
ಕೊಪ್ಪಳ, 23 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಭಾರತ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ವಿಕಸಿತ ಭಾರತ ಯುವ ಸಂಸತ್ತು– 2026ರ ಅಂಗವಾಗಿ ಜಿಲ್ಲಾ ಯುವ ಸಂಸತ್ ಕಾರ್ಯಕ್ರಮ ನಡೆಸಲು ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಆಯ್ಕೆಗೊಂಡಿದೆ.
ವಿಕಸಿತ್ ಭಾರತ್ ಯುವ ಸಂಸತ್ತು 1 ಲಕ್ಷ ಜಾಗೃತಿ ಯುವ ನಾಯಕರನ್ನು 2047ರ ವೇಳೆಗೆ ಗುರುತಿಸುವ ಉದ್ದೇಶಕ್ಕಾಗಿ ನಡೆಸಲಾಗುತ್ತಿದೆ.
ಇದು ಯುವ ಧ್ವನಿಗಳು ರಾಷ್ಟ್ರೀಯ ಚರ್ಚೆಗಳಲ್ಲಿ ತೊಡಗಿಸಿಕೊಳ್ಳುವ ವೇದಿಕೆಯಾಗಿದೆ. ಇದು ನಾಯಕತ್ವ, ನಾಗರಿಕ ಭಾಗವಹಿಸುವಿಕೆ ಮತ್ತು ನೀತಿ ಚರ್ಚೆಗಳನ್ನು ಬೆಳೆಸುತ್ತದೆ, ವಿದ್ಯಾರ್ಥಿಗಳು ಪ್ರಮುಖ ರಾಷ್ಟ್ರೀಯ ಸಮಸ್ಯೆಗಳ ಕುರಿತು ಚರ್ಚಿಸಲು ಅನುವು ಮಾಡಿಕೊಡುತ್ತದೆ.
ಈ ಕಾರ್ಯಕ್ರಮಕ್ಕೆ 18 ರಿಂದ 25 ವರ್ಷ ವಯಸ್ಸಿನ ಯುವಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಬಹುದು. ಇಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳನ್ನು ರಾಜ್ಯಮಟ್ಟಕ್ಕೆ ಕಳುಹಿಸಲಾಗುವುದು.
ನಂತರ ರಾಜ್ಯ ಮಟ್ಟದಿಂದ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಅಂತಿಮ ಹಂತದಲ್ಲಿ ಭಾರತ ಸಂಸತ್ ಭವನದಲ್ಲಿ ಮಾತನಾಡುವ ಅವಕಾಶ ಪಡೆಯುತ್ತಾರೆ. ಈ ಕಾರ್ಯಕ್ರಮವು ಫೆಬ್ರುವರಿ 27 ರಂದು ಮಹಾವಿದ್ಯಾಲಯದಲ್ಲಿ ನಡೆಯಲಿದ್ದು,. ಈ ಕಾರ್ಯಕ್ರಮಕ್ಕೆ ಸ್ಪರ್ಧಿಯಾಗ ಬಯಸುವ ಅಭ್ಯರ್ಥಿಗಳು ದಿನಾಂಕ 26-02-2026 ರೊಳಗಾಗಿ ಮೈ ಭಾರತ್ (MyBharat) ಪೋರ್ಟಲ್ನಲ್ಲಿ ಕರ್ನಾಟಕ ರಾಜ್ಯ ಹಾಗೂ ಕೊಪ್ಪಳ ನೋಡಲ್ ಸೆಂಟರ್ ಆಯ್ಕೆ ಮಾಡಿನೋಂದಣಿ ಮಾಡಿಕೊಂಡು ಜೀವನದ ಅಮೂಲ್ಯ ಅವಕಾಶ ಪಡೆಯಲು ತಿಳಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್