
ಚಿತ್ರದುರ್ಗ, 23 ಫೆಬ್ರವರಿ (ಹಿ.ಸ.):
ಆ್ಯಂಕರ್:
ಕೇಂದ್ರ ರೈಲ್ವೇ ಇಲಾಖೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರು ಇದೇ ಫೆ.26ರಂದು ಜಿಲ್ಲಾ ಪ್ರವಾಸ ಕೈಗೊಳ್ಳುವರು. ದಾವಣಗೆರೆ ಜಿಲ್ಲೆಯಿಂದ ಆಗಮಿಸುವ ಅವರು ದಾವಣಗೆರೆ-ತುಮಕೂರು ನಡುವಿನ ನೂತನ ನೇರ ರೈಲ್ವೇ ಕಾಮಗಾರಿಗಳ ಪ್ರಗತಿ ವೀಕ್ಷಣೆ ನಡೆಸುವರು.
ಸಚಿವರು ಅಂದು ಬೆಳಿಗ್ಗೆ 9.55 ರಿಂದ ಮಧ್ಯಾಹ್ನ 1.30 ರವರೆಗೆ ತೋಳುಹಣೆಸೆ-ಆನಗೋಡು, ಆನಗೋಡು ರೈಲ್ವೇ ನಿಲ್ದಾಣ, ಆನಗೋಡು-ಹೆಬ್ಬಾಳು, ಹೆಬ್ಬಾಳು-ಭರಮಸಾಗರ, ಭರಮಸಾಗರ-ಚಿತ್ರದುರ್ಗ ನಡುವಿನ ರೈಲ್ವೇ ಹಳಿ ಕಾಮಗಾರಿ ವೀಕ್ಷಿಸುವರು. ನಂತರ ಚಿತ್ರದುರ್ಗ ಪ್ರವಾಸಿ ಮಂದಿರದಲ್ಲಿ ಸ್ವಲ್ಪ ಸಮಯ ತಂಗುವ ಅವರು ಮಧ್ಯಾಹ್ನ 2.30ಕ್ಕೆ ಚಿತ್ರದುರ್ಗದಿಂದ ತುಮಕೂರಿಗೆ ತೆರಳುವರು ಎಂದು ಸಚಿವರ ಪ್ರವಾಸ ಕಾರ್ಯಕ್ರಮದಲ್ಲಿ ತಿಳಿಸಲಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa