ದಂಡಿ ಸತ್ಯಾಗ್ರಹ ದಿನ: ಸ್ವಾತಂತ್ರ್ಯ ಹೋರಾಟಗಾರರಿಗೆ ಉಪ ರಾಷ್ಟ್ರಪತಿ ಗೌರವ
ನವದೆಹಲಿ, 12 ಮಾರ್ಚ್ (ಹಿ.ಸ.): ಆ್ಯಂಕರ್: 1930ರಲ್ಲಿ ಇದೇ ದಿನ ಆರಂಭವಾದ ಐತಿಹಾಸಿಕ ದಂಡಿ ಸತ್ಯಾಗ್ರಹ ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಮಹತ್ವದ ತಿರುವಾಗಿತ್ತು ಎಂದು ಉಪ ರಾಷ್ಟ್ರಪತಿ ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಸಂದೇಶ ಹಂಚಿಕೊಂಡಿರುವ ಅವರು, ಮಹಾತ್ಮ ಗಾಂಧಿ ಅವರ ನೇತೃತ
Dandi


ನವದೆಹಲಿ, 12 ಮಾರ್ಚ್ (ಹಿ.ಸ.):

ಆ್ಯಂಕರ್:

1930ರಲ್ಲಿ ಇದೇ ದಿನ ಆರಂಭವಾದ ಐತಿಹಾಸಿಕ ದಂಡಿ ಸತ್ಯಾಗ್ರಹ ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಮಹತ್ವದ ತಿರುವಾಗಿತ್ತು ಎಂದು ಉಪ ರಾಷ್ಟ್ರಪತಿ ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಸಂದೇಶ ಹಂಚಿಕೊಂಡಿರುವ ಅವರು, ಮಹಾತ್ಮ ಗಾಂಧಿ ಅವರ ನೇತೃತ್ವದಲ್ಲಿ ಆರಂಭವಾದ ಈ ದಂಡಿ ಸತ್ಯಾಗ್ರಹವು ಸತ್ಯ ಮತ್ತು ಅಹಿಂಸೆಯ ಆದರ್ಶಗಳ ಮೂಲಕ ದೇಶಾದ್ಯಂತ ಸ್ವಾವಲಂಬನೆಯ ಮನೋಭಾವವನ್ನು ಮೂಡಿಸಿತು ಎಂದು ಅವರು ಹೇಳಿದರು. ಬ್ರಿಟಿಷರ ಉಪ್ಪು ಕಾಯ್ದೆ ವಿರುದ್ಧ ನಡೆದ ಈ ಐತಿಹಾಸಿಕ ಮೆರವಣಿಗೆಯು ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಚೈತನ್ಯ ನೀಡಿತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಐತಿಹಾಸಿಕ ಮೆರವಣಿಗೆಯಲ್ಲಿ ಭಾಗವಹಿಸಿದ ಬಾಪು ಹಾಗೂ ಎಲ್ಲಾ ಧೈರ್ಯಶಾಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಉಪ ರಾಷ್ಟ್ರಪತಿ ಗೌರವ ಸಲ್ಲಿಸಿದ್ದಾರೆ.

ದೇಶವು ಇಂದು ಆತ್ಮನಿರ್ಭರ ಭಾರತ ನಿರ್ಮಾಣದತ್ತ ಸಾಗುತ್ತಿರುವ ಸಂದರ್ಭದಲ್ಲಿ, ದಂಡಿ ಸತ್ಯಾಗ್ರಹದಿಂದ ಪ್ರೇರೇಪಿತವಾದ ಸ್ವಾವಲಂಬನೆಯ ಮನೋಭಾವವೇ ಭಾರತದ ಅಭಿವೃದ್ಧಿಯ ಪಯಣಕ್ಕೆ ಮುಂದುವರೆದ ಮಾರ್ಗದರ್ಶನ ನೀಡುತ್ತಿದೆ ಎಂದು ಅವರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande