ಇಚ್ಛಾಶಕ್ತಿ ಇದ್ದಲ್ಲಿ ಪರಿವರ್ತನೆ ಸಾಧ್ಯ : ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು, 23 ಫೆಬ್ರವರಿ (ಹಿ.ಸ.) : ಆ್ಯಂಕರ್ : ಹಳ್ಳಿಯಿಂದ ದಿಲ್ಲಿಯವರೆಗೆ ಆಡಳಿತ ವ್ಯವಸ್ಥೆಯಲ್ಲಿ ಕ್ರಿಯಾಶೀಲತೆ, ಕಾಳಜಿ ಮತ್ತು ಇಚ್ಛಾಶಕ್ತಿ ಇದ್ದಲ್ಲಿ ಮಾತ್ರ ಪರಿವರ್ತನೆ ತರಲು ಸಾಧ್ಯ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಮೈಸೂರು ಜಿಲ್ಲೆಯ ಮೈಸೂರು ತಾಲೂಕಿನ ಹಾರೋ
Gp


ಬೆಂಗಳೂರು, 23 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಹಳ್ಳಿಯಿಂದ ದಿಲ್ಲಿಯವರೆಗೆ ಆಡಳಿತ ವ್ಯವಸ್ಥೆಯಲ್ಲಿ ಕ್ರಿಯಾಶೀಲತೆ, ಕಾಳಜಿ ಮತ್ತು ಇಚ್ಛಾಶಕ್ತಿ ಇದ್ದಲ್ಲಿ ಮಾತ್ರ ಪರಿವರ್ತನೆ ತರಲು ಸಾಧ್ಯ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಮೈಸೂರು ಜಿಲ್ಲೆಯ ಮೈಸೂರು ತಾಲೂಕಿನ ಹಾರೋಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪ್ರಶಂಸಿಸಿರುವ ಅವರು, ನಿರ್ಲಕ್ಷ್ಯಕ್ಕೆ ಒಳಗಾಗಿ ಹಾಳಾಗುವ ಸ್ಥಿತಿಯಲ್ಲಿದ್ದ ಅಂಬೇಡ್ಕರ್ ಸಮುದಾಯ ಭವನವನ್ನು ಸುಸಜ್ಜಿತ ‘ಅರಿವು ಕೇಂದ್ರ’ವಾಗಿ ಪರಿವರ್ತಿಸಿರುವುದು ಮಾದರಿಯ ಕಾರ್ಯ ಎಂದು ತಿಳಿಸಿದ್ದಾರೆ.

ಪಂಚಾಯಿತಿ ವ್ಯಾಪ್ತಿಯಲ್ಲಿ ಬಳಕೆಯಾಗದೆ ಉಳಿದಿದ್ದ ಕಟ್ಟಡಕ್ಕೆ ಹೊಸ ಮೆರುಗು ನೀಡಲಾಗಿದ್ದು, ರೈತರಿಗೆ ಕೃಷಿ ಸಂಬಂಧಿತ ಪುಸ್ತಕಗಳಿರುವ ಪ್ರತ್ಯೇಕ ವಿಭಾಗ, ಮಹಿಳೆಯರು ಮತ್ತು ಮಕ್ಕಳ ಚಟುವಟಿಕೆಗಳಿಗೆ ವಿಶೇಷ ವಿಭಾಗಗಳನ್ನು ಸೃಷ್ಟಿಸಿರುವುದು ಗಮನಾರ್ಹವಾಗಿದೆ. ಗ್ರಾಮ ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಅನುಕೂಲವಾಗುವಂತೆ ಕೇಂದ್ರವನ್ನು ರೂಪಿಸಿರುವುದು ವಿಶೇಷತೆ ಎಂದು ಸಚಿವರು ಹೇಳಿದ್ದಾರೆ.

ಪಿಡಿಒ ಕೆ.ಎಸ್. ಗಣೇಶ್, ಪಂಚಾಯಿತಿ ಅಧ್ಯಕ್ಷ ರೇವಣ್ಣ ಹಾಗೂ ಇತರ ಸದಸ್ಯರ ಕ್ರಿಯಾಶೀಲ ಕಾರ್ಯ ಶ್ಲಾಘನೀಯವಾಗಿದ್ದು, ಇಂತಹ ಮಾದರಿ ಉಪಕ್ರಮಗಳು ಗ್ರಾಮೀಣ ಆಡಳಿತಕ್ಕೆ ದಿಕ್ಕು ತೋರಿಸುವಂತಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande