ರಾಷ್ಟ್ರಪತಿ ಮುರ್ಮು–ಪ್ರೇಮಾನಂದ ಮಹಾರಾಜ್ ಭೇಟಿ
ಮಥುರಾ, 20 ಮಾರ್ಚ್ (ಹಿ.ಸ.): ಆ್ಯಂಕರ್: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉತ್ತರ ಪ್ರದೇಶದಲ್ಲಿ ತಮ್ಮ ಎರಡನೇ ದಿನದ ಪ್ರವಾಸದ ಅಂಗವಾಗಿ ಶುಕ್ರವಾರ ವೃಂದಾವನದಲ್ಲಿ ಖ್ಯಾತ ಸಂತ ಪ್ರೇಮಾನಂದ ಮಹಾರಾಜ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಬೆಳಿಗ್ಗೆ ಸುಮಾರು 7.30ರ ಸುಮಾರಿಗೆ ರಾಷ್ಟ್ರಪತ
President


ಮಥುರಾ, 20 ಮಾರ್ಚ್ (ಹಿ.ಸ.):

ಆ್ಯಂಕರ್:

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉತ್ತರ ಪ್ರದೇಶದಲ್ಲಿ ತಮ್ಮ ಎರಡನೇ ದಿನದ ಪ್ರವಾಸದ ಅಂಗವಾಗಿ ಶುಕ್ರವಾರ ವೃಂದಾವನದಲ್ಲಿ ಖ್ಯಾತ ಸಂತ ಪ್ರೇಮಾನಂದ ಮಹಾರಾಜ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಬೆಳಿಗ್ಗೆ ಸುಮಾರು 7.30ರ ಸುಮಾರಿಗೆ ರಾಷ್ಟ್ರಪತಿ ಅವರು ಕಠಿಣ ಭದ್ರತಾ ವ್ಯವಸ್ಥೆಯ ನಡುವೆ ಶ್ರೀ ಹಿಟ್ ರಾಧಾ ಕೇಲಿ ಕುಂಜ್ ಆಶ್ರಮಕ್ಕೆ ಆಗಮಿಸಿ, ಮಹಾರಾಜರ ದರ್ಶನ ಪಡೆದರು. ಈ ವೇಳೆ ಆಶ್ರಮದ ಶಿಷ್ಯರು ಹಾಗೂ ಭಕ್ತರು ಪರಂಪರೆಯ ಶೈಲಿಯಲ್ಲಿ ಆತ್ಮೀಯ ಸ್ವಾಗತ ನೀಡಿದರು.

ಭೇಟಿಯ ವೇಳೆ ಪ್ರೇಮಾನಂದ ಮಹಾರಾಜ್ ಅವರು ಬ್ರಜಭೂಮಿಯ ಮಹಿಮೆ ಹಾಗೂ ಸೇವಾಭಾವದ ಮಹತ್ವವನ್ನು ವಿವರಿಸಿದರು. ಈ ಆಧ್ಯಾತ್ಮಿಕ ಸಂವಾದದಲ್ಲಿ ಅಧ್ಯಾತ್ಮ, ನಿಸ್ವಾರ್ಥ ಸೇವೆ ಮತ್ತು ಜನಕಲ್ಯಾಣದಂತಹ ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಯಿತು. ಈ ಭೇಟಿ ಬ್ರಜ ಪ್ರದೇಶದ ಭಕ್ತರಲ್ಲದೆ ದೇಶದಾದ್ಯಂತದ ಭಕ್ತರಲ್ಲಿ ಗಮನ ಸೆಳೆದಿದೆ.

ಇದೇ ಸಂದರ್ಭದಲ್ಲಿ ರಾಷ್ಟ್ರಪತಿ ಅವರು ನೀಮ್ ಕರೋಲಿ ಬಾಬಾ ಅವರ ಸ್ಮಾರಕಕ್ಕೂ ಭೇಟಿ ನೀಡಲಿದ್ದಾರೆ. ಅಲ್ಲದೆ, ಸಂಜೆ ವೇಳೆ ರಾಮಕೃಷ್ಣ ಮಿಷನ್ ಸೇವಾಶ್ರಮದಲ್ಲಿ ನಿರ್ಮಿತವಾಗಿರುವ ಹೊಸ ಆಂಕಾಲಜಿ ವಿಭಾಗವನ್ನು ಉದ್ಘಾಟಿಸಲಿದ್ದಾರೆ.

ಪ್ರವಾಸದ ಅಂಗವಾಗಿ ಸಾಧ್ವಿ ಋತಂಭರ ಸ್ಥಾಪಿಸಿದ ವಾತ್ಸಲ್ಯ ಗ್ರಾಮಕ್ಕೂ ಭೇಟಿ ನೀಡಲಿದ್ದು, ಮಾರ್ಚ್ 21ರಂದು ದಂಘಾಟಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ತಮ್ಮ ಪ್ರವಾಸವನ್ನು ಪೂರ್ಣಗೊಳಿಸಲಿದ್ದಾರೆ. ನಂತರ ಪರಂಪರೆಯಂತೆ ಗೋವರ್ಧನ ಪರ್ವತದ ಏಳು ಮೈಲಿ ಪರಿಕ್ರಮೆಯನ್ನು ನೆರವೇರಿಸಿ ನವದೆಹಲಿಗೆ ಮರಳಲಿದ್ದಾರೆ.

ಇದನ್ನೊಳಗೊಂಡಂತೆ ರಾಷ್ಟ್ರಪತಿಯ ಮಥುರಾ–ವೃಂದಾವನ ಪ್ರವಾಸದ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಭದ್ರತೆಯನ್ನು ಕಟ್ಟುನಿಟ್ಟಾಗಿಸಿದೆ. ಭದ್ರತಾ ಕಾರಣಗಳಿಂದ ಮತ್ತು ಭಯೋತ್ಪಾದನಾ ಆತಂಕದ ಹಿನ್ನೆಲೆ, ಮಥುರಾ ಜಿಲ್ಲೆಯನ್ನು ‘ನೋ-ಫ್ಲೈ ಜೋನ್’ ಎಂದು ಘೋಷಿಸಲಾಗಿದೆ. ಈ ನಿರ್ಬಂಧ ಮಾರ್ಚ್ 19 ಬೆಳಿಗ್ಗೆ 10 ಗಂಟೆಯಿಂದ ಜಾರಿಗೆ ಬಂದು ಮಾರ್ಚ್ 21 ಸಂಜೆ 5 ಗಂಟೆಯವರೆಗೆ ಮುಂದುವರಿಯಲಿದೆ. ಈ ಅವಧಿಯಲ್ಲಿ ಡ್ರೋನ್, ಗಾಳಿಪಟ ಅಥವಾ ಯಾವುದೇ ಬಲೂನುಗಳನ್ನು ಹಾರಿಸುವುದಕ್ಕೆ ಸಂಪೂರ್ಣ ನಿಷೇಧ ವಿಧಿಸಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande