ಇತಿಹಾಸ–ಸಂಸ್ಕೃತಿ ಸಾರಿದ ಫಲಪುಷ್ಪ ಮೇಳ
ಚಿತ್ರದುರ್ಗ, 23 ಫೆಬ್ರವರಿ (ಹಿ.ಸ.): ಆ್ಯಂಕರ್: ಚಿತ್ರದುರ್ಗ ಜಿಲ್ಲೆಯ ಇತಿಹಾಸ, ಸಂಸ್ಕೃತಿ ಹಾಗೂ ಸಾಹಿತ್ಯ ಪರಂಪರೆಯನ್ನು ಅನಾವರಣಗೊಳಿಸುವಲ್ಲಿ 33ನೇ ಫಲ-ಪುಷ್ಪ ಪ್ರದರ್ಶನ ಯಶಸ್ವಿಯಾಗಿದೆ ಎಂದು ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಹೇಳಿದರು. ನ
Culture


ಚಿತ್ರದುರ್ಗ, 23 ಫೆಬ್ರವರಿ (ಹಿ.ಸ.):

ಆ್ಯಂಕರ್:

ಚಿತ್ರದುರ್ಗ ಜಿಲ್ಲೆಯ ಇತಿಹಾಸ, ಸಂಸ್ಕೃತಿ ಹಾಗೂ ಸಾಹಿತ್ಯ ಪರಂಪರೆಯನ್ನು ಅನಾವರಣಗೊಳಿಸುವಲ್ಲಿ 33ನೇ ಫಲ-ಪುಷ್ಪ ಪ್ರದರ್ಶನ ಯಶಸ್ವಿಯಾಗಿದೆ ಎಂದು ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಹೇಳಿದರು.

ನಗರದ ವಿ.ಪಿ. ಬಡಾವಣೆಯ ಜಿಲ್ಲಾ ತೋಟಗಾರಿಕೆ ಕಚೇರಿ ಆವರಣದಲ್ಲಿ ನಡೆದ ಮೂರು ದಿನಗಳ ಫಲ-ಪುಷ್ಪ ಪ್ರದರ್ಶನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯ ಹಾಗೂ ಜಿಲ್ಲೆಯ ಸಾಧಕರ ಪರಿಚಯವನ್ನು ಜನರಿಗೆ ಮಾಡಿಕೊಡುವಲ್ಲಿ ಮೇಳ ಮಹತ್ವದ ಪಾತ್ರ ವಹಿಸಿದೆ ಎಂದರು.

ಪ್ರದರ್ಶನದಲ್ಲಿ ಹೆಸರಾಂತ ಸಾಹಿತಿ ಬಿ.ಎಲ್. ವೇಣು ಅವರ ಪ್ರತಿಮೆ, ಕೃತಿಗಳು ಮತ್ತು ಕೊಡುಗೆಗಳನ್ನು ಕಲ್ಲಿನಲ್ಲಿ ಚಿತ್ರಿಸಿರುವ ಕಲಾಕೃತಿ ಗಮನಸೆಳೆದಿದೆ. ಹೂವಿನ ಅಲಂಕಾರದಲ್ಲಿ ನಾಯಕನಹಟ್ಟಿ ಶ್ರೀ ತಿಪ್ಪೇರುದ್ರಸ್ವಾಮಿ ದೇವಸ್ಥಾನ ಹೊರಮಠ–ಒಳಮಠದ ರೂಪಕಗಳು ಮನಮೋಹಕವಾಗಿದ್ದವು. ಐತಿಹಾಸಿಕ ವೀರನಾರಿ ಒನಕೆ ಓಬವ್ವ ಹಾಗೂ ಪರಿಸರ ಹೋರಾಟಗಾರ್ತಿ ಸಾಲುಮರದ ತಿಮ್ಮಕ್ಕ ಅವರ ಚಿತ್ರಣಗಳು ಪ್ರಕೃತಿ ಪ್ರೀತಿ ಹಾಗೂ ಪರಂಪರೆಯ ಸಂದೇಶ ಸಾರಿದವು ಎಂದು ತಿಳಿಸಿದರು.

ರೈತರು ಬೆಳೆದ ಉತ್ತಮ ಬೆಳೆಗಳ ಆಯ್ದ ಪ್ರದರ್ಶನ ಇತರ ರೈತರಿಗೆ ಪ್ರೇರಣೆಯಾಗಿದ್ದು, ಇಂತಹ ಮೇಳಗಳು ಹೊಸ ಪ್ರಯೋಗಗಳಿಗೆ ವೇದಿಕೆಯಾಗುತ್ತವೆ. ವಿವಿಧ ಜಾತಿಯ ಹೂವು, ಹಣ್ಣು ಹಾಗೂ ಅಲಂಕಾರಿಕ ಗಿಡಗಳ ಆಕರ್ಷಕ ಪ್ರದರ್ಶನ ಸಾರ್ವಜನಿಕರನ್ನು ಸೆಳೆದಿತು. ಜಿಲ್ಲೆಯ ವಿವಿಧ ಭಾಗಗಳಿಂದ ರೈತರು, ಮಹಿಳೆಯರು, ಮಕ್ಕಳು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು ಎಂದು ಶಾಸಕರು ಹೇಳಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande