




ಕೊಪ್ಪಳ, 17 ಮಾರ್ಚ್ (ಹಿ.ಸ.):
ಆ್ಯಂಕರ್: ನಗರಸಭೆ ಆವರಣ ಇಲ್ಲಿ ನಡೆದ 138ನೇ ದಿನದ ಬಲ್ಡೋಟ ತೊಲಗಬೇಕು, 20 ಕಾರ್ಖಾನೆ ಬಾಧಿತ ಹಳ್ಳಿಯ 50 ಸಾವಿರ ಜನರ ಜೀವ, ಆರೋಗ್ಯ ಉಳಿಸಬೇಕು, ಬಸಾಪುರ ಕೆರೆ ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು, ತುಂಗಭದ್ರಾ ವಿಷಗೊಳಿಸುವ ಕಾರ್ಖಾನೆಗಳನ್ನು ಸೀಜ್ ಮಾಡಬೇಕು ಎಂದು ನಡೆದ ಧರಣಿ ಉದ್ದೇಶಿಸಿ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ನಜೀರ್ ಸಾಬ್ ಮೂಲಿಮನಿ ಮಾತನಾಡಿ ಇದೇ 22.03.2026 ರವಿವಾರ ಸಂಜೆ 7 ಗಂಟೆಗೆ ಹಂಪಿ ಎಕ್ಸ್ ಪ್ರೆಸ್ ಮೂಲಕ ಕೊಪ್ಪಳ ರೈಲ್ವೆ ನಿಲ್ದಾಣದಿಂದ ಬೆಂಗಳೂರು ಚಲೋ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲು ಮುಂದಾಗಬೇಕೆಂದು ಎಲ್ಲಾ ಹಂತದ ಘಟಕಗಳು ರೈತರನ್ನು ತರಲು ಕರೆ ನೀಡಿದರು.
ಮುಂದೊಂದು ಈಗಾಗಲೇ ತುಂಗಭದ್ರಾ ಅಣೆಕಟ್ಟು ಪ್ರದೇಶದಲ್ಲಿ ರೈತರು ಒಂದೆ ಬೆಳೆ ಬೆಳೆಯುವ ಸ್ಥಿತಿ ನಿರ್ಮಾಣವಾಗಿದೆ. ಕಾರ್ಖಾನೆ ಮಾಲೀಕರು ನಿರ್ಭೀತಿಯಿಂದ ಮಿತಿ ಇಲ್ಲದೆ ನೀರು ಬಳಸಿ ಇಲ್ಲದ ಮಳೆ ಕೊರತೆ, ಹೂಳು ತುಂಬಿದೆ, ಕ್ರಸ್ಟ್ ಗೇಟ್ ಮುರಿದಿದೆ ಎಂದು ಹೇಳುವುದು ಕೇವಲ ನೆಪವಾಗಿದೆ. ಇದಕ್ಕೆ ರೈತರು ಒಗ್ಗಿಕೊಳ್ಳಲಿ ಎಂದು ರೂಢಿ ಮಾಡಿಸುತ್ತಿದ್ದಾರೆ ಮುಂದೊಂದು ದಿನ ಇದರ ವಿರುದ್ಧ ರೈತರು ಬಂಡೇಳುವ ಕಾಲ ದೂರವಿಲ್ಲ ಎಂದರು.
ಧರಣಿ ನೇತೃತ್ವ ವಹಿಸಿದ್ದ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು ಅವರು ಹೇಳಿಕೆ ನೀಡಿ ಇದೆ 22.03.2026 ರವಿವಾರ ರಂದು ಬೆಂಗಳೂರು ಚಲೋ ಸತ್ಯಾಗ್ರಹ ಯಶಸ್ವಿಗೊಳಿಸಲು ಮುನ್ನಡೆಯಿರಿ ಎಂದು ಕರೆ ನೀಡಿದರು. ನವಚೇತನ ಶಾಲೆ ಮುಖ್ಯೋಪಾಧ್ಯಾಯರಾದ ಹನುಮಂತಪ್ಪ ಎಂ. ಕಡದಳ್ಳಿ ಮಾತನಾಡಿ ಬಲ್ಡೋಟ ಲಕ್ಷಗಟ್ಟಲೆ ಜನರ ಆರೋಗ್ಯ ಹಾಳು ಮಾಡಲು ಬರುತ್ತಿರುವುದು ದುರಂತ ಸಂಗತಿ. ಇಲ್ಲಿನ ಹಿರಿಯರು ತಪಸ್ಸಿನ ರೀತಿ ಹೋರಾಟ ಮಾಡುತ್ತಿದ್ದಾರೆ. ಇವರಿಗೆ ನಮ್ಮ ಮಕ್ಕಳು ಚಿರ ರುಣಿಯಾಗಿರಬೇಕು ಎಂದು ಇದು ನಿಮ್ಮ ಭವಿಷ್ಯದ ಬೆಳಕಿಗಾಗಿ ನಡೆದ ಹೋರಾಟದಲ್ಲಿ ಶುದ್ಧ ಗಾಳಿ, ಶುದ್ಧ ನೀರು, ಶುದ್ಧ ಪರಿಸರ ಪಡೆಯೋಣ ಎಂದರು.
ಧರಣಿಯಲ್ಲಿ ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ನಿವೃತ್ತ ಪ್ರಾಚಾರ್ಯ ಎಸ್.ಬಿ. ರಾಜೂರು, ಪ್ರಕಾಶಕ ಡಿ.ಎಂ. ಬಡಿಗೇರ, ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಹನುಮಂತಪ್ಪ ಹೊಳೆಯಾಚೆ, ರಾಜಶೇಖರ ಏಳುಬಾವಿ, ಶಂಭುಲಿಂಗಪ್ಪ ಹರಗೇರಿ, ಶರಣು ಶೆಟ್ಟರ್, ಸುಭಾನ್ ಸಾಬ್ ನೀರಲಗಿ, ಮಖ್ಬುಲ್ ರಾಯಚೂರು, ನಿರುಪಾದಿಗೌಡ, ಆನಂದ ಕಟ್ಟಿ, ಶಿವಕುಮಾರ ಸ್ವಾಮಿ, ಗಾಯತ್ರಿ ಹೊಸಮನಿ, ನಿವೃತ್ತ ಪ್ರಾಚಾರ್ಯ ಎಲ್.ಎಪ್. ಪಾಟೀಲ್, ಶಿವಾನಂದಯ್ಯ ಬೀಳಗಿಮಠ, ಸರೋಜಾ ಬಾಕಳೆ, ಸುವರ್ಣ ಎಂ. ತುಪ್ಪದ್, ಎಂ.ಡಿ. ಸಿರಾಜ್, ಮೂಕಪ್ಪ ಮೇಸ್ತ್ರಿ ಬಸಾಪುರ, ಯಮನೂರಪ್ಪ ಹಾಲಳ್ಳಿ ಬಸಾಪುರ, ರವಿ ಕಾಂತನವರ, ಬಿ.ಜಿ. ಕರಿಗಾರ, ವೈ. ಸತ್ಯನಾರಾಯಣ, ಪಂಪಣ್ಣ ಚಿಂತಪಲ್ಲಿ, ಮಲ್ಲಪ್ಪ ಎಸ್.ಎಚ್, ಹನುಮಂತಪ್ಪ ಗೊಂದಿ, ನಾಗರಾಜ ಕುಷ್ಟಗಿ, ಶಿವಪ್ಪ ಜಲ್ಲಿ, ಆಂಜನೇಯ ಡಿ, ಮಹಾದೇವಪ್ಪ ಮಾವಿನಮಡು, ವಿಜಯ ಮಹಾಂತೇಶ ಹಟ್ಟಿ ಇತರರು ಪಾಲ್ಗೊಂಡರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್