕೊಪ್ಪಳ ಮತ್ತು ರಾಯಚೂರು ನಾಲ್ಕು ಜಿಲ್ಲೆ, ಆಂಧ್ರಪ್ರದೇಶದ ಅನಂತಪುರ, ಕರ್ನೂಲು ಮತ್ತು ಕಡಪ ಮೂರು ಜಿಲ್ಲೆ ಹಾಗೂ ತೆಲಂಗಾಣದ ಎರಡು ಜಿಲ್ಲೆ ಸೇರಿ ಒಟ್ಟು ಒಂಬತ್ತು ಜಿಲ್ಲೆಗಳ ರೈತರ ಜೀವನಾಡಿ ಆಗಿರುವ ತುಂಗಭದ್ರ

ಜಲಾಶಯವನ್ನು ಹೂಳುಮುಕ್ತಗೊಳಿಸಲು ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಆಸಕ್ತಿ ತೋರಿಸಬೇಕು ಎಂದರು.

ತುಂಗಭದ್ರ ಜಲಾಶಯದ ಇಂಜಿನಿಯರುಗಳು, ನೀರಾವರಿ ತಜ್ಞರು, ಮಠಾಧೀಶರರುಗಳ ಸಹಯೋಗದಲ್ಲಿ `ಹೂಳೆತ್ತುವ ಜಾತ್ರೆ' ಒಂದು ವಾರ ಕಾಲ, ಪ್ರತಿದಿನ ಐದು ನೂರು ಟ್ರ್ಯಾಕ್ಟರ್ಗಳಷ್ಟು ಹೂಳನ್ನು ತೆಗೆಯುವ ಗುರಿಯುವ ಮೂಲಕ ಆರಂಭ ಆಗಲಿದೆ ಎಂದರು.

ತುಂಗಭದ್ರ ಜಲಾಶಯದಿಂದ ಕೈಗಾರಿಕೆಗಳು ನೀರು ಪಡೆಯುತ್ತಿದ್ದು, ರೈತರಿಗಾಗಲೀ, ಜಲಾಶಯಕ್ಕಾಗಲೀ ಅಥವಾ ಜನಸಾಮಾನ್ಯರಿಗಾಗಲೀ ಕೈಗಾರಿಕೆಗಳು ಏನನ್ನೂ ಒಳಿತು ಮಾಡಿಲ್ಲ. ಕಾರಣ ಜಲಾಶಯದಿಂದ ನೀರು ಪಡೆಯುತ್ತಿರುವ ಕಂಪನಿಗಳು ಹಿಟಾಚಿ, ಜೆಸಿಬಿ, ಯಂತ್ರಗಳು ಮತ್ತು ಲಾರಿಗಳನ್ನು ನೀಡುವ ಮೂಲಕ `ಹೂಳೆತ್ತುವ ಜಾತ್ರೆ'ಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಜಾಲಿಹಾಳ್ ಶ್ರೀಧರ್ ಗೌಡ, ಆಗಲೂರಪ್ಪ, ಮಲ್ಲಾರೆಡ್ಡಿ, ವೀರಭದ್ರ ನಾಯಕ್, ವೀರೇಶ, ವೀರಭದ್ರಯ್ಯ ಸೇರಿ ಅನೇಕರು ಈ ಸಂದರ್ಭದಲ್ಲಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande