
ಬೆಂಗಳೂರು, 27 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಮೊಬೈಲ್ ತಯಾರಿಕೆ ಮತ್ತು ರಫ್ತುವಿನಲ್ಲಿ ಜಗತ್ತಿನಲ್ಲೇ ಅತಿ ದೊಡ್ಡ ರಾಷ್ಟ್ರವಾಗಿ ಹೊಮ್ಮಿರುವ ನಮ್ಮ 'ಡಿಜಿಟಲ್ ಇಂಡಿಯಾ' ಈ ವಲಯದಲ್ಲಿ ಹತ್ತಾರು ಲಕ್ಷ ಜನರಿಗೆ ಉದ್ಯೋಗ ಕಲ್ಪಿಸಿ ಔದ್ಯೋಗಿಕವಾಗಿಯೂ ಮಹತ್ತರ ಕೊಡುಗೆ ನೀಡಿದೆ.
ಭಾರತದ ಮೊಬೈಲ್ ಉತ್ಪಾದನಾ ವಲಯವು ಸ್ಥಳೀಯವಾಗಿ ಯುವ ಸಮುದಾಯಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಗರಿಷ್ಠ ಮಟ್ಟದ ಉದ್ಯೋಗಾವಕಾಶ ಕಲ್ಪಿಸಿಕೊಟ್ಟಿದೆ. ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದ್ದರೂ ಇತ್ತೀಚಿನ ವರ್ಷಗಳಲ್ಲಿ ಯುವಜನರಿಗೆ ಉಗ್ಯೋಗ ಕೊಡುವಲ್ಲಿ ಹಿಂದೆ ಬಿದ್ದಿಲ್ಲ ಭಾರತ.
ದೇಶದಲ್ಲಿ ಒಂದು ದಶಕದಿಂದ ಸರ್ಕಾರಿ ನೌಕರಿ ಮಾತ್ರವಲ್ಲ ಖಾಸಗಿಯಾಗಿಯೂ ಉದ್ಯೋಗ ಪರ್ವ ಸೃಷ್ಟಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ, ಮೇಡ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾದಂತಹ ಉಪಕ್ರಮಗಳು ಯುವ ಸಮುದಾಯದ ಕರಗಳಿಗೆ ಉದ್ಯೋಗ, ಸಂಪಾದನೆ, ಜೀವನ ನಿರ್ವಹಣೆ ಮಾರ್ಗ ತೋರಿವೆ.
ಕೈಗಾರಿಕೆ, ಕೃಷಿ, ಶಿಕ್ಷಣ, ಆರೋಗ್ಯ, ರಕ್ಷಣೆ, ಉತ್ಪಾದನೆ ಹೀಗೆ ಸರ್ವ ವಲಯಗಳಲ್ಲೂ ಉದ್ಯೋಗ ಒದಗಿಸಿದೆ. ಮೊಬೈಲ್ ಉತ್ಪಾದನೆ-ಉದ್ಯಮವೂ ಇದಕ್ಕೆ ಹೊರತಾಗಿಲ್ಲ.ಭಾರತದಲ್ಲಿ ಆಪಲ್ ಒಂದರಿಂದಲೇ ಸುಮಾರು 2.50 ಲಕ್ಷಕ್ಕೂ ಹೆಚ್ಚು ಹೊಸ ನೇರ ಉದ್ಯೋಗಗಳನ್ನು ಸೃಷ್ಟಿಸಿದೆ.
ಕಳೆದ ಐದು ವರ್ಷಗಳಲ್ಲಿ ಆಪಲ್ ಇಂಕ್ ಭಾರತದ ಅತಿ ದೊಡ್ಡ ಮತ್ತು ಅಷ್ಟೇ ವೇಗವಾಗಿ ಬೆಳೆಯುತ್ತಿದ್ದು, ಬ್ಲೂ-ಕಾಲರ್ ಉದ್ಯೋಗಗಳ ಸೃಷ್ಟಿಕರ್ತರಲ್ಲಿ ಒಂದಾಗಿ ಹೊರಹೊಮ್ಮಿದೆ. 2021ರಲ್ಲಿ ಕೇಂದ್ರ ಸರ್ಕಾರ ಮೊಬೈಲ್-ಫೋನ್ ತಯಾರಿಕೆಗಾಗಿ ಉತ್ಪಾದನಾ-ಸಂಬಂಧಿತ ಪ್ರೋತ್ಸಾಹಕ ಯೋಜನೆ ಪ್ರಾರಂಭಿಸಿದ ನಂತರ 2,50,000ಕ್ಕೂ ಹೆಚ್ಚು ಹೊಸ ಹುದ್ದೆಗಳನ್ನು ಸೃಷ್ಟಿಸಿದೆ.
ಶೇ.70ರಷ್ಟು ಮಹಿಳೆಯರಿಗೆ ಕೆಲಸ;
ವಿಶೇಷವೆಂದರೆ ಶೇ.70ಕ್ಕಿಂತ ಹೆಚ್ಚು ಮಹಿಳೆಯರಿಗೆ ಉದ್ಯೋಗ ನೀಡಿದೆ. ಇದರಲ್ಲಿ ಕೆಲಸ ಕಂಡುಕೊಂಡವರಲ್ಲಿ 19ರಿಂದ 24 ವರ್ಷ ವಯಸ್ಸಿನವರೇ ಹೆಚ್ಚು ಮತ್ತು ಮೊದಲ ಬಾರಿ ಉದ್ಯೋಗಾಕಾಂಕ್ಷಿಗಳೇ ಅಧಿಕ. ವಿವಿಧ ಮಾರಾಟಗಾರರು ಪಿಎಲ್ ಐ ಮತ್ತು ಎಲೆಕ್ಟ್ರಾನಿಕ್ಸ್ ಕಾಂಪೊನೆಂಟ್ ಮ್ಯಾನುಫ್ಯಾಕ್ಚರಿಂಗ್ ಯೋಜನೆಗಳ ಅಡಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಸಲ್ಲಿಸಿದ ವರದಿ ಇದನ್ನು ದೃಢಪಡಿಸಿದೆ.
ಭಾರತದಲ್ಲಿ ಕ್ಯುಪರ್ಟಿನೊ ಪ್ರಧಾನ ಕಚೇರಿ ಹೊಂದಿರುವ ಕಂಪನಿಯ ಎರಡು ಪ್ರಮುಖ ಐಫೋನ್ ಮಾರಾಟಗಾರರಾದ ಟಾಟಾ ಗ್ರೂಪ್ ಮತ್ತು ಫಾಕ್ಸ್ಕಾನ್ ಒಟ್ಟಾಗಿ ಈ ಅವಧಿಯಲ್ಲಿ ಸುಮಾರು 1,40,000 ನೇರ ಉದ್ಯೋಗಗಳನ್ನು ಸೃಷ್ಟಿಸಿವೆ. ಇದು ಮೂಲತಃ ಪಿಎಲ್ಐ ಯೋಜನೆಯಡಿ ಬದ್ಧವಾಗಿದ್ದ 1,18,290 ಉದ್ಯೋಗಗಳನ್ನು ಮೀರಿದೆ. ಸರ್ಕಾರ ಐದು ವರ್ಷಗಳಲ್ಲಿ 2,00,000 ಹೊಸ ನೇರ ಉದ್ಯೋಗಗಳ ಗುರಿ ನಿಗದಿಪಡಿಸಿತ್ತು.
ಉಳಿದಂತೆ 1,10,000 ನೇರ ಉದ್ಯೋಗಗಳನ್ನು ಭಾರತೀಯ, ವಿದೇಶಿ ಮತ್ತು ಜಂಟಿ-ಉದ್ಯಮ ಕಂಪನಿಗಳ ಸಹಕಾರದಿಂದ ರಚಿಸಲಾಗಿದೆ. ಹೆಚ್ಚಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಐಫೋನ್ ಘಟಕಗಳನ್ನು ವೇಗವಾಗಿ ವಿಸ್ತರಿಸಿವೆ.
2022ನೇ ಆರ್ಥಿಕ ವರ್ಷದಲ್ಲಿ ಮೊಬೈಲ್ ಉತ್ಪಾದನೆ ಹೆಚ್ಚಿಸಲು ಪ್ರಾರಂಭಿಸಿದ ಫಾಕ್ಸ್ಕಾನ್, ತನ್ನೆರಡು ಕಾರ್ಖಾನೆಗಳಲ್ಲಿ 70,000ಕ್ಕೂ ಹೆಚ್ಚು ಕಾರ್ಮಿಕರನ್ನು ನೇಮಿಸಿಕೊಂಡಿದೆ. ಮೂರು ಐಫೋನ್ ಸೌಲಭ್ಯಗಳನ್ನು ನಿರ್ವಹಿಸುವ ಟಾಟಾ ಗ್ರೂಪ್ ಸಹ ಸುಮಾರು 72,000 ಜನರಿಗೆ ಉದ್ಯೋಗ ಕೊಟ್ಟು ನೇಮಿಸಿಕೊಂಡಿದೆ.
ಈ ಉದ್ಯಮದ ಮೂಲಗಳ ಪ್ರಕಾರ, ಮೊಬೈಲ್ ತಯಾರಿಕೆಯಲ್ಲಿ ಸರಾಸರಿ ಮಾಸಿಕ ವೇತನವು ಅಧಿಕವಾಗಿದೆ. ಸರಿ ಸುಮಾರು ₹18,000-20, ಏರಿದೆ. ಇದು ಪಿಎಲ್ಐ ಯೋಜನೆ ಜಾರಿಗೆ ಬರುವ ಮೊದಲು ಇದ್ದಂತಹ ಸುಮಾರು 11,000 ರೂ.ಗಳಿಂದ ಹೆಚ್ಚಾಗಿದೆ.
ಪಿಎಲ್ಐ ಅವಧಿ ಅಂತ್ಯದ ವೇಳೆಗೆ ಮೊಬೈಲ್ ತಯಾರಿಕೆ ನೇರ ನೇಮಕಾತಿ ಮಟ್ಟಕ್ಕಿಂತ ಮೂರು ಪಟ್ಟು ಆದರೆ 6 ಲಕ್ಷ ಪರೋಕ್ಷ ಉದ್ಯೋಗವನ್ನು ಸೃಷ್ಟಿಸುತ್ತದೆ ಎಂಬುದು ಸರ್ಕಾರ ಅಂದಾಜಿಸಿತ್ತು. ಆದರೆ, ಸತ್ಕಾರದ ಬೆಂಬಲ, ಪ್ರೋತ್ಸಾಹಿಕ ಯೋಜನೆಗಳಿಂದಾಗಿ ಈ ವಲಯ ನಿರೀಕ್ಷೆ ಮೀರಿ ಯುವ ಸಮುದಾಯಕ್ಕೆ ಉದ್ಯೋಗ ಕಲ್ಪಿಸಿದೆ.
7.5 ಲಕ್ಷ ಪರೋಕ್ಷ ಉದ್ಯೋಗ:
ಆಪಲ್ನ ಮಾತ್ರವೇ ಅಂದಾಜು 7,50,000 ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ ಎನ್ನಲಾಗುತ್ತಿದೆ. 2025ರಲ್ಲಿ (ಜನವರಿಯಿಂದ ಡಿಸೆಂಬರ್ ವರೆಗೆ), ಭಾರತದ ಸ್ಮಾರ್ಟ್ಫೋನ್ ರಫ್ತು $30 ಬಿಲಿಯನ್ ತಲುಪಿದೆ, ಇದರಲ್ಲಿ ಐಫೋನ್ಗಳು $23 ಬಿಲಿಯನ್ ಅಥವಾ ಒಟ್ಟು ಮೊತ್ತದ ಶೇ.7 ರಷ್ಟಿದೆ ಎಂಬುದು ಭಾರತದ ಹೆಗ್ಗಳಿಕೆ.
ಸ್ಮಾರ್ಟ್ಫೋನ್ ರಫ್ತಿನಲ್ಲಿ ಭಾರತ ಒಂದು ದಶಕದ ಹಿಂದೆ ದೇಶದ 167ನೇ ಶ್ರೇಯಾಂಕದಲ್ಲಿತ್ತು. ಆದರೆ, 2015ರಿಂದ 2025ರ ನಡುವಿನ ಅವಧಿಯಲ್ಲಿ ಏಕೈಕ ಅತಿದೊಡ್ಡ ರಫ್ತು ರಾಷ್ಟ್ರವಾಗಿ ಹೊರ ಹೊಮ್ಮಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa