ಡಾ. ವೀರಣ್ಣ ಚರಂತಿಮಠ ಪರ ಮನೆಮನೆ ಪ್ರಚಾರ
ಬಾಗಲಕೋಟೆ, 22 ಮಾರ್ಚ್ (ಹಿ.ಸ.) ಆ್ಯಂಕರ್ : ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನಲೆಯಲ್ಲಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಅಭ್ಯರ್ಥಿಯಾದ ವೀರಣ್ಣಾ ಚರಂತಿಮಠ ಅವರ ಪರವಾಗಿ ವಾರ್ಡ್ ನಂ.14ರಲ್ಲಿ ಮನೆಮನೆ ಪ್ರಚಾರ ಕಾರ್ಯ ನಡೆಸಲಾಯಿತು. ವಾರ್ಡ್ ನಂ.14ರ ಭೂತ ಸಂಖ್ಯೆ 112 ಮತ್ತು 113ರಲ
ವಿರಣ್


ಬಾಗಲಕೋಟೆ, 22 ಮಾರ್ಚ್ (ಹಿ.ಸ.)

ಆ್ಯಂಕರ್ : ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನಲೆಯಲ್ಲಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಅಭ್ಯರ್ಥಿಯಾದ ವೀರಣ್ಣಾ ಚರಂತಿಮಠ ಅವರ ಪರವಾಗಿ ವಾರ್ಡ್ ನಂ.14ರಲ್ಲಿ ಮನೆಮನೆ ಪ್ರಚಾರ ಕಾರ್ಯ ನಡೆಸಲಾಯಿತು.

ವಾರ್ಡ್ ನಂ.14ರ ಭೂತ ಸಂಖ್ಯೆ 112 ಮತ್ತು 113ರಲ್ಲಿ ಬಿಜೆಪಿ ಕಾರ್ಯಕರ್ತರು ಮನೆಮನೆಗೆ ಭೇಟಿ ನೀಡಿ ಮತದಾರರನ್ನು ಸಂಪರ್ಕಿಸಿ, ಪಕ್ಷದ ಅಭ್ಯರ್ಥಿ ಡಾ. ವೀರಣ್ಣ ಚರಂತಿಮಠ ಅವರಿಗೆ ಬೆಂಬಲ ನೀಡುವಂತೆ ಮನವಿ ಮಾಡಿದರು. ಈ ವೇಳೆ ಕಾರ್ಯಕರ್ತರು ಹಾಗೂ ಮುಖಂಡರು ಉಪಚುನಾವಣೆಯ ಮಹತ್ವವನ್ನು ವಿವರಿಸಿ ಪಕ್ಷದ ಅಭಿವೃದ್ಧಿ ಕಾರ್ಯಗಳ ಕುರಿತು ಮಾಹಿತಿ ನೀಡಿದರು.

ಇದೇ ವೇಳೆ ಮಾರ್ಚ್ 23, 2026ರಂದು ನಡೆಯಲಿರುವ ಡಾ. ವೀರಣ್ಣ ಚರಂತಿಮಠ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಮತದಾರರು ಹಾಗೂ ಕಾರ್ಯಕರ್ತರನ್ನು ಆಹ್ವಾನಿಸಲಾಯಿತು.

ಈ ಪ್ರಚಾರ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande