
ಹುಬ್ಬಳ್ಳಿ, 23 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಈಶಾನ್ಯ ರೈಲ್ವೆಯು ಸೂಚಿಸಿರುವಂತೆ, ಗೊಂಡಾ-ಗೋರಖ್ಪುರ ಭಾಗದಲ್ಲಿ ಎಂಜಿನಿಯರಿಂಗ್ ಕಾಮಗಾರಿಗಳು ನಡೆಯುತ್ತಿರುವುದರಿಂದ ರೈಲು ಸಂಖ್ಯೆ 12592 ಯಶವಂತಪುರ–ಗೋರಖ್ಪುರ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲಿನ ಮಾರ್ಗವನ್ನು ಬದಲಾಯಿಸಲಾಗಿದೆ ನೈಋತ್ಯ ರೇಲ್ವೆ ಪ್ರಕಟಣೆ ತಿಳಿಸಿದೆ.
ಫೆಬ್ರವರಿ ೧೩, ಮಾರ್ಚ್ 2 ಮತ್ತು ಮಾರ್ಚ್ 9, 2026 ರಂದು ಯಶವಂತಪುರದಿಂದ ಹೊರಡುವ ರೈಲು ಗೊಂಡಾ ಜಂಕ್ಷನ್, ಬರ್ಹ್ನಿ ಮತ್ತು ಗೋರಖ್ಪುರ ಜಂಕ್ಷನ್ ಮಾರ್ಗವಾಗಿ ಸಂಚರಿಸಲಿವೆ. ಮಾರ್ಗ ಬದಲಾವಣೆಯಿಂದಾಗಿ, ಈ ರೈಲು ತನ್ನ ನಿಗದಿತ ನಿಲ್ದಾಣಗಳಾದ ಮಂಕಾಪುರ ಜಂಕ್ಷನ್ ಮತ್ತು ಓರ್ವಾರಾ ನಿಲ್ದಾಣಗಳಲ್ಲಿ ನಿಲ್ಲುವುದಿಲ್ಲ ಎಂದು ನೈಋತ್ಯ ರೇಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa