
ಬಾಗಲಕೋಟೆ, 17 ಮಾರ್ಚ್ (ಹಿ.ಸ.)
ಆ್ಯಂಕರ್ : ಭಾರಿ ಗಾಳಿ-ಮಳೆಯ ರಭಸಕ್ಕೆ ಉಪಚುನಾವಣೆ ಹಿನ್ನೆಲೆ ಸ್ಥಾಪಿಸಲಾಗಿದ್ದ ತಪಾಸಣಾ ಕೇಂದ್ರಗಳಿಗೆ ಹಾನಿಯಾಗಿರುವ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ.
ಬಾಗಲಕೋಟೆ ತಾಲೂಕಿನ ಹೊಸೂರು ತಪಾಸಣಾ ಕೇಂದ್ರ ಸೇರಿದಂತೆ ಹಲವು ಕಡೆಗಳಲ್ಲಿ ಗಾಳಿ-ಮಳೆಗೆ ತಾತ್ಕಾಲಿಕ ಕಟ್ಟಡಗಳು ಕಿತ್ತು ಹೋಗಿದ್ದು, ಕರ್ತವ್ಯದಲ್ಲಿದ್ದ ಸಿಬ್ಬಂದಿ ಪೇಚಿಗೆ ಸಿಲುಕಿದರು.
ಹಠಾತ್ ಮಳೆಯಿಂದಾಗಿ ಮಹತ್ವದ ದಾಖಲೆಗಳು ಮತ್ತು ಸಾಮಗ್ರಿಗಳನ್ನು ರಕ್ಷಿಸಲು ಸಿಬ್ಬಂದಿ ಪರದಾಡಿದ ಘಟನೆ ನಡೆದಿದೆ.
ಚುನಾವಣಾ ಕರ್ತವ್ಯಕ್ಕಾಗಿ ಸ್ಥಾಪಿಸಲಾದ ಕೇಂದ್ರಗಳ ಸುರಕ್ಷತೆ ಹಾಗೂ ಅಗತ್ಯ ಮೂಲಸೌಕರ್ಯಗಳ ಬಗ್ಗೆ ಪ್ರಶ್ನೆಗಳು ಉದ್ಭವವಾಗಿದ್ದು, ಮುಂದಿನ ದಿನಗಳಲ್ಲಿ ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande