ಕೊಪ್ಪಳ : ಎಸ್.ಜಿ. ಕಾಲೇಜಿನಲ್ಲಿ ಫೆಬ್ರುವರಿ 27ರಂದು `ವಿಕಸಿತ ಭಾರತ ಜಿಲ್ಲಾ ಯುವ ಸಂಸತ್’
ಕೊಪ್ಪಳ, 23 ಫೆಬ್ರವರಿ (ಹಿ.ಸ.) : ಆ್ಯಂಕರ್ : ಭಾರತ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ `ವಿಕಸಿತ ಭಾರತ ಯುವ ಸಂಸತ್ತು– 2026’ರ ಜಿಲ್ಲಾ ಯುವ ಸಂಸತ್ತು ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಫೆಬ್ರವರಿ 27 ರಂದು ನಡೆಯಲಿದ
ಕೊಪ್ಪಳ : ಎಸ್.ಜಿ. ಕಾಲೇಜಿನಲ್ಲಿ ಫೆಬ್ರುವರಿ 27ರಂದು `ವಿಕಸಿತ ಭಾರತ ಜಿಲ್ಲಾ ಯುವ ಸಂಸತ್’


ಕೊಪ್ಪಳ, 23 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಭಾರತ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ `ವಿಕಸಿತ ಭಾರತ ಯುವ ಸಂಸತ್ತು– 2026’ರ ಜಿಲ್ಲಾ ಯುವ ಸಂಸತ್ತು ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಫೆಬ್ರವರಿ 27 ರಂದು ನಡೆಯಲಿದೆ.

ವಿಕಸಿತ್ ಭಾರತ್ ಯುವ ಸಂಸತ್ತು 1 ಲಕ್ಷ ಜಾಗೃತಿ ಯುವ ನಾಯಕರನ್ನು 2047ರ ವೇಳೆಗೆ ಗುರುತಿಸುವ ಉದ್ದೇಶಕ್ಕಾಗಿ ನಡೆಸಲಾಗುತ್ತಿದೆ. ಇದು ಯುವ ಧ್ವನಿಗಳು ರಾಷ್ಟ್ರೀಯ ಚರ್ಚೆಗಳಲ್ಲಿ ತೊಡಗಿಸಿಕೊಳ್ಳುವ ವೇದಿಕೆಯಾಗಿದೆ. ನಾಯಕತ್ವ, ನಾಗರಿಕ ಭಾಗವಹಿಸುವಿಕೆ ಮತ್ತು ನೀತಿ ಚರ್ಚೆಗಳನ್ನು ಬೆಳೆಸುತ್ತದೆ. ವಿದ್ಯಾರ್ಥಿಗಳು ಪ್ರಮುಖ ರಾಷ್ಟ್ರೀಯ ಸಮಸ್ಯೆಗಳ ಕುರಿತು ಚರ್ಚಿಸಲು ಅನುವು ಮಾಡಿಕೊಡುತ್ತದೆ.

ಯುವ ಸಂಸತ್ತಿನ ಸ್ಪರ್ಧೆಗಳಲ್ಲಿ 18 ರಿಂದ 25 ವರ್ಷ ವಯಸ್ಸಿನ ವಿದ್ಯಾರ್ಥಿಗಳು ಭಾಗವಹಿಸಬಹುದು. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳನ್ನು ರಾಜ್ಯಮಟ್ಟಕ್ಕೆ ಕಳುಹಿಸಲಾಗುವುದು. ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಆಯ್ಕೆಯಾದವರು ಕೇಂದ್ರದ ಮಟ್ಟದಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬಹುದಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande