150 ಕೋಟಿ ರೂ. ಸೈಬರ್ ಹಗರಣದ ಮಾಸ್ಟರ್ ಮೈಂಡ್ ಸೂರತ್ ವಿಮಾನ ನಿಲ್ದಾಣದಲ್ಲಿ ಬಂಧನ
ಸೂರತ್, 15 ಮಾರ್ಚ್ (ಹಿ.ಸ.): ಆ್ಯಂಕರ್: ಗುಜರಾತ್‌ನ ಸೂರತ್ ಸೈಬರ್ ಕ್ರೈಮ್ ಸೆಲ್ ಅಂತಾರಾಷ್ಟ್ರೀಯ ವ್ಯಾಪಾರ ವಂಚನೆ ಪ್ರಕರಣದ ಪ್ರಮುಖ ಆರೋಪಿ ಅಲ್ಪೇಶ್ ವಾಘಾಸಿಯಾನನ್ನು ಸೂರತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದೆ. ಪೊಲೀಸರ ಮಾಹಿತಿ ಪ್ರಕಾರ, ಆರೋಪಿ ದುಬೈನಿಂದ ತನ್ನ ಸೈಬರ್ ವಂಚನೆ ಜಾ
ಅಲ್ಪೇಷ


ಸೂರತ್, 15 ಮಾರ್ಚ್ (ಹಿ.ಸ.):

ಆ್ಯಂಕರ್:

ಗುಜರಾತ್‌ನ ಸೂರತ್ ಸೈಬರ್ ಕ್ರೈಮ್ ಸೆಲ್ ಅಂತಾರಾಷ್ಟ್ರೀಯ ವ್ಯಾಪಾರ ವಂಚನೆ ಪ್ರಕರಣದ ಪ್ರಮುಖ ಆರೋಪಿ ಅಲ್ಪೇಶ್ ವಾಘಾಸಿಯಾನನ್ನು ಸೂರತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದೆ.

ಪೊಲೀಸರ ಮಾಹಿತಿ ಪ್ರಕಾರ, ಆರೋಪಿ ದುಬೈನಿಂದ ತನ್ನ ಸೈಬರ್ ವಂಚನೆ ಜಾಲವನ್ನು ನಿರ್ವಹಿಸುತ್ತಿದ್ದನು. ಷೇರು ವ್ಯಾಪಾರ ಮತ್ತು ಕರೆನ್ಸಿ ಟ್ರೇಡಿಂಗ್ ಹೆಸರಿನಲ್ಲಿ ಹೂಡಿಕೆದಾರರಿಗೆ ಹೆಚ್ಚಿನ ಲಾಭದ ಭರವಸೆ ನೀಡಿ ಲಕ್ಷಾಂತರ ರೂಪಾಯಿಗಳನ್ನು ವಂಚಿಸಿದ್ದಾನೆ.

ಆಶ್ಚರ್ಯಕರ ಸಂಗತಿಯೆಂದರೆ, ಅಲ್ಪೇಶ್ ಕೇವಲ 9ನೇ ತರಗತಿ ವರೆಗೆ ಮಾತ್ರ ಶಿಕ್ಷಣ ಪಡೆದಿದ್ದರೂ, ಸುಮಾರು ₹150 ಕೋಟಿ ಮೌಲ್ಯದ ಸೈಬರ್ ವಂಚನೆ ಜಾಲವನ್ನು ರೂಪಿಸಿದ್ದಾನೆ. ತನಿಖೆಯಲ್ಲಿ ಈ ಜಾಲದ ವಿವಿಧ ಬ್ಯಾಂಕ್ ಖಾತೆಗಳ ಮೂಲಕ ₹15,363,08,975ಕ್ಕೂ ಹೆಚ್ಚು ಹಣದ ವಹಿವಾಟು ನಡೆದಿರುವುದು ಬಹಿರಂಗವಾಗಿದೆ.

ದುಬೈನಲ್ಲಿ ಪರಿಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಭಾರತಕ್ಕೆ ಮರಳಲು ಯತ್ನಿಸಿದ ಆರೋಪಿ ಸೂರತ್ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ, ಈ ಹಿಂದೆ ಜಾರಿ ಮಾಡಲಾಗಿದ್ದ ಲುಕ್ ಔಟ್ ಸರ್ಕ್ಯುಲರ್ ಆಧರಿಸಿ ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದರು. ಬಂಧನ ತಪ್ಪಿಸಿಕೊಳ್ಳಲು ಆತ ಮೂರು ವಿಮಾನಗಳ ಟಿಕೆಟ್ ಬುಕ್ ಮಾಡಿಕೊಂಡಿದ್ದರೂ ಬಳಿಕ ಅವುಗಳನ್ನು ರದ್ದುಪಡಿಸಿ ಬ್ಯಾಂಕಾಕ್ ಮೂಲಕ ಭಾರತಕ್ಕೆ ಪ್ರವೇಶಿಸಲು ಯತ್ನಿಸಿದ್ದನು.

ರಾಜ್‌ಕೋಟ್ ಜಿಲ್ಲೆಯ ಗೊಂಡಲ್ ಮೂಲದ ಆರೋಪಿ ಸೂರತ್‌ನ ವೆಲಂಜಾ ಪ್ರದೇಶದಲ್ಲಿ ಐಷಾರಾಮಿ ಬಂಗಲೆಯಲ್ಲಿ ವಾಸಿಸುತ್ತಿದ್ದನು. ಆತ ಐವಿ ಟ್ರೇಡ್ ಮತ್ತು ಸ್ಕೈ ಗ್ರೋತ್ ವೆಲ್ತ್ ಮ್ಯಾನೇಜ್‌ಮೆಂಟ್ ಹೆಸರಿನಲ್ಲಿ ಬಹು ಹಂತದ ಮಾರ್ಕೆಟಿಂಗ್ ಯೋಜನೆಗಳನ್ನು ನಡೆಸಿ, ಮಾನ್ಯ ಪರವಾನಗಿ ಇಲ್ಲದೆ ಹೂಡಿಕೆದಾರರಿಗೆ ಕರೆನ್ಸಿ ಹಾಗೂ ಷೇರು ವ್ಯಾಪಾರದಲ್ಲಿ ಹೆಚ್ಚಿನ ಲಾಭದ ಆಮಿಷವೊಡ್ಡುತ್ತಿದ್ದನು.

ಹೂಡಿಕೆದಾರರಿಂದ ಸಂಗ್ರಹಿಸಿದ ಹಣವನ್ನು ಅಂಗಡಿಯಾ ವ್ಯವಸ್ಥೆ ಹಾಗೂ ಶೆಲ್ ಕಂಪನಿಗಳ ಬ್ಯಾಂಕ್ ಖಾತೆಗಳ ಮೂಲಕ ದುಬೈಗೆ ವರ್ಗಾಯಿಸಲಾಗುತ್ತಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಈವರೆಗೆ 35 ಹೂಡಿಕೆದಾರರು ಸುಮಾರು ₹4.26 ಕೋಟಿ ವಂಚನೆಗೊಳಗಾದ ಪ್ರಕರಣಗಳು ಪತ್ತೆಯಾಗಿದ್ದು, ಬಲಿಪಶುಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಡ್ಯಾನಿಶ್ ಅಲಿಯಾಸ್ ಹೇಮಲ್ ಧನಕ್, ಜೈಸುಖ್ ಪಟೋಲಿಯಾ, ಯಶ್ ಪಟೋಲಿಯಾ ಮತ್ತು ಅಜಯ್ ಅಲಿಯಾಸ್ ಗೋಪಾಲ್ ಭಿಂಡಿ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಬಿಶಾಖಾ ಜೈನ್ ತಿಳಿಸಿದ್ದಾರೆ. ಇವರ ವಿಚಾರಣೆ ವೇಳೆ ಅಲ್ಪೇಶ್ ವಾಘಾಸಿಯಾ ಹಾಗೂ ದುಬೈ ಸಂಪರ್ಕಗಳ ಬಗ್ಗೆ ಮಹತ್ವದ ಮಾಹಿತಿ ದೊರೆತಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande