ನೀರಿನ ಕಂದಾಯ ಪಾವತಿಗೆ ವಿಶೇಷ ಕೌಂಟರ್
ಶಿವಮೊಗ್ಗ, 17 ಮಾರ್ಚ್ (ಹಿ.ಸ.): ಆ್ಯಂಕರ್: ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗ ಮತ್ತು ಉಪವಿಭಾಗ ಶಿವಮೊಗ್ಗ ಇವರ ವತಿಯಿಂದ 2025-26 ನೇ ಸಾಲಿನ ಮಾರ್ಚ್ 22 ರ ಭಾನುವಾರದಂದು ನೀರಿನ ಕಂದಾಯ ಮತ್ತು ಬಾಕಿ ಕರ ವಸೂಲಾತಿ ಮಾಡಲು ವಿಶೇಷ ವಸೂಲಾತಿ ಕೌಂಟರ್‌ಗಳನ್ನು ಕೆಳಕಂಡ ಸ್ಥಳ
ನೀರಿನ ಕಂದಾಯ ಪಾವತಿಗೆ ವಿಶೇಷ ಕೌಂಟರ್


ಶಿವಮೊಗ್ಗ, 17 ಮಾರ್ಚ್ (ಹಿ.ಸ.):

ಆ್ಯಂಕರ್:

ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗ ಮತ್ತು ಉಪವಿಭಾಗ ಶಿವಮೊಗ್ಗ ಇವರ ವತಿಯಿಂದ 2025-26 ನೇ ಸಾಲಿನ ಮಾರ್ಚ್ 22 ರ ಭಾನುವಾರದಂದು ನೀರಿನ ಕಂದಾಯ ಮತ್ತು ಬಾಕಿ ಕರ ವಸೂಲಾತಿ ಮಾಡಲು ವಿಶೇಷ ವಸೂಲಾತಿ ಕೌಂಟರ್‌ಗಳನ್ನು ಕೆಳಕಂಡ ಸ್ಥಳಗಳಲ್ಲಿ ತೆರೆಯಲಾಗಿದೆ.

ರಾಗಿಗುಡ್ಡ ಕೊನೆ ಬಸ್‌ಸ್ಟಾಪ್ ಹತ್ತಿರ, ಗೋಪಾಳ ಕೊನೆ ಬಸ್‌ಸ್ಟಾಪ್ ಹತ್ತಿರ, ಗಾಂಧೀಬಜಾರ್ ಬಸವೇಶ್ವರ ದೇವಸ್ಥಾನದ ಆವರಣ, ಅಶೋಕನಗರ ನಂದಿನಿ ಬೂತ್, ಪೊಲೀಸ್ ಕ್ವಾಟ್ರಸ್ ಹತ್ತಿರ ಹಾಗೂ ಗಾಡಿಕೊಪ್ಪ ಸರ್ಕಾರಿ ಶಾಲೆ ಹತ್ತಿರ ವಿಶೇಷ ಕೌಂಟರ್‌ಗಳನ್ನು ತೆರೆಯಲಾಗಿದೆ. ನೀರಿನ ಖಾತೆದಾರರು ಬಾಕಿ ಉಳಿಸಿಕೊಂಡಿರುವ ನೀರಿನ ಕಂದಾಯವನ್ನು ಪಾವತಿಸದಿದ್ದಲ್ಲಿ ಅಂತಹವರ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗುವುದು. ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸಬೇಕೆಂದು ಕನನೀಸ ಮತ್ತು ಒಚ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande