
ಹಾವೇರಿ, 23 ಫೆಬ್ರವರಿ (ಹಿ.ಸ.):
ಆ್ಯಂಕರ್:
ಗ್ರಾಮೀಣ ಪ್ರದೇಶದಲ್ಲಿ ನರೇಗಾ ಯೋಜನೆಯಿಂದ ಆಗುತ್ತಿರುವ ಭ್ರಷ್ಟಾಚಾರ ತಡೆಯುವ ನಿಟ್ಟಿನಲ್ಲಿ ಜಾರಿಗೆ ತಂದಿರುವ ವಿಬಿ ಜಿ ರಾಮ್ ಜಿ ಯೋಜನೆಯ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿ ಗ್ರಾಮಗಳನ್ನು ಸುರಾಜ್ಯ ಮಾಡಲು ಎಲ್ಲರೂ ಶ್ರಮಿಸೋಣ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇಂದು ಹಾವೇರಿಯ ಶಿವಬಸವ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಾರ್ಟಿ ಹಾವೇರಿ ಜಿಲ್ಲೆಯ ವತಿಯಿಂದ ಏರ್ಪಡಿಸಿದ ವಿಬಿ - ಜಿ ರಾಮ್ ಜಿ ಜನ ಜಾಗರಣ ,ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ವಿಬಿ ಜಿ ರಾಮ್ ಜಿ ಯೋಜನೆ ಮಾಡುವ ಉದ್ದೇಶ ಈ ಕಾರ್ಯಕ್ರಮ ಹಲವಾರು ರೀತಿಯಲ್ಲಿ ಬದಲಾವಣೆಯಾಗುತ್ತ ಬಂದಿದೆ. ಮೊದಲು ಕೂಲಿಗಾಗಿ ಕಾಳು ಯೋಜನೆ ಇತ್ತು. ಆ ಯೋಜನೆಯಲ್ಲಿ ಕೂಲಿ ಮಾಡದೇನೆ ಕೂಲಿ ಪಡೆಯಲಾಗುತ್ತಿತ್ತು. ಗುಲಬರ್ಗ ಜಿಲ್ಲೆಯಲ್ಲಿ ಹಿಂದಿನ ಸಿಎಂ ವಿರೇಂದ್ರ ಪಾಟೀಲ ಅವರ ಹೆಸರಿನಲ್ಲಿ ಕೂಲಿ ಹೆಸರಿನಲ್ಲಿ ಕಾಳು ತೆಗೆದುಕೊಂಡಿದ್ದರು. ಆ ಮೇಲೆ ರೋಜಗಾರ ಯೋಜನೆ, ಆ ಮೇಲೆ ಜವಾಹರ ರೋಜಗಾರ ಅಂದರು. 2004 ರಲ್ಲಿ ಚುನಾವಣೆ ಸಂದರ್ಭದಲ್ಲಿ ಮಹಾತ್ಮಾ ಗಾಂಧಿ ಹೆಸರು ಇಟ್ಟರು. ಸುಮಾರು 25 ವರ್ಷ ಈಗಿನ ನರೇಗಾ ಇದ್ದರೂ ಕೂಡ ಗಾಮೀಣ ಪ್ರದೇಶದ ಅಭಿವೃದ್ಧಿ ಆಗಲಿಲ್ಲ. ನಿರುದ್ಯೋಗವೂ ಕಡಿಮೆಯಾಗಿಲ್ಲ. ಹೀಗಾಗಿ ಇದನ್ನು ಅಮೂಲಾಗ್ರ ಬದಲಾವಣೆ ಮಾಡಬೇಕು. ಈ ಯೋಜನೆಯಲ್ಲಿ ಬಡವರ ಹೊಟ್ಟೆಯ ಮೇಲೆ ಹೊಡೆಯಲಾಗುತ್ತಿದೆ. ಕೂಲಿಕಾರರಿಗೆ ಅನ್ಯಾಯ ಮಾಡಲಾಗುತ್ತಿದ ಅಂತ ಪ್ರಧಾನಿ ನರೇಂದ್ರ ಮೋದಿಯವರು ಅಮೂಲಾಗ ಬದಲಾವಣೆ ತಂದಿದ್ದಾರೆ ಎಂದರು.
*ಭ್ರಷ್ಟಾಚಾರ ನಿಯಂತ್ರಣ*
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರು ಈ ಯೋಜನೆ ಜಾರಿಗೆ ತಂದಾಗ 125 ರೂ. ಕೂಲಿ ಕೊಡುತ್ತಿದ್ದರು. ಆಗ ದೇಶದ ಬಜೆಟ್ 30 ಸಾವಿರ ಕೋಟಿ ಇತ್ತು. ಈಗ 1.30 ಲಕ್ಷ ಕೋಟಿ ಆಗಿದೆ. ನರೇಂದ್ರ ಮೋದಿಯವರು ಬಂದ ಮೇಲೆ ಈ ಯೋಜನೆಗೆ ಸರಾಸರಿ ಪ್ರತಿ ವರ್ಷ 1 ಲಕ್ಷ ಕೋಟಿ ರೂ. ಕೊಡುತ್ತಿದ್ದಾರೆ. ಊರಿನ ಆಸ್ತಿ ನಿರ್ಮಾಣ ಆಗಬೇಕು. ಜನರಿಗೆ ಉದ್ಯೋಗ ಸಿಗಬೇಕು ಎನ್ನುವ ಗುರಿ ಇತ್ತು. ಆ ಗುರಿ ಮುಟ್ಟಲು ಆಗಲಿಲ್ಲ. ಹೀಗಾಗಿ ಇದರಲ್ಲಿ ಇರುವ ಭ್ರಷ್ಟಾಚಾರ ತಡೆಯಲು ಪ್ರಯತ್ನ ಮಾಡಿದ್ದಾರೆ. ಇದಕ್ಕೆಲ್ಲಾ ಏಜೆಂಟರಿದ್ದಾರೆ. ಕೂಲಿ ಕಾರ್ಮಿಕರಿಗೆ 5, 10 ಪರ್ಸೆಂಟ್ ಕೊಟ್ಟು ಇವರು ಹಣ ಪಡೆದುಕೊಳ್ಳುತ್ತಾರೆ. ನಾನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೆ, ನಾನು ಅಲ್ಲಿ ಹೋಗುವ ಮೊದಲು ಈ ಯೋಜನೆ ಅಡಿ ಉತ್ತಮ ಜಿಲ್ಲೆ ಎಂದು ಪ್ರಶಸ್ತಿ ಸಿಕ್ಕಿತ್ತು. ಅಲ್ಲಿ ನರೇಗಾ ಅಕ್ರಮ ಪತ್ತೆ ಹಚ್ಚಿ ಸಿಬಿಐ ತನಿಖೆ ನಡೆಸಲಾಯಿತು. ಗುಲಬರ್ಗದಲ್ಲಿಯೂ ಅದೇ ರೀತಿ ಅವ್ಯವಹಾರ ಆಗಿತ್ತು. ಅದೂ ಕೂಡ ಸಿಬಿಐ ತನಿಖೆ ನಡೆಸಲಾಯಿತು. ಕಾಂಗ್ರೆಸ್ ನಲ್ಲಿ ಪಿಡಿಒ, ತಾಲೂಕಾ ಅಧಿಕಾರಿ, ಏಜೆಂಟ್ ಎಲ್ಲರಿಗೂ ಪಾಲು ಸಿಗುತ್ತಿತ್ತು ಹೀಗಾಗಿ ಅದನ್ನು ಅಮೂಲಾಗ್ರ ಬದಲಾವಣೆ ಮಾಡಲು ಕೂಲಿಕಾರರ ಫೋಟೊ, ಬಯೊಮೆಟ್ರಿಕ್ ಸಿಂಕ್ ಮಾಡಲಾಗುತ್ತಿದೆ. ಈ ಯೋಜನೆಗೆ ಮೊದಲು 100 ದಿನ ಇತ್ತು ಈಗ 125 ದಿನಕ್ಕೆ ಹೆಚ್ಚಿಸಲಾಗಿದೆ. ರಾಜ್ಯ ಸರ್ಕಾರಕ್ಕೆ 25 ದಿನದ ಕೂಲಿ ಕೊಡಿ ಎಂದರೆ ಆಗುವುದಿಲ್ಲ ಎನ್ನುತ್ತಾರೆ ಎಂದು ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa